ಈ ವಾರ ಝೀ ಕನ್ನಡದ ಟಾಪ್ 4 ಧಾರಾವಾಹಿ ಯಾವುದು? ಮೇಲುಗೈ ಸಾಧಿಸಿದ್ದು ಯಾವ ಧಾರಾವಾಹಿ?

By ಅನಿತಾ ಬನಾರಿ

ಸಿನಿಮಾ ರಂಗಕ್ಕೆ ಹೇಗೆ ಪ್ರೇಕ್ಷಕರು ಪ್ರೀತಿಯ ಧಾರೆಯುತ್ತಾರೆಯೋ ಅದೇ ರೀತಿ ಸೀರಿಯಲ್‌ಗೂ ಅದರದ್ದೇ ಆದ ವೀಕ್ಷಕರ ಬಳಗವಿದೆ. ಕಲರ್ಸ್ ಕನ್ನಡ, ಝೀ ಕನ್ನಡ, ಸುವರ್ಣ ಇತ್ಯಾದಿಯಾಗಿ ಕನ್ನಡ ವೀಕ್ಷಕರನ್ನು ಮನರಂಜಿಸುವಲ್ಲಿ ಸಾಕಷ್ಟು ಕನ್ನಡ ವಾಹಿನಿಗಳು ತಮ್ಮದೇ ಕೊಡುಗೆಯನ್ನು ನೀಡುತ್ತಿವೆ.

ಇದರೊಂದಿಗೆ ಒಂದರ ಹಿಂದೆ ಒಂದರಂತೆ ಧಾರವಾಹಿಗಳು ಪ್ರೇಕ್ಷಕರಿಗಾಗಿ ಬೆಸ್ಟ್ ಕಥೆಗಳನ್ನು ನೀಡಲು ಪ್ರಯತ್ನಿಸುತ್ತಲೇ ಇರುತ್ತವೆ. ಈ ಸ್ಪರ್ಧೆಯಲ್ಲಿ ಆಗಾಗ ಏರಿಳಿತಗಳು ಸಂಭವಿಸುತ್ತಾ ಧಾರಾವಾಹಿಯ ವೀಕ್ಷಕರ ಸಂಖ್ಯೆ ಬದಲಾಗುತ್ತಾ ಇರುತ್ತದೆ. ಸದ್ಯ ಅತಿ ಹೆಚ್ಚು ಪ್ರೇಕ್ಷಕರನ್ನು ಪಡೆದುಕೊಂಡ ಧಾರಾವಾಹಿ ಟಿಆರ್‌ಪಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಹಾಗಿದ್ದರೆ, ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಝೀ ಕನ್ನಡದ ಯಾವ ಧಾರಾವಾಹಿ ಮುಂದಿದೆ ನೋಡೋಣ ಬನ್ನಿ.

Zee Kannada top 4 serials are listed in this week s TRP list

ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿದಾಗ ಅಭಿಮಾನಿಗಳ ನಿರೀಕ್ಷೆ ಸ್ವಲ್ಪ ಹೆಚ್ಚೇ ಇರುತ್ತದೆ. ಅಲ್ಲದೆ ಹಳೇ ಧಾರಾವಾಹಿಗಳು ಇದರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಆದರೆ, ಹಳೆ ಸೀರಿಯಲ್‌ಗಳು ಹೊಸ ಧಾರಾವಾಹಿಗಳ ಮುಂದೆ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಟಿಆರ್‌ಪಿಯಲ್ಲಿ ಮೇಲುಗೈ ಸಾಧಿಸುತ್ತಲೇ ಬಂದಿವೆ. ಈ ವಾರದ ಟಿಆರ್‌ಪಿ ಲೆಕ್ಕಾಚಾರವನ್ನು ನೋಡಿದರೆ ಗೊತ್ತಾಗುತ್ತೆ.

ಪುಟ್ಟಕ್ಕನ ಮಕ್ಕಳು

ಕನ್ನಡದ ಹಿರಿಯ ನಟಿ ಉಮಾಶ್ರೀ ನಟಿಸುತ್ತಿರುವ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದೆ. ಉಮಾಶ್ರೀ ಮತ್ತು ಮಂಜು ಭಾಷಿಣಿಯಂತಹ ಹಿರಿಯ ಕಲಾವಿದರೊಂದಿಗೆ ಹಲವು ಹೊಸ ಮುಖಗಳು ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈ ವಾರದ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ಧಾರಾವಾಹಿಯ ಕಥೆಯಲ್ಲಿ ಬಂಗಾರಮ್ಮನ ಬದಲಿಗೆ ಸಿಂಗಾರಮ್ಮನ ಆಗಮನದೊಂದಿಗೆ ಮತ್ತೊಂದು ಕಡೆ ಸಹನಾಳ ಸುಳಿವು ವಿದೇಶಿ ಯೂಟ್ಯೂಬರ್‌ನ ಮುಖಾಂತರ ಪುಟ್ಟಕ್ಕನಿಗೆ ಸಿಗುವುದರೊಂದಿಗೆ ಕಥೆಯ ತಿರುವು ಪ್ರೇಕ್ಷಕರಿಗೆ ಇಷ್ಟವಾಗಿದೆ.

ಶ್ರಾವಣಿ ಸುಬ್ರಮಣ್ಯ

ಅಪ್ಪ ಮಗಳ ರಿಲೇಷನ್‌ಶಿಪ್ ನಡುವೆ ಶ್ರೀಮಂತ ಮತ್ತು ಬಡವರ ಬದುಕಿನ ಬವಣೆಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತೋರಿಸುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಈ ವಾರದ ಟಿಆರ್‌ಪಿ ಲಿಸ್ಟಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆರಂಭವಾದಾಗಿನಿಂದಲೇ ವೀಕ್ಷಕರಿಗೆ ಇಷ್ಟವಾಗಿದ್ದ ಈ ಧಾರಾವಾಹಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿತ್ತು. ಈ ವಾರ ಒಂದೇ ಬಾರಿಗೆ ಎರಡನೇ ಸ್ಥಾನವನ್ನು ಮೇಲಕ್ಕೆ ಏರಿದ್ದು, ಜನರಿಗೆ ಕಥೆ ಇಷ್ಟವಾಗಿರುವುದಕ್ಕೆ ಉತ್ತಮ ನಿದರ್ಶನವಾಗಿದೆ.

Zee Kannada top 4 serials are listed in this week s TRP list

ಲಕ್ಷ್ಮೀ ನಿವಾಸ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಯಾವಾಗಲೂ ಪ್ರತಿಸ್ಪರ್ಧಿಯಾಗಿದ್ದ ಧಾರಾವಾಹಿ ಎಂದರೆ ಅದು 'ಲಕ್ಷ್ಮೀ ನಿವಾಸ'. ಇಂದಿಗೂ ಅದು ಪುಟ್ಟಕ್ಕನ ಮಕ್ಕಳು ಜತೆಗೆ ಸಮಬಲದ ಹೋರಾಟ ನಡೆಸುತ್ತಲೇ ಬಂದರೂ ಈ ವಾರದ ಟಿಆರ್‌ಪಿಯಲ್ಲಿ ಮಾತ್ರ ಇಳಿಮುಖ ಕಂಡಿದೆ. ಕಳೆದ ವಾರ ಮೊದಲ ಸ್ಥಾನದಲ್ಲಿದ್ದ ಧಾರಾವಾಹಿ ನೇರವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಸೀತಾ ರಾಮ

ಎಲ್ಲರ ನೆಚ್ಚಿನ 'ಸೀತಾರಾಮ' ಧಾರಾವಾಹಿ ಟಿಆರ್‌ಪಿಯಲ್ಲಿ ನಾಲ್ಕನೆಯ ಸ್ಥಾನ ಪಡೆದುಕೊಂಡಿದೆ. ಆದರೆ, ನಗರ ಪ್ರದೇಶದ ವೀಕ್ಷಕರಲ್ಲಿ ಈ ಧಾರಾವಾಹಿಯದ್ದೇ ಮೇಲುಗೈ. ಕಳೆದೊಂದು ವಾರವಿಡೀ 'ಸೀತಾ ರಾಮ' ಸೀರಿಯಲ್‌ನಲ್ಲಿ ಸೀತಾ ರಾಮರ ಮದುವೆಯ ಸಂಭ್ರಮ ಮನೆ ಮಾಡಿತ್ತು. ಸೀರಿಯಲ್ ಕಥೆಯಲ್ಲಿ ಇದೀಗ ಸೀತಾ ಜೊತೆಗೆ ಸಿಹಿಯೂ ಮನೆ ಪ್ರವೇಶಿಸಿದ್ದಾಳೆ. ಒಟ್ಟಾರೆ ಮದುವೆ ಸಂಭ್ರಮವೂ ಈ ವಾರ 'ಸೀತಾ ರಾಮ' ಧಾರಾವಾಹಿಗೆ ಒಂದು ಪ್ಲಸ್‌ ಪಾಯಿಂಟ್ ಆದಂತಾಗಿದೆ.

More from Filmibeat

English summary
Top 4 Zee Kannada serial list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X