'ವೀಕೆಂಡ್ ವಿತ್ ರಮೇಶ್'ಗೆ ಕುಂಬ್ಳೆ ಅವರನ್ನ ಕರೆತರಲು ಹೊಸ ಪ್ಲಾನ್

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅಂತಹ ಸಾಧಕರನ್ನ ನೋಡುವ ಆಸೆ ವೀಕ್ಷಕರುದ್ದು. ಆದ್ರೆ, ಇವರನ್ನ ಈ ಶೋಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಆದರೂ ಪಟ್ಟು ಬಿಡದ ಜೀ ಕನ್ನಡ ವಾಹಿನಿ ಹೇಗಾದರೂ ಇವರನ್ನ ಶೋಗೆ ಕರೆತರಲೇಬೇಕು ಎಂದು ಪ್ರಯತ್ನ ಮಾಡುತ್ತಿದೆ.

ಈ ಹಿಂದೆ ರಾಹುಲ್ ದ್ರಾವಿಡ್ ಅವರಿಗಾಗಿ #WWRDravid ಹ್ಯಾಷ್ ಟ್ಯಾಗ್ ಬಳಸಿ ಫೇಸ್ ಬುಕ್, ಟ್ವಿಟ್ಟರ್ ಅಭಿಯಾನ ಆರಂಭಿಸಲಾಗಿತ್ತು. ಈಗ ಅದೇ ಸೂತ್ರವನ್ನ ಅನಿಲ್ ಕುಂಬ್ಳೆ ಅವರಿಗೂ ಬಳಸಲಾಗುತ್ತಿದೆ.

Zee kannada starts WeekendwithKumble Campaign

ಹೌದು, ''ಭಾರತದ Jumbo ನಮ್ಮ ಕರ್ನಾಟಕದ ಹೆಮ್ಮೆ Anil Kumble ಅವರನ್ನು ಸಾಧಕರ ಸೀಟ್'ನಲ್ಲಿ ನೋಡಲು ಇಚ್ಛಿಸುವ ಅಭಿಮಾನಿಗಳು ನಾವು ನಡೆಸುತ್ತಿರುವ Facebook ಅಭಿಯಾನದಲ್ಲಿ ನಮ್ಮೊಂದಿಗೆ ಕೈ ಜೋಡಿಸಲು #WeekendwithKumble ನೊಂದಿಗೆ Share ಮಾಡಿ'' ಎಂದು ಜೀ ಕನ್ನಡ ಮನವಿ ಮಾಡಿದೆ.

ಮೊದಲ ಆವೃತ್ತಿಯಿಂದಲೂ ಇವರಿಬ್ಬರನ್ನ ವೀಕೆಂಡ್ ವಿತ್ ರಮೇಶ್ ಶೋಗೆ ಕರೆದುಕೊಂಡು ಬರಲು ಜೀ ಕನ್ನಡ ಪ್ರಯತ್ನ ಮಾಡುತ್ತಿದೆ. ಆದ್ರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ಬಾರಿ ಅಭಿಮಾನಿಗಳ ಕಡೆಯಿಂದಲೇ ಆಹ್ವಾನಿಸುವ ಮೂಲಕ ಪ್ರಯತ್ನ ಮಾಡಿದೆ. ಈಗ ಅಭಿಮಾನಿಗಳ ಆಶಯಕ್ಕೆ ಮಣಿದು ಈ ಶೋಗೆ ಬರ್ತಾರಾ ಕಾದುನೋಡಬೇಕಿದೆ.

More from Filmibeat

English summary
If you have to see anil kumble in weekend with ramesh. then, use #WeekendwithKumble hashtag and tweet of post your comment in facebook and twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X