ಕನ್ನಡ ಕಿರುತೆರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಫ್ಯಾಮಿಲಿಗಾಗಿ ಅತೀ ದೊಡ್ಡ ಶೋ; 'Zee Entertainers'

By ಪೂರ್ವ

ಪ್ರಸ್ತುತ ದಿನಗಳಲ್ಲಿ ಜನರನ್ನು ರಂಜಿಸಲು ಮನರಂಜನಾ ವಾಹಿನಿಗಳು ಒಂದಲ್ಲ ಒಂದು ಶೋಗಳನ್ನು ಪ್ರಸ್ತುತ ಪಡಿಸುತ್ತಲೇ ಇದೆ. ಹೊಸ ಹೊಸ ಶೋಗಳ ಮೂಲಕ ಮನರಂಜನೆ ನೀಡುವುದಕ್ಕೆ ಮುಂದಾಗುತ್ತಿವೆ. ಅದರಲ್ಲೂ ವೀಕೆಂಡ್‌ನಲ್ಲಿ ಎಂಟರ್‌ಟೈನ್ಮೆಂಟ್ ಮೊರೆ ಹೋಗುತ್ತಿರುವ ವೀಕ್ಷಕರಿಗೆ ಹೊಸ ಶೋಗಳು ಆರಂಭ ಆಗುತ್ತಿವೆ. ಅದರಲ್ಲೂ ಜೀ ಕನ್ನಡದ ಅತೀ ದೊಡ್ಡ ಫ್ಯಾಮಿಲಿ ಶೋ ಅನ್ನು ತರುವುದಕ್ಕೆ ಮುಂದಾಗಿದೆ.

ಜೀ ವಾಹಿನಿ ವೀಕ್ಷಕರಿಗೆ ಧಾರಾವಾಹಿಗಳ ಜೊತೆ ವೀಕೆಂಡ್‌ ಮನರಂಜನೆಗಾಗಿ ಅತೀ ದೊಡ್ಡ ಫ್ಯಾಮಿಲಿ ಶೋ ಅನ್ನು ಪರಿಚಯ ಮಾಡುತ್ತಿದೆ. ಈಗಾಗಲೇ 'ಸರಿಗಮಪ' , 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಕಾಮಿಡಿ ಕಿಲಾಡಿಗಳು' ಅಂತಹ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಂಡಿದೆ. ಆದರೆ ಇದೀಗ ಇದನ್ನೆಲ್ಲ ಮೀರಿಸುವ ಮತ್ತೊಂದು ಶೋ ಕೂಡ ಶುರು ಆಗುತ್ತಿದೆ ಅದುವೇ 'ಜೀ ಎಂಟರ್‌ನೈಟರ್ಸ್'.

Zee Kannada telecasting biggest family entertainment show when and where to watch

ಬೇರೆ ವಾಹಿನಿಯ ಶೋಗಳಿಗೆ ಪೈಪೋಟಿ ನೀಡುವುದಕ್ಕೆ ಜೀ ವಾಹಿನಿ ಕೂಡ ಹೊಸ ಶೋಗಳನ್ನು ವೀಕ್ಷಕರ ಮುಂದೆ ತರುತ್ತಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ವಾಹಿನಿಗಳು ಜನರನ್ನು ರಂಜಿಸಲು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಿವೆ. ಸದ್ಯ ಜೀ ಕನ್ನಡ 'ಜೀ ಎಂಟರ್‌ಟೈನರ್ಸ್' ಶೋದ ಪ್ರೋಮೊವನ್ನು ರಿಲೀಸ್ ಮಾಡಿದೆ. ಆದರೆ, ಕಾರ್ಯಕ್ರಮದ ಸ್ವರೂಪ ಹೇಗಿರುತ್ತೆ? ಯಾರೆಲ್ಲ ಬರುತ್ತಾರೆ. ಎಂದಿನಿಂದ ಶುರುವಾಗಿತ್ತೆ? ಅನ್ನೋ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ.

ಇನ್ನು ಜೀ ಕನ್ನಡ ವಾಹಿನಿ ರಿಲೀಸ್ ಮಾಡಿರುವ ಪ್ರೋಮೋವನ್ನು ನೋಡಿದ ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಫ್ಯಾಮಿಲಿ ಶೋ. ಇಲ್ಲಿ ಎಂಟರ್‌ಟೈನ್ಮೆಂಟ್ ಕೂಡ ಅಷ್ಟೇ ಭರಪೂರವಾಗಿರುತ್ತೆ ಅನ್ನೋದನ್ನು ಎದುರು ನೋಡಬಹುದು. ಸದ್ಯಕ್ಕಂತೂ ಪ್ರೋಮೊ ಕುತೂಹಲವನ್ನು ಸೃಷ್ಟಿಸುತ್ತಿದೆ.

ಮನರಂಜನೆ ನೀಡಲು ಹೊಸ ಶೋ

ವೀಕ್ಷಕರಿಗೆ ಸಖತ್ ಮನರಂಜನೆ ನೀಡಲು 'ಜೀ ಎಂಟರ್‌ಟೈನರ್' ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದು ನೋಡಬೇಕಿದೆ. ಪ್ರೋಮೊದಲ್ಲಿ ಈಗಾಗಲೇ "ಎಂಟಟೈನರ್‌ನ ಸೈರನ್ ಕೊಡೋಕೆ ಬರುತ್ತಿದ್ದಾರೆ ಜೀ ಎಂಟರ್‌ಟೈನರ್ಸ್.. ನೋಡೋಕೆ ನೀವು ರೆಡಿನಾ?" ಎಂದು ಪ್ರೋಮೊದಲ್ಲಿ ಹೇಳುವ ಮೂಲಕ ರಿವೀಲ್ ಮಾಡಲಾಗಿದೆ. ಈ ಶೋ ನೋಡುಗರ ಕಣ್ಣಿಗೆ ಬಹಳಷ್ಟು ಹಬ್ಬವನ್ನು ನೀಡೋದು ಗ್ಯಾರಂಟಿ. ಇನ್ನು ಕಿರುತೆರೆಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಅತೀ ದೊಡ್ಡ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಶೋ ಎಂದು ಜೀ಼ ಕನ್ನಡ ಹೇಳಿಕೊಂಡಿದೆ. ಸಾಕಷ್ಟು ಮನರಂಜನೆ, ಕಾಮಿಡಿ, ಡ್ಯಾನ್ಸ್ ಇದೆಲ್ಲವನ್ನೂ ನೋಡುಗರ ಕಣ್ಣಿಗೆ ಹಬ್ಬವನ್ನು ನೀಡುತ್ತೆ ಅನ್ನೋದನ್ನು ನಿರೀಕ್ಷೆ ಮಾಡಬಹುದು.

ಧಾರಾವಾಹಿಗಳಲ್ಲಿ ನಂಬರ್ ಒನ್

ಜೀ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಉತ್ತಮವಾಗಿ ಮೂಡಿ ಬರುತ್ತಿದೆ. ಹಾಗೆಯೇ ಧಾರಾವಾಹಿಗಳು ಒಂದಕ್ಕಿಂತ ಇನ್ನೊಂದು ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ನೋಡುಗರಿಗೆ ಬಹಳಷ್ಟು ಖುಷಿಯನ್ನು ನೀಡುತ್ತಿದೆ. ಧಾರಾವಾಹಿಗಳು ಹೇಗೆ ಸೂಪರ್ ಹಿಟ್ ಆಗುತ್ತಿದ್ದವೋ ಅದೇ ರೀತಿಯಲ್ಲಿ ರಿಯಾಲಿಟಿ ಶೋಗಳು ಬಹಳ ಅದ್ಭುತವಾಗಿ ಮೂಡಿ ಬರುತ್ತಿವೆ.

More from Filmibeat

English summary
Zee Kannada telecasting biggest family entertainment show when and where to watch?
Read more about: tv poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X