ಸೊಸೆ ಮದುವೆ ನೆರವೇರಿಸಿದ ಸೀತಾರಾಮಯ್ಯ

ಈ ಕಾರಣಕ್ಕಾಗಿಯೇ ಧಾರಾವಾಹಿಯ ಮದುವೆಯನ್ನು ನಿಜವಾಗಿಯೂ ಮದುವೆ ಮಾಡಿದಷ್ಟೇ ಮುತುವರ್ಜಿಯಿಂದ ವಿಜೃಂಭಣೆಯಿಂದ ಮಾಡಲಾಗುತ್ತದೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ ಸೊಸೆಯಲ್ಲಿ ಅದ್ದೂರಿ ಮದುವೆ ನಡೆಯಲಿದೆ. ಆ ವಿಶೇಷ ಸಂಚಿಕೆಗಳು ಜೂನ್ 15ರ ವರೆಗೆ ಮುಂದುವರೆಯಲಿವೆ.
ಸೀತಾರಾಮಯ್ಯನವರ ಮನೆಯ ಸೊಸೆಯಾಗಿ ಬರುತ್ತಿರುವವಳು ಗಾಯತ್ರಿ ಎಂಬ ಹೆಸರಿನಲ್ಲಿ ಅಂಜಲಿ ಎಂಬ ಹುಡುಗಿ. ಈಕೆ ಹೀಗೆ ಮಾಡಲು ಬಲವಾದ ಕಾರಣವಿದೆ. ನಿಜವಾಗಿ ಸೊಸೆಯಾಗಬೇಕಾದ ಗಾಯತ್ರಿ ಬೇರೆಲ್ಲೋ ಇದ್ದಾಳೆ. ಅವಳೂ ಮದುವೆಯ ಸಮಯಕ್ಕೆ ಬಂದು ತಲುಪುತ್ತಾಳಾ? ಎನ್ನುವ ಕುತೂಹಲದ ಘಟ್ಟದಲ್ಲಿ ಧಾರಾವಾಹಿ ನಿಂತಿದೆ.
ಜೂನ್ 8 ರಂದು ಹರ್ಷಿಕಾ ಪೂಣಚ್ಚ, ನವೀನ್ ಕೃಷ್ಣ, ನೀತು ಜೂನ್ 9 ರಂದು ಶ್ರೀನಗರ ಕಿಟ್ಟಿ, ರೂಪಿಕಾ ಮುಂತಾದ ಕಲಾವಿದರು ವಿಶೇಷ ಅತಿಥಿಗಳಾಗಿ ಆಗಮಿಸಿ ಹೆಜ್ಜೆ ಹಾಕಿ ಮದುವೆ ಮನೆಯ ಸಂಭ್ರಮವನ್ನು ಹೆಚ್ಚಿಸಲಿದ್ದಾರೆ.
ಹಿಂದಿನ ಕಾಲದಲ್ಲಿ ಮದುವೆಗಳು ಎಂಟು-ಹತ್ತು ದಿನಗಳ ಕಾಲ ವೈಭವದಿಂದ ನಡೆಯುತ್ತಿತ್ತು ಎಂದು ಹೇಳುವುದನ್ನು ಕೇಳಿದ್ದೇವೆ. ಅದೇ ಥರಹ ಮದರಂಗಿ, ಅರಿಷಿಣ ಶಾಸ್ತ್ರದಿಂದ ಹಿಡಿದು ಇತರೆ ಶಾಸ್ತ್ರಗಳನ್ನೂ ಕೂಡಿಕೊಂಡು ಸಂಪ್ರದಾಯಬದ್ಧವಾಗಿ ಮದುವೆಯನ್ನು ಮಾಡಿದ ಸಂತಸದಲ್ಲಿದ್ದಾರೆ ನಿರ್ದೇಶಕ ರಾಮ್ ಜಿ.
ಕೂಡುಕುಟುಂಬದ ಪ್ರೀತಿ-ಮೌಲ್ಯವನ್ನು ಸಾರುವ ಕತೆಯಿಂದ ಪ್ರಾರಂಭವಾದ ಸೊಸೆಯ ಮದುವೆ ಸಂಚಿಕೆಗಳನ್ನು ವೀಕ್ಷಿಸಿದರೆ ಅಂಥಾ ಒಂದು ಮದುವೆಯಲ್ಲಿ ಪಾಲ್ಗೊಂಡ ಅನುಭವವಾಗದೇ ಇರದು ಎನ್ನುವುದು ಜೀ ಕನ್ನಡವಾಹಿನಿಯ ಮುಖ್ಯಸ್ಥರಾದ ಡಾ.ಗೌತಮ್ ಮಾಚಯ್ಯ ರವರ ಅಭಿಪ್ರಾಯ.
ಮದುವೆ ಸಂಭ್ರಮದೊಂದಿಗೆ ಸಂಭವಿಸುವ ತಿರುವುಗಳೇನು? ಮದುವಣಗಿತ್ತಿಯಾಗಿ ಹಸೆಮಣೆಯಲ್ಲಿ ಕುಳಿತುಕೊಳ್ಳುವವರು ಯಾರು? ಇತ್ಯಾದಿ ರೋಚಕತೆಯೂ ಸಮ್ಮಿಳಿತವಾಗಿ ಸೊಸೆ ಧಾರಾವಾಹಿ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸುವುದರಲ್ಲಿ ಸಂಶಯವೇ ಇಲ್ಲ ಎಂದು ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ.
ಒಗ್ಗಟ್ಟು ಮನೆ ತುಂಬುವ ಸೊಸೆ ಯಾರು? ಅವಳು ಆ ಮನೆಗೆ ಸೌಭಾಗ್ಯವನ್ನು ತರ್ತಾಳಾ? ಎನ್ನುವುದು ಗೊತ್ತಾಗಬೇಕಾದರೆ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಸೊಸೆ ಧಾರಾವಾಹಿಯನ್ನು ತಪ್ಪದೇ ನೋಡಿ... (ಒನ್ ಇಂಡಿಯಾ ಕನ್ನಡ)


Click it and Unblock the Notifications











