'WWR'ಗೆ ದ್ರಾವಿಡ್ ಕರೆ ತರಲು ಅಭಿಯಾನ ಶುರು ಮಾಡಿದ ಜೀ ಕನ್ನಡ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ರಾಹುಲ್ ದ್ರಾವಿಡ್ ಬರಬೇಕು ಎನ್ನುವುದು ಸಾಕಷ್ಟು ಜನರ ಆಸೆ. ದ್ರಾವಿಡ್ ರನ್ನು ಸಾಧಕರ ಸೀಟ್ ಮೇಲೆ ಕೂರಿಸಿ, ಅವರ ಜೀವನದ ಹಾದಿಯನ್ನು ತಿಳಿಯಬೇಕು ಎನ್ನುವುದು ಎಲ್ಲರ ಬಯಕೆ.

'ವೀಕೆಂಡ್ ವಿತ್ ರಮೇಶ್' ಮೊದಲ ಸೀಸನ್ ನಿಂದಲೇ ಜೀ ಕನ್ನಡ ವಾಹಿನಿ ರಾಹುಲ್ ದ್ರಾವಿಡ್ ರನ್ನು ಕರೆತರಲು ಪ್ರಯತ್ನ ಮಾಡುತ್ತಿದೆಯಂತೆ. ಆದರೆ, ಅದು ಮೂರು ಸೀಸನ್ ಕಳೆದರೂ ಸಾಧ್ಯ ಆಗುತ್ತಿಲ್ಲ. ಪ್ರತಿ ಬಾರಿ ಪತ್ರ ಬರೆದು ಆಹ್ವಾನ ನೀಡದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

ಆ ಕಾರಣ ಈ ಬಾರಿ ಜೀ ಕನ್ನಡ ವಾಹಿನಿ ಹೊಸ ಪ್ಲಾನ್ ಮಾಡಿದೆ. ಟ್ವಿಟ್ಟರ್ ಮೂಲಕ ಹೊಸ ಅಭಿಯಾನ ಶುರು ಮಾಡಿದೆ. ಈ ಮೂಲಕ ವೀಕ್ಷಕರ ಸಹಕಾರವನ್ನು ಕೇಳಿದೆ.

Zee Kannada started a twitter campaign for to take rahul dravid in weekend with ramesh show

''ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ #WWRDravid ನೊಂದಿಗೆ Retweet ಮಾಡುವ ಮೂಲಕ ರಾಹುಲ್ ದ್ರಾವಿಡ್'ರವರನ್ನು ಸಾಧಕರ ಸೀಟ್'ಗೆ ಕರೆತರುವ ಪ್ರಯತ್ನ ಮಾಡೋಣ'' ಎಂದು ಟ್ವೀಟ್ ಮಾಡಲಾಗಿದೆ.

ವೀಕ್ಷಕರು #WWRDravid ಹ್ಯಾಶ್ ಟ್ಯಾಗ್ ಬಳಸಿ ರಿಟ್ವೀಟ್ ಮಾಡಿ ಅದನ್ನು ರಾಹಲ್ ದ್ರಾವಿಡ್ ಅವರಿಗೆ ತಲುಪುವಂತೆ ಮಾಡಿ ಎಂದು ವಾಹಿನಿ ಮನವಿ ಮಾಡಿದೆ. ಈ ಬಾರಿಯ 'ವೀಕೆಂಡ್ ವಿತ್ ರಮೇಶ್ 4' ಇದೇ ಶನಿವಾರದಿಂದ ಶುರು ಆಗಲಿದೆ.

More from Filmibeat

English summary
Zee Kannada channel started a twitter campaign (#WWRDravid) for to take Rahul Dravid in 'Weekend With Ramesh' show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X