»   » ಹೊಸ ರೂಪದಲ್ಲಿ ಜೀ ಕನ್ನಡ 'ಪುನರ್ ವಿವಾಹ'

ಹೊಸ ರೂಪದಲ್ಲಿ ಜೀ ಕನ್ನಡ 'ಪುನರ್ ವಿವಾಹ'

Posted By:
Subscribe to Filmibeat Kannada

'ಜೀ ಕನ್ನಡ'ದ ಬಹು ಜನಪ್ರಿಯ ಧಾರಾವಾಹಿ 'ಪುನರ್ ವಿವಾಹ' 350 ಎಪಿಸೋಡುಗಳನ್ನು ಪೂರೈಸಿ ಈಗ ಹೊಸ ಅಧ್ಯಾಯ ಶುರು ಮಾಡುತ್ತಿದೆ. ಇದೇ ಜುಲೈ 28ರ ಸೋಮವಾರ ಈ ಧಾರಾವಾಹಿ ಇಪ್ಪತ್ತು ವರುಷ ಮುಂದಕ್ಕೆ ಜಿಗಿದು ಸೂರ್ಯ-ಆರತಿ ಹಾಗೂ ಅವರ ಮಕ್ಕಳ ಹೊಸ ತಲೆಮಾರಿನ ಕತೆ ಪ್ರಸಾರವಾಗಲಿದೆ.

ಕನ್ನಡದ ಕಿರುತೆರೆಯ ಬಹು ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಷಾ ನಾಯಕ್ ಅವರು ಆರತಿಯ ಪಾತ್ರದಲ್ಲಿ ಮುಂದುವರಿದರೆ, 'ಜೋಗುಳ', 'ಪಲ್ಲವಿ ಅನುಪಲ್ಲವಿ' ಖ್ಯಾತಿಯ ಮಧು ಹೆಗಡೆ ಅವರು ಸೂರ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ದಂಪತಿಯ ಬೆಳೆದು ನಿಂತಿರುವ ಮಕ್ಕಳಾಗಿರುವ ಆದಿತ್ಯ-ಆರ್ಯನ್-ಸಾಕ್ಷಿ ಪಾತ್ರಗಳಲ್ಲಿ, ಚಂದನ್-ಪ್ರಜ್ವಲ್-ಬೃಂದಾ ಎಂಬ ಹೊಸ ಭರವಸೆಯ ಮುಖಗಳ ಪರಿಚಯ ಆಗುತ್ತಿದೆ. [ಜೀ ಕನ್ನಡದಲ್ಲಿ ಶ್ರುತಿ ನಾಯ್ಡು 'ಪುನರ್ ವಿವಾಹ']


ಹೊಸ ಕತೆಯಲ್ಲಿ ಸೂರ್ಯ ಶಾಸಕ ಆಗಿದ್ದರೆ, ಆರತಿ ಸ್ಕೂಲ್ ಟೀಚರ್ ಆಗಿರ್ತಾಳೆ. ಮಗ ಆದಿತ್ಯ ಉಂಡಾಡಿ ಗುಂಡನಾಗಿ ಪುಂಡು ಪೋಕರಿಯಾಗಿದ್ದರೆ, ಆರ್ಯನ್ ಪೊಲೀಸ್ ಅಧಿಕಾರಿಯಾಗಿ ಹೊರಬರ್ತಾ ಇದ್ದಾನೆ. ಮಗಳು ಸಾಕ್ಷಿ ಎಂಎಸ್ಸಿ ಓದ್ತಿದಾಳೆ.

ಸಣ್ಣ ವಯಸ್ಸಿಗೆ ದೊಡ್ಡ ವಯಸ್ಸಿನ ಆರತಿ-ಸೂರ್ಯರ ಪಾತ್ರ ಪೋಷಣೆ ಮಾಡುತ್ತಿರುವ ಅನುಷಾ ಮತ್ತು ಮಧು ಹೆಗಡೆ, "ನಾವೀಗ ಇಪ್ಪತ್ತೈದು ವರ್ಷ ವಯಸ್ಸಿನ ಮಕ್ಕಳ ಅಪ್ಪ ಅಮ್ಮ ಆಗಿದ್ದೇವೆ. ನಿನ್ನೆ ನಾವೇ ಆ ವಯಸ್ಸಲ್ಲಿದ್ದೆವು! ಈಗ ಐವತ್ತರ ವಯಸ್ಸಿಗೆ ಜಿಗಿಯಬೇಕಿದೆ. ಆದರೆ ನಟರಾಗಿ ಇದು ತುಂಬಾ ಸವಾಲಿನ ಮತ್ತು ಖುಶಿಯ ಕೆಲಸ. ನಮ್ಮದಲ್ಲದ ಹಾವಭಾವ, ದನಿ, ಗತ್ತುಗೈರತ್ತು ತೋರಿಸಿಕೊಂಡು ದೊಡ್ಡವರಂತೆ ಇದ್ದು ಬಿಡೋದು ತುಂಬಾ ಮಜಾ ಕೊಡ್ತಿದೆ" ಎನ್ನುತ್ತಾರೆ.

"ಇರೋ ಕತೆಯನ್ನು ಎಳೆಯೋದರಲ್ಲಿ ನಮಗೆ ಉತ್ಸಾಹ ಇಲ್ಲ. ಅದಕ್ಕಾಗಿ 350 ಎಪಿಸೋಡುಗಳಿಗೆ ಆರತಿ-ಸೂರ್ಯರ ಪ್ರಯಾಣ ನಿಲ್ಲಿಸಿ, ಅವರ ಮೂವರು ಮಕ್ಕಳ ಕತೆ ಶುರು ಮಾಡಿದ್ದೇವೆ. ನಮ್ಮ ರೊಮ್ಯಾಂಟಿಕ್ ಜೋಡಿ ಆರತಿ-ಸೂರ್ಯ ಸದ್ಯಕ್ಕೆ ಮುನಿಸಿಕೊಂಡು ದೂರ ದೂರ ಆಗಿದ್ದಾರೆ. ದೊಡ್ಡವನಾಗಿರೋ ಆದಿತ್ಯ, ಅಮ್ಮ ಆರತಿ ಜತೆ ಇದ್ದರೆ, ಸಾಕ್ಷಿ-ಆರ್ಯನ್ ಅಪ್ಪ ಸೂರ್ಯನ ಜತೆಗಿದ್ದಾರೆ.

Aaditya and Aaryan

ದೊಡ್ಡವರಾಗಿರೋ ಆದಿತ್ಯ-ಆರ್ಯನ್ ಗಂತೂ ಪರಸ್ಪರ ಪರಿಚಯವೂ ಇಲ್ಲ, ತಾವು ಒಂದೇ ತಾಯಿಯ ಮಕ್ಕಳು ಅನ್ನೋದೂ ಗೊತ್ತಿಲ್ಲ. ಆದರೆ ಈ ಮೂವರು ಮಕ್ಕಳು ಒಂದಾಗಿ ಅಪ್ಪ ಅಮ್ಮನನ್ನೂ ಹೇಗೆ ಒಂದಾಗಿಸ್ತಾರೆ ಅನ್ನೋದೇ ನಮ್ಮ ಹೊಸ ಕತೆ. ಈ ಕತೆಯ ಪ್ರಯಾಣ ಮೊದಲಿಗಿಂತ ಹೆಚ್ಚು ಮಜಾವನ್ನು ವೀಕ್ಷಕರಿಗೆ ನೀಡುತ್ತದೆ" ಅಂತಾರೆ ಜೀ ಕನ್ನಡ ಪ್ರೊಗ್ರಾಮಿಂಗ್ ಹೆಡ್ ರಾಘವೇಂದ್ರ ಹುಣಸೂರು.

ಶ್ರುತಿ ನಾಯ್ಡು ನಿರ್ದೇಶನದ ಈ 'ಪುನರ್ ವಿವಾಹ' ಧಾರಾವಾಹಿ ಜುಲೈ 28ರಿಂದ ಹೊಸ ರೂಪದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. 'ಹೊಸ ಬದುಕು ಹೊಸ ಪ್ರೀತಿ' ಎಂಬುದು ಧಾರಾವಾಹಿಯ ಟ್ಯಾಗ್ ಲೈನ್. (ಒನ್ಇಂಡಿಯಾ ಕನ್ನಡ)

English summary
Kannada mega soap 'Punar Vivaha' narrative gets fresh twist and being aired on Zee Kannada from 28th July, 2014. The serial starts at 9.30 pm from Monday to Friday. Serial directed and produced by Shruti Naidu.
Please Wait while comments are loading...