ಮೋಕ್ಷಾ ಅವತಾರದಲ್ಲಿ ಜಾನಕಿ ಟೀಚರ್ : ನೀವ್ಯಾಕೆ ನಾಯಕಿ ಆಗಬಾರದಿತ್ತು ಎಂದ ಫ್ಯಾನ್ಸ್..!
ಜೋಡಿಹಕ್ಕಿ ಧಾರಾವಾಹಿಯಲ್ಲಿ ಟೀಚರಮ್ಮ ಆಗಿ ಎಲ್ಲರ ಮನಗೆದ್ದ ನಟಿ ಈಗ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ನಲ್ಲಿ ವಿಲನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಝಿ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಶುರುವಾಗಿದೆ. ಅದೇ ಶ್ರಾವಣಿ ಸುಬ್ರಮಣ್ಯ. ಈ ಧಾರಾವಾಹಿ ಅದಾಗಲೇ ತೆಲುಗಿನಲ್ಲಿ ಹಿಟ್ ಆಗಿದ್ದು, ಕನ್ನಡಕ್ಕೆ ರಿಮೇಕ್ ಆಗಿದೆ. ಅಮ್ಮಾಯಿಗಾರು ಎಂಬ ತೆಲುಗು ಧಾರಾವಾಹಿಯೇ ಕನ್ನಡದಲ್ಲಿ ಶ್ರಾವಣಿ ಸುಬ್ರಮಣ್ಯ ಆಗಿ ಮೂಡಿ ಬರುತ್ತಿದೆ. ಇದರಲ್ಲಿ ಈಗ ನಟಿ ಚೈತ್ರಾ ರಾವ್ ಅವರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕಂಪ್ಲೀಟ್ ವಿಲನ್ ಶೇಡ್ ನಲ್ಲಿ ಚೈತ್ರಾ ರಾವ್
ಶ್ರಾವಣಿ ಸುಬ್ರಮಣ್ಯದಲ್ಲಿ ನಾಯಕಿಯ ಕ್ರಿಮಿನಲ್ ಅತ್ತೆ ಆಗಿರುವ ವಿಜಯಳ ಮಗಳು ಮೋಕ್ಷ ಪಾತ್ರದಲ್ಲಿ ನಟಿ ಚೈತ್ರಾ ರಾವ್ ಅವರು ನಟಿಸುತ್ತಿದ್ದಾರೆ. ಈಗಾಗಲೇ ಇವರ ಪಾತ್ರ ಧಾರಾವಾಹಿಯಲ್ಲಿ ರಿವೀಲ್ ಆಗಿದೆ. ನಾಯಕಿ ಶ್ರಾವಣಿನ ದ್ವೇಷಿಸುವ ಮೋಕ್ಷಳಿಗೆ ಹುಡುಗಿ ನೋಡುವ ಶಾಸ್ತ್ರ ನಡೆದಿದೆ. ಮನೆಗೆ ಬಂದ ಮೋಕ್ಷಾಳನ್ನು ನೋಡಲು ಹುಡುಗನ ಕಡೆಯವರು ಆಗಮಿಸಿದ್ದಾರೆ. ಆದರೆ ಶ್ರಾವಣಿ ಮಾಡಿದ ಸಣ್ಣ ಎಡವಟ್ಟಿನಿಂದ ಹುಡುಗನ ಮನೆಯವರು ಕೋಪಗೊಂಡಿದ್ದು, ವಾಪಸ್ ಹೋಗಿದ್ದಾರೆ. ಮೋಕ್ಷ ಸ್ಲಿಮ್ ಆಗಿ, ಇನ್ನಷ್ಟು ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾಳೆ. ಆದರೆ, ಎಲ್ಲರೂ ಚೈತ್ರಾ ಅವರೇ ಈ ಧಾರಾವಾಹಿಯ ನಾಯಕಿ ಆಗಬೇಕಿತ್ತು ಎಂದು ಬಯಸಿದ್ದಾರೆ.

ನಾಟಕಗಳ ಮೂಲಕ ಬಣ್ಣ ಹಚ್ಚಿದ ನಟಿ
ನಟಿ ಚೈತ್ರಾ ರಾವ್ ಅವರು 50ಕ್ಕೂ ಅಧಿಕ ನಾಟಕಗಳನ್ನು ಮಾಡಿ ಬಣ್ಣದ ಲೋಕವೇ ಸರಿ ಎಂದು ಕೆಲಸಕ್ಕೆ ರಿಸೈನ್ ಮಾಡಿ ಕಿರುತೆರೆಗೆ ಎಂಟ್ರಿಕೊಟ್ಟರು. ಉದಯ ಟಿವಿಯಲ್ಲಿ ನಾಗಾಭರಣ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಮನಸೇ ಓ ಮನಸೇ' ಧಾರಾವಾಹಿಯಲ್ಲಿ ಚೈತ್ರಾ ಅವರು ಮೊದಲು ನಟಿಸಿದರು. 'ರಾಗ ಅನುರಾಗ', 'ಜೋಡಿಹಕ್ಕಿ' ಧಾರಾವಾಹಿಗಳಲ್ಲಿ ಲೀಡ್ ಪಾತ್ರದಲ್ಲಿ ನಟಿ ಚೈತ್ರಾ ರಾವ್ ಅವರು ಕಾಣಿಸಿಕೊಂಡರು. ನಂತರ ಕೊಂಚ ಬ್ರೇಕ್ ಪಡೆದ ನಟಿ ಕಳೆದ ವರ್ಷ ಪ್ರಸಾರವಾದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರಾಧನಾ ಆಗಿ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ವಿಲನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಿರುತೆರೆ ಜೊತೆಗೆ ಹಿರಿತೆರೆಯ ನಂಟು
ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಚೈತ್ರಾ ರಾವ್ ಅವರನ್ನು ಹುಡುಕಿಕೊಂಡು ಬರುತ್ತಲೇ ಇದ್ದವು. ಮಾಸ್ಟರ್ ಕಿಶನ್ ಅವರ ನಿರ್ದೇಶನದ ಕೇರ್ ಆಫ್ ಫುಟ್ ಪಾತ್ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 'ಧ್ವನಿ' ಎಂಬ ಆರ್ಟ್ ಫಿಲಂನಲ್ಲಿಯೂ ಈಕೆ ಕಾಣಿಸಿಕೊಂಡಿದ್ದರು. ಮುಂದೆ 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ಜಾನಕಿ ಟೀಚರ್ ಆಗಿ ಕಾಣಿಸಿಕೊಂಡ ಚೈತ್ರ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾಗಿದ್ದರು. ನಂತರ ಆರಾಧನಾ ಆಗಿ ಕಿರುತೆರೆಯಲ್ಲಿ ಮೋಡಿ ಮಾಡಿದರು.

ಸಿನಿಮಾದಲ್ಲಿ ನಟಿಸಿದ ಚೈತ್ರಾ ರಾವ್
ಸಿನಿಮಾದಲ್ಲಿಯೂ ಸದ್ದು ಮಾಡಿದ ಚೆಲುವೆ 'ಮಾಯಾ ಬಜಾರ್', 'ಟಾಮ್ ಆ್ಯಂಡ್ ಜೆರ್ರಿ' ಸಿನಿಮಾಗಳಲ್ಲಿ ಲೀಡ್ ರೋಲ್ ನಲ್ಲಿ ಮಿಂಚಿದವರು. ಚೈತ್ರ ರಾವ್ ಗೆ ಧಾರಾವಾಹಿ ಆದ ಮೇಲೆ ಸಿನಿಮಾ, ಸಿನಿಮಾ ನಂತರ ಧಾರವಾಹಿ ಹೀಗೆ ಎರಡು ಕ್ಷೇತ್ರದಲ್ಲೂ ಅವಕಾಶಗಳು ಕರೆಗಳು ಬರುತ್ತಲೇ ಇರುತ್ತವೆ. ಒಳ್ಳೊಳ್ಳೆಯ ಕಥೆಗಳ ಜೊತೆಗೆ ಒಳ್ಳೊಳ್ಳೆಯ ಪಾತ್ರಗಳಿಗೆ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ವಿಲನ್ ಜೊತೆಗೆ ಪಾಸಿಟಿವ್ ಶೇಡ್ ನಲ್ಲೂ ಕಾಣಿಸಿಕೊಂಡಿದ್ದರು. ಆದರೆ, ಶ್ರಾವಣಿ ಸುಬ್ರಮಣ್ಯದಲ್ಲಿ ಕಂಪ್ಲೀಟ್ ವಿಲನ್ ಆಗಿ ನಟಿಸುತ್ತಿದ್ದಾರೆ.


Click it and Unblock the Notifications











