ಹೊಚ್ಚ ಹೊಸ ರಿಯಾಲಿಟಿ ಶೋ ನಡೆಸಿಕೊಡಲು ಮುಂದಾದ ಜೀ ಕನ್ನಡ ವಾಹಿನಿ

By ಪ್ರಿಯಾ ದೊರೆ

ಹೊಸ ಹೊಸ ರಿಯಾಲಿಟಿ ಶೋಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿರುವ ಜೀ ಕನ್ನಡ ಈಗ ಮತ್ತೊಂದು ಹೊಸ ರಿಯಾಲಿಟಿ ಶೋ ಅನ್ನು ಪ್ರಾರಂಭಿಸಲು ಮುಂದಾಗಿದೆ. ವಾಹಿನಿಯ ಈ ಹೊಸ ರಿಯಾಲಿಟಿ ಶೋ ವೀಕ್ಷಕರನ್ನು ಖುಷಿ ಪಡಿಸುವುದರಲ್ಲಿ ಡೌಟೇ ಇಲ್ಲ.

ಈಗಾಗಲೇ ಮಕ್ಕಳು, ವಯಸ್ಕರು, ಹದಿ-ಹರೆಯದವರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರನ್ನು ಮನದಲ್ಲಿಟ್ಟುಕೊಂಡು ವಾಹಿನಿ ಹಲವು ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡಿದೆ. ಹಾಡು, ಡ್ಯಾನ್ಸ್, ಕಾಮಿಡಿ, ನಾಟಕವಷ್ಟೇ ಅಲ್ಲದೇ, ಇತರೆ ರೀತಿಯ ಗೇಮ್ ಶೋಗಳನ್ನು ವಾಹಿನಿ ನಡೆಸಿಕೊಟ್ಟಿದೆ.

ವಾಹಿನಿ ನಡೆಸಿಕೊಟ್ಟ ರಿಯಾಲಿಟಿ ಶೋಗಳಿಂದ ಈಗಾಗಲೇ ನೂರಾರು ಹಳ್ಳಿ ಪ್ರತಿಭೆಗಳನ್ನು ಮುನ್ನೆಲೆಗೆ ತಂದಿದೆ. ಅಷ್ಟೇ ಅಲ್ಲದೇ, ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ಮಾಡಿಕೊಟ್ಟ ವಾಹಿನಿಯಿಂದಾಗಿ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಕಿರುತೆರೆ, ಸಿನಿಮಾ ಕ್ಷೇತ್ರ ಸೇರಿದಂತೆ ತಮ್ಮ ಜೀವನದಲ್ಲಿ ಹಲವರು ಗುರಿ ಮುಟ್ಟಲು ವಾಹಿನಿ ಸಹಕಾರಿಯಾಗಿದೆ.

ಪುಟಾಣಿಗಳಿಗಾಗಿ ಸರಿಗಮಪ ಲಿಟಲ್ ಚಾಂಪ್ಸ್

ಪುಟಾಣಿಗಳಿಗಾಗಿ ಸರಿಗಮಪ ಲಿಟಲ್ ಚಾಂಪ್ಸ್

ಹಲವು ವರ್ಷಗಳಿಂದ ಹಾಡುಗರಿಗಾಗಿ ಹಾಡಿನ ಶೋಗಳಿದ್ದವರು. ವಾಹಿನಿಗಳು ಬೆಳೆದಂತೆ ತರಹೇವಾರಿ ರೀತಿಯ ರಿಯಾಲಿಟಿ ಶೋಗಳು ಪ್ರಾರಂಭಗೊಂಡವು. ಆದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಸರಿಗಮಪ ರಿಯಾಲಿಟಿ ಶೋ ಹಿಟ್ ಆದಷ್ಟು ಮತ್ಯಾವ ರಿಯಾಲಿಟಿ ಶೋ ಕೂಡ ಹಿಟ್ ಆಗಲಿಲ್ಲ. ಇಂದಿಗೂ ಸರಿಗಮಪ, ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಹಾಡುವ ಆಸೆ ಇದ್ದರೂ ಗುರುಗಳಿಲ್ಲದ ಅದೆಷ್ಟೋ ಪ್ರತಿಭೆಗಳು ಸರಿಗಮಪ ರಿಯಾಲಿಟಿ ಶೋದಿಂದಾಗಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.

ಹಳ್ಳಿ ಹಳ್ಳಿಗಳನ್ನು ಮುಟ್ಟಿದ ಕಾಮಿಡಿ ಕಿಲಾಡಿಗಳು

ಹಳ್ಳಿ ಹಳ್ಳಿಗಳನ್ನು ಮುಟ್ಟಿದ ಕಾಮಿಡಿ ಕಿಲಾಡಿಗಳು

ಕೇವಲ ಸರಿಗಮಪ ಶೋ ಒಂದೇ ಅಲ್ಲದೇ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಶೋಗಳ ಮೂಲಕವೂ ಕೂಡ ಜೀ ಕನ್ನಡ ಹಲವರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು, ಸಾಕಷ್ಟು ಪ್ರತಿಭೆಗಳು ಇಂದಿಗೂ ಬಣ್ಣದ ಲೋಕದಲ್ಲಿ ನೆಲೆಯೂರಿದ್ದಾರೆ. ಮಕ್ಕಳಿಗಾಗಿಯೇ ವಾಹಿನಿ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಅನ್ನು ಕೂಡ ಪ್ರಾರಂಭಿಸಿತು. ಇದರ ಮೂಲಕವೂ ಪುಟಾಣಿಗಳು ತಮ್ಮ ತೊದಲು ನುಡಿಯಿಂದಲೇ ಸ್ಕಿಟ್ ಮಾಡಿ ಸೈ ಎನಿಸಿಕೊಂಡರು. ಧಾರಾವಾಹಿಗಳ ಮೂಲಕ ಕೇವಲ ಗೃಹಿಣಿಯರನ್ನು ರಂಜಿಸದೆ, ವೀಕೆಂಡ್‌ಗಳಲ್ಲಿ ಎಲ್ಲಾ ರೀತಿಯ ಮನರಂಜನೆಗಳನ್ನು ನೀಡುತ್ತಾ ಬಂದಿದೆ.

ವೀಕೆಂಡ್‌ನಲ್ಲೂ ಮನರಂಜನೆ

ವೀಕೆಂಡ್‌ನಲ್ಲೂ ಮನರಂಜನೆ

ಕಳೆದ 15 ವರ್ಷಗಳಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನೀಡಿರುವ ವಾಹಿನಿ ಈಗ ಮತ್ತೊಂದು ಹೊಸ ರಿಯಾಲಿಟಿ ಶೋ ಅನ್ನು ನಡೆಸಿಕೊಡಲು ಮುಂದಾಗಿದೆ. ಆದರೆ ಈ ಬಾರಿ ಮಹಿಳೆಯರ ಮೇಲೂ ಗಮನ ಹರಿಸಿರುವ ವಾಹಿನಿ, ತಾಯಂದಿರಿಗಾಗಿಯೇ ವಿಶೇಷವಾದ ಕಾರ್ಯಕ್ರಮವನ್ನು ಶುರು ಮಾಡುತ್ತಿದೆ. ತಾಯಂದಿರು ಮತ್ತು ಅವರ ಮಕ್ಕಳ ಜೊತೆಗೆ ಹೊಸ ರಿಯಾಲಿಟಿ ಶೋನನ್ನು ಪ್ರಾರಂಭಿಸುವ ಬಗ್ಗೆ ಸ್ವತಃ ವಾಹಿನಿಯೇ ಹೇಳಿಕೊಂಡಿದೆ.

ತಾಯಂದಿರಿಗಾಗಿ ಸೂಪರ್ MOM

ತಾಯಂದಿರಿಗಾಗಿ ಸೂಪರ್ MOM

ನಿಮ್ಮನ್ನ ರಂಜಿಸೋಕೆ ಬರುತ್ತಿದೆ ಹೊಚ್ಚಹೊಸ ರಿಯಾಲಿಟಿ ಶೋ ಸೂಪರ್ MOM ಅತಿ ಶೀಘ್ರದಲ್ಲಿ ಎಂದು ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದ ತನ್ನ ಇನ್ ಸ್ಟಾಗ್ರಾಂನಲ್ಲಿರುವ ಖಾತೆಯಲ್ಲಿ ಪ್ರೋಮೋವನ್ನು ಹಂಚಿಕೊಂಡಿದೆ. ಖಾಸಗಿ ವಾಹಿನಿಯೊಂದರಲ್ಲಿ ಮಕ್ಕಳು ಮತ್ತು ತಾಯಿಯ ಶೋ ಒಂದನ್ನು ನಡೆಸಿಕೊಟ್ಟಿತ್ತು. ಆದರೆ ಅದಕ್ಕಿಂತಲೂ ಅದ್ಭುತವಾಗಿ ಸೂಪರ್ MOM ಕಾರ್ಯಕ್ರಮವನ್ನು ನಡೆಸಿಕೊಡಲು ಜೀ ಕನ್ನಡ ವಾಹಿನಿ ಮುಂದಾಗಿದೆ. ಆದರೆ, ಇದರಲ್ಲಿ ಸೆಲೆಬ್ರಿಟಿಗಳು ಭಾಗವಹಿಸುತ್ತಾರಾ ಇಲ್ಲವೇ ಸಾಮಾನ್ಯರು ಸ್ಫರ್ಧಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
zee kannada channel starting new reality show called super mom. Promo released but contestants name or details are still not revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X