Anu akka: ಅನು ಕನ್ನಡತಿ ಶಾಲೆಗಳಿಗೆ ಬಣ್ಣ ಬಳಿಯೋದೇಕೆ: ಆ ದಿನಗಳನ್ನು ನೆನೆದು ಭಾವುಕ

ಅಕ್ಕ ಅನು ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಸಿಕ್ಕಾಪಟ್ಟೆ ಚಿರಪರಿಚಿತರಾದವರು ಇವರು. ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಿ ಎಷ್ಟೋ ವರ್ಷಗಳು ಆಗೋಗಿದೆ. ಖಾಸಗಿ ಶಾಲೆಗಳ ಮೋಹ, ಸರ್ಕಾರಗಳ ನಿರ್ಲಕ್ಷ್ಯವೂ ಇದಕ್ಕೆ ಕಾರಣ. ಆದರೆ ಅಲ್ಲೋ ಇಲ್ಲೋ ಎಂಬಂತೆ ಬೆರಳೆಣಿಕೆಯಷ್ಟು ಸರ್ಕಾರಿ ಶಾಲೆಗಳು ಉಳಿದುಕೊಂಡಿವೆ. ಕೆಲ ಹಳ್ಳಿಗಳಲ್ಲಿ ಬಡವರ ಮಕ್ಕಳು ಈಗಲೂ ಸರ್ಕಾರಿ ಶಾಲೆಯನ್ನೇ ನಂಬಿಕೊಂಡಿವೆ.

ಉಳಿದಿರುವುದೇ ಕಡಿಮೆ ಶಾಲೆಗಳಾದರೂ ಅವುಗಳಿಗೂ ಮೂಲಸೌಕರ್ಯ ಮರಿಚಿಕೆಯೆ ಆಗಿದೆ. ಸುಣ್ಣ ಬಣ್ಣವನ್ನಂತು ಕೇಳುವುದೇ ಬೇಡ. ಇದೆಲ್ಲ ನೋಡಿದಾಗ ಬೇಸರ ಆಗುತ್ತೆ. ಸಾಕಷ್ಟು ಜನ ಸರ್ಕಾರಿ ಶಾಲೆಗಳ ಪರವಾಗಿ ನಿಲ್ಲೋಣ, ಅಭಿವೃದ್ಧಿ ಪಡಿಸೋಣ ಅಂತ ಭಾಷಣ ಮಾಡುತ್ತಾರೆ. ಅದು ಭಾಷಣಕ್ಕೆ ಅಷ್ಟೇ ಸೀಮಿತ. ಆದರೆ ಅನು ಅಕ್ಕ ಎಂಬಾಕೆ ಪ್ರಚಾರವೇ ಇಲ್ಲದೆ, ತಮ್ಮ ಸೇವಾಕಾರ್ಯ ಶುರು ಮಾಡಿದವರು. ಇದೀಗ ಜೀ ಕನ್ನಡದಲ್ಲಿ ತಾನೇಕೆ ಆ ಕೆಲಸ ಶುರು ಮಾಡಿದೆ ಎಂಬುದನ್ನು ಹೇಳಿದ್ದಾರೆ.

Zee kannada Stri awards Niswartha sevaki Award to Anu Akka

ಜೀ ಕನ್ನಡದಲ್ಲಿ ಮಹಿಳಾ ಅವಾರ್ಡ್

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಇದರ ಅಂಗವಾಗಿ ಜೀ ಕನ್ನಡದಲ್ಲಿ ಮಹಿಳಾ ಸಾಧಕಿಯರನ್ನು ಕರೆಸಿ, ಅವಾರ್ಡ್ ನೀಡಿ ಗೌರವಿಸಲಾಗಿದೆ. ಅದರಲ್ಲಿ ಅನು ಅಕ್ಕ ಅಂತಾನೇ ಖ್ಯಾತಿ ಪಡೆದಿರುವ ಅನು ಕನ್ನಡತಿಯನ್ನು ಕರೆಸಿದ್ದಾರೆ. ಅನು ಕನ್ನಡತಿಯನ್ನು ಕಂಡು ಸಾಕಷ್ಟು ಜನ ಖುಷಿ ಪಟ್ಟಿದ್ದಾರೆ. ಈ ಕಾರ್ಯಕ್ರಮಕ್ಕೊಂದು ಸಾರ್ಥಕತೆ ಎಂದಿದ್ದಾರೆ.

ಸರ್ಕಾರಿ ಶಾಲೆಯ ಪರ ನಿಂತಿದ್ದೇಕೆ?

ಅನು ಅವರು ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುತ್ತಾರೆ. ಆ ಕಾಯಕದಲ್ಲಿ ಯಾವುದೇ ಸ್ವಾರ್ಥವೂ ಇಲ್ಲ. ಯಾಕೆ ಈ ಸೇವೆ ಶುರು ಮಾಡಿದ್ದು ಎಂಬುದನ್ನು ಜೀ ಕನ್ನಡದ ವೇದಿಕೆ ಮೇಲೆ ತಿಳಿಸಿದ್ದಾರೆ. 'ನಾನು ಕಳೆದ ಐದು ವರ್ಷದಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನವನ್ನು ಪ್ರಾರಂಭ ಮಾಡಿದೆ. ಕಾರಣ ಇಷ್ಟೇ, ಭಾರತ ಹಳ್ಳಿಗಳ ರಾಷ್ಟ್ರ. ಹಿಂದುಳಿದ ರಾಷ್ಟ್ರ ಅಂತಾನು ಕರೆಸಿಕೊಳ್ಳುತ್ತದೆ. ಪ್ರಗತಿ ಪಥದತ್ತ ಹೋಗುತ್ತಾ ಇದೆ ಎಂದು ನಾವುಗಳು ಓದುತ್ತಾ ಇದ್ದೀವಿ. ಆದರೆ ಪ್ರಗತಿ ಪಥದತ್ತ ಹೋಗಲು ಏನು ಮಾಡಬೇಕು ಅದನ್ನ ಮಾಡುತ್ತಿಲ್ಲ. ಸರ್ಕಾರಿ ಶಾಲೆಗಳನ್ನ ಉಳಿಸಬೇಕು ಅಂತ ಎಷ್ಟೋ ಜನ ಹೇಳ್ತಾರೆ ಅಷ್ಟೆ. ಎಷ್ಟೋ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೂಡ ಇರುವುದಿಲ್ಲ. ಸರ್ಕಾರಿ ಶಾಲೆ ಉಳಿಬೇಕು ಅಂದ್ರೆ ಬುನಾದಿಯೇ ಸ್ವಚ್ಚತೆ ಅದಕ್ಕೆ ಈ ಅಭಿಯಾನ ಕೈಗೊಂಡೆ' ಎಂದಿದ್ದಾರೆ.

ಅವಾರ್ಡ್ ಅರ್ಪಿಸಿದ್ದು ಯಾರಿಗೆ..?

ಜೀ ಕನ್ನಡದಲ್ಲಿ ಸಮಾಜ ಸೇವೆ ಮಾಡಿದವರು ಗುರುತಿಸಿ ಅವಾರ್ಡ್ ನೀಡಲಾಗಿದೆ. ಅದರಲ್ಲಿ ಅನು ಅವರಿಗೆ ನಿಸ್ವಾರ್ಥ ಸೇವಕಿ ಎಂಬ ಅವಾರ್ಡ್ ನೀಡಿ ಗೌರವಿಸಿದೆ. ಈ ಅವಾರ್ಡ್ ಅನ್ನು ಅನು ತಮ್ಮ ಇಡೀ ತಂಡ ಹಾಗೂ ತಂದೆ ತಾಯಿಗೆ ಅರ್ಪಿಸಿದ್ದಾರೆ.

Zee kannada Stri awards Niswartha sevaki Award to Anu Akka

ಹಳೆಯ ದಿನಗಳನ್ನು ನೆನೆದು ಭಾವುಕ

ಅನು ಅವರು ಶುರು ಮಾಡಿದ ಕೆಲಸ ಸುಲಭವಾದ ಕೆಲಸವಲ್ಲ. ಅದಕ್ಕೆ ಅಂತ ಸಾಕಷ್ಟು ಹಣ ಬೇಕಾಗುತ್ತದೆ. ಬೆಂಬಲ ಬೇಕಾಗುತ್ತದೆ. ಸಾಕಷ್ಟು ರಿಸ್ಕ್ ಇದೆ. ಇಂದು ಅದೆಲ್ಲವನ್ನು ಮೆಟ್ಟಿ ನಿಂತು ನೂರಾರು ಶಾಲೆಗಳನ್ನು ಕಲರ್ ಫುಲ್ ಮಾಡಿದ್ದಾರೆ. ಇಂದು ಅನು ಅಕ್ಕ ಅಂತಾನೆ ಗುರುತಿಸಿಕೊಳ್ಳುವುದಕ್ಕೆ ಅವರ ಹಿಂದೆ ಒಂದು ದೊಡ್ಡ ಶಕ್ತಿಯೇ ಇದೆ. ಅದು ಅವರ ತಂದೆ-ತಾಯಿ ಹಾಗೂ ಅವರ ಇಡೀ ತಂಡ. ನೆಗೆಟಿವ್ ಮಾತುಗಳು ಬಂದಾಗಲೂ ಅದನ್ನು ತಲೆಗೆ ಹಾಕಿಕೊಳ್ಳದೇ ಕೆಲಸ ಮುಂದುವರೆಸಲು ಎಲ್ಲರೂ ಬೆನ್ನೆಲುಬಾಗಿ ನಿಂತಿದ್ದರು. ಇದನ್ನು ನೆನೆದ ಅನು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತ್ತು.

More from Filmibeat

English summary
zee kannada Stri awards, Anu Akka biography and service to society;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X