'ಶ್ರೀ ರಾಘವೇಂದ್ರ ಮಹಾತ್ಮೆ'ಯಲ್ಲಿ ಲಕ್ಷ್ಮೀದೇವಿ ಯಾರಿರಬಹುದು? ಮತ್ತದೇ ರಾಯರ ಅವತಾರದಲ್ಲಿ ಕಂಡ ನಟ
ಹಲವು ದಿನಗಳಿಂದ ಜೀ ಕನ್ನಡ ವಾಹಿನಿಯೂ ರಾಯರ ಬಗ್ಗೆ ಜನರಿಗೆ ತಿಳಿಸಿಕೊಡುತ್ತಲೇ ಇದೆ. ಕಳೆದ ವರ್ಷವೇ 'ಶ್ರೀ ರಾಘವೇಂದ್ರ ಮಹಾತ್ಮೆ' ಹೆಸರಿನಲ್ಲಿ ಧಾರಾವಾಹಿಯ ಬಗ್ಗೆ ಜೀ ಕನ್ನಡ ವಾಹಿನಿ ಅನೌನ್ಸ್ ಮಾಡಿತ್ತು. ಆದರೆ, ಇನ್ನೂ ಈ ಧಾರಾವಾಹಿ ಪ್ರಸಾರದ ಯಾವುದೇ ಸುಳಿವು ನೀಡಿರಲಿಲ್ಲ. ಅತೀ ಶೀಘ್ರದಲ್ಲಿ ಎಂದು ಹೇಳುತ್ತಲೇ ಇತ್ತು. ಇದೀಗ ಅತೀ ಎಂಬುದನ್ನು ತೆಗೆದು ಹಾಕಿ ಶೀಘ್ರದಲ್ಲಿ ಎಂದು ಹೇಳಿದೆ.
ವಾಹಿನಿ ವೀಕ್ಷಕರಿಗೆ ರೋಮಾಂಚನವಾಗುವಂತೆ ಪ್ರೊಮೋ ಪ್ರಸಾರ ಮಾಡಿದೆ. ಸಿನಿಮಾ ಟ್ರೈಲರ್ ಮಾದರಿಯಲ್ಲಿ ಪ್ರೊಮೋವನ್ನು ರಿಲೀಸ್ ಮಾಡಿದೆ.

ಪ್ರೊಮೋ ನೋಡಿದ ಪ್ರತಿಯೊಬ್ಬರೂ ಕೂಡ ಸದ್ಯ ಧಾರಾವಾಹಿ ಯಾವಾಗ ಶುರುವಾಗುತ್ತದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಧಾರಾವಾಹಿಯನ್ನು ನೋಡಲು ಕಾದು ಕುಳಿತಿದ್ದಾರೆ.
ಏನಿದೆ ಪ್ರೊಮೋದಲ್ಲಿ..
ಪ್ರೊಮೋದಲ್ಲಿ ಅಖಂಡ ಬ್ರಹ್ಮಾಂಡ ಕ್ಷೀರಸಾಗರದಲ್ಲಿ ಪವಡಿಸಿರುವ ಶ್ರೀ ಹರಿಯೇ ಈ ಜಗದ ಜನನಕ್ಕೆ ಕಾರಣ. ವಿಷ್ಣುವಿನ ಅಂಶದಿಂದ ಜನಿಸಿದ ಶಂಕುಕರ್ಣ. ಹರಿ ಭಕ್ತಿಯ ಹರಿಕಾರ ಭಕ್ತಪ್ರಹ್ಲಾದ. ಮಧ್ವ ಪರಂಪರೆಯ ಮೇರು ಶಿಖರ ಶ್ರೀ ವ್ಯಾಸ ರಾಯರು. ತಿರುಪತಿ ಮುಚ್ಚಿದ ಬಾಗಿಲು ತೆರೆದು ಅನಂತ ಜ್ಯೋತಿಯ ಪ್ರಖರತೆಯನ್ನು ತಾವೇ ಸ್ವೀಕರಿಸಿದರು. ಮನುಕುಲದ ಕಷ್ಟ ನೀಗಿಸಲು ಕಲಿಯುಗದ ಕಾಮಧೇನುವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನನ್ಯ ರೂಪದ ಅನರ್ಥ್ಯ ಚರಿತೆ. ಶ್ರೀ ರಾಘವೇಂದ್ರ ಮಹಾತ್ಮೆ ಎಂದು ರಾಯರ ಬಗ್ಗೆ ತಿಳಿಸಲಾಗಿದೆ. ಶೀಘ್ರದಲ್ಲಿ ಧಾರಾವಾಹಿ ಪ್ರಸಾರವಾಗಲಿದ್ದು, ರಾಯರ ಪಾತ್ರವನ್ನು ಮಾಡುತ್ತಿರುವವರು ಯಾರು ಎಂಬುದೂ ಗೊತ್ತಾಗಿದೆ.
ರಾಯರ ಅವತಾರದಲ್ಲಿ ಆ ನಟ
ನಟ ಪರೀಕ್ಷಿತ್ ಸರ್ಪಶಯನ ಅವರು ಮತ್ತೆ ರಾಯರ ಅವತಾರವೆತ್ತಿದ್ದಾರೆ. ರಾಯರ ಪಾತ್ರದಲ್ಲಿ ನಟ ಪರೀಕ್ಷಿತ್ ಅವರು ಕಾಣಿಸಿಕೊಂಡಿದ್ದಾರೆ. 2010ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಶ್ರೀ ಗುರು ರಾಘವೇಂದ್ರ ವೈಭವ' ಧಾರಾವಾಹಿ ಪ್ರಸಾರ ಕಂಡಿತ್ತು. ಆಗಲೂ ಈ ಧಾರಾವಾಹಿಯು ಜನ ಮೆಚ್ಚುಗೆ ಪಡೆದಿತ್ತು. ಅದರಲ್ಲಿ ರಾಯರ ಪಾತ್ರದಲ್ಲಿ ನಟಿಸಿದ್ದು, ಇದೇ ನಟ ಪರೀಕ್ಷಿತ್ ಸರ್ಪಶಯನ. 15 ವರ್ಷಗಳ ಬಳಿಕ ಈಗ ಮತ್ತೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿಯೂ ನಟ ಪರೀಕ್ಷಿತ್ ಸರ್ಪಶಯನ ಅವರೇ ರಾಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಿಂದ ಅಭಿಮಾನಿಗಳು ಕೂಡ ಖುಷಿ ಪಟ್ಟಿದ್ದಾರೆ.
ಪಾತ್ರಧಾರಿಗಳಿಗಾಗಿ ಹುಡುಕಾಡಿದ ವಾಹಿನಿ
ನಟ ಪರೀಕ್ಷಿತ್ ಅವರು ಆಕಾಶ ದೀಪ, ಶ್ರೀ ರಾಘವೇಂದ್ರ ವೈಭವ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೆ ರಾಯರ ಅವತಾರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಭಿಮಾನಿಗಳು ಹ್ಯಾಪಿ ಆಗಿದ್ದಾರೆ. ಎಲ್ಲರೂ ಪರೀಕ್ಷಿತ್ ಅವರ ಫೊಟೋಗೆ ರಾಯರನ್ನೇ ನೋಡಿದಂತೆ ಆಯ್ತು ಎಂದು ಕಮೆಂಟ್ ಗಳನ್ನೂ ಮಾಡಿದ್ದಾರೆ. ಇನ್ನು ಕೆಲ ತಿಂಗಳ ಹಿಂದೆ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಗಾಗಿ ಪಾತ್ರಧಾರಿಗಳನ್ನು ಹುಡುಕಲು ಆಡಿಷನ್ ಕೂಡ ಜೀ ಕನ್ನಡ ವಾಹಿನಿ ಮಾಡಿದೆ.
ಸಿರಿ ಇನ್ಮುಂದೆ ಲಕ್ಷ್ಮೀದೇವಿ
ಇನ್ನು ಈ ಧಾರಾವಾಹಿಯಲ್ಲಿ ಲಕ್ಷ್ಮೀದೇವಿ ಪಾತ್ರದಲ್ಲಿ ನಟಿಸುತ್ತಿರುವ ಕಲಾವಿದೆ ಬಗ್ಗೆಯೂ ತಿಳಿದು ಬಂದಿದೆ. ಹಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಯುಗಳಗೀತೆ ಧಾರಾವಾಹಿಯಲ್ಲಿ ಸಿರಿ ಪ್ರಹ್ಲಾದ್ ನಟಿಸಿದ್ದರು. ಇದೀಗ ಇವರು ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ಲಕ್ಷ್ಮೀದೇವಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ನಟಿ ಸಿರಿ ಪ್ರಹ್ಲಾದ್ ಅವರು ಲಾ, ಇಷ್ಟ, ಬಡ್ಡೀಸ್, ಒಂದು ಶಿಕಾರಿಯ ಕಥೆ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.


Click it and Unblock the Notifications











