ಈ ವಾರವೂ ಮೊದಲ ಸ್ಥಾನ ಬಿಟ್ಟುಕೊಡದ 'ಪುಟ್ಟಕ್ಕನ ಮಕ್ಕಳು' ಸೀರಿಯಲ್!
ಕಿರುತೆರೆಯ ವಿಚಾರ ಬಂದಾಗಲೆಲ್ಲಾ ಪ್ರೇಕ್ಷಕರ ಮನಸ್ಸಿಗೆ ಬರೋದು ಎಂದರೆ ಅದು ಸೀರಿಯಲ್‌ಗಳು. ನಂತರ ರಿಯಾಲಿಟಿ ಶೋಗಳು. ಕಿರುತೆರೆಯಲ್ಲಿ ಎಂತದ್ದೇ ಕಾರ್ಯಕ್ರಮಗಳು ಬಂದರೂ ಸೀರಿಯಲ್‌ಗಳಿಗೆ ಇರುವ ಕ್ರೇಜ್ ಮಾತ್ರ ಸದಾ ಹಾಗೇ ಇರುತ್ತದೆ. ಹೀಗಾಗಿಯೇ ಕಿರುತೆರೆಯ ಲೋಕದಲ್ಲಿ ಸಿಂಹ ಪಾಲು ಎನ್ನುವುದಾದರೆ ಅದು ಸೀರಿಯಲ್‌ಗಳಿಗೆ ಹೋಗುತ್ತದೆ. ಅಷ್ಟೇ ಅಲ್ಲದೇ ಸೀರಿಯಲ್ ಪ್ರಿಯರಿಗೆ ಒಂದು ವಾರ ಮುಗಿಯುವಷ್ಟರಲ್ಲಿ ಈ ವಾರ ಯಾವ ಸೀರಿಯಲ್ ಯಾವ ಸ್ಥಾನದಲ್ಲಿದೆ ಎನ್ನುವ ಕುತೂಹಲ ಮೂಡುತ್ತದೆ.
ಸಾಕಷ್ಟು ಚಾನೆಲ್‌ಗಳಲ್ಲಿ ಪ್ರಸಾರವಾಗುವ ಸೀರಿಯಲ್‌ಗಳು, ವೀಕ್ಷಕರ ವೀಕ್ಷಣೆಯ ಆಧಾರದಲ್ಲಿ ಪ್ರತಿ ವಾರ ಯಾವ ಸ್ಥಾನವನ್ನು ಪಡೆದಿವೆ ಎನ್ನುವುದನ್ನು ತಿಳಿಯಬಹುದು. ಪ್ರತೀ ವಾರವೂ ಸೀರಿಯಲ್ ಟಿಆರ್‌ಪಿಯನ್ನು ಪ್ರಕಟ ಮಾಡಲಾಗುತ್ತದೆ. ಅದರಂತೆ ಈ ವಾರದ ಟಿವಿ ರೇಟಿಂಗ್ ರಿಪೋರ್ಟ್ ಹೊರ ಬಂದಿದ್ದು, ವೀಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದ, ನಿರೀಕ್ಷಿಸುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಮಾನ್ಯವಾಗಿ ಸೀರಿಯಲ್‌ಗಳ ಟಾಪ್ ಐದರ ರೇಸ್‌ನಲ್ಲಿ ಮೊದಲ ಸ್ಥಾನ ಬಿಟ್ಟು ಉಳಿದ ಸ್ಥಾನಗಳಲ್ಲಿ ಆಗಾಗ ಬದಲಾವಣೆ ಆಗುತ್ತಲೇ ಇರುತ್ತದೆ.
ಕಳೆದ ಎರಡು ವಾರಗಳಲ್ಲಿ ಟಾಪ್ ಐದನೇ ಸ್ಥಾನದಲ್ಲಿ ಆದ ಬದಲಾವಣೆಗಳು ಸಖತ್ ಸದ್ದು ಮಾಡಿತ್ತು. ಇದಕ್ಕೆ ಕಾರಣ ಸಾಮಾನ್ಯವಾಗಿ ಸದಾ ಟಾಪ್ ಐದು ಸ್ಥಾನಗಳಲ್ಲಿ ಜೀ ಕನ್ನಡದ ಸೀರಿಯಲ್‌ಗಳೇ ಇರುತ್ತಿದ್ದವು. ಆದರೆ ಎರಡು ವಾರಗಳ ಹಿಂದೆ ಅದು ಬದಲಾಗಿತ್ತು. ಕಿರುತೆರೆಗೆ ಹೊಸ ಎಂಟ್ರಿ ನೀಡಿದ್ದ ರಾಮಾಚಾರಿ ಸೀರಿಯಲ್, ಮತ್ತೊಂದು ಜನಪ್ರಿಯ ಸೀರಿಯಲ್ ಸತ್ಯ ಅನ್ನು ಹಿಂದೆ ಹಾಕಿ ಟಾಪ್ ಐದನೇ ಸ್ಥಾನವನ್ನು ಪಡೆದಿತ್ತು.

ಆರಂಭದಲ್ಲಿ ನಂಬರ್ ಒನ್ ಆಗಿದ್ದ ಸತ್ಯ ಸೀರಿಯಲ್ ಇತ್ತೀಚೆಗೆ ಒಂದೊಂದೇ ಸ್ಥಾನ ಕೆಳಗೆ ಬಂದು ಟಾಪ್ ಐದರಲ್ಲಿ ಇತ್ತು. ಆದರೆ ಯಾವಾಗ ಅದು ಟಾಪ್ ಐದರಲ್ಲೂ ಇಲ್ಲದೇ ರೇಸ್ ನಿಂದ ಹೊರ ಬಿತ್ತೋ ಆಗ ಸೀರಿಯಲ್ ಅಭಿಮಾನಿಗಳಿಗೆ ಇದು ನಿಜವಾಗಿಯೂ ಶಾಕಿಂಗ್ ಆಗಿತ್ತು. ಅದಾದ ನಂತರದ ವಾರದಲ್ಲೂ ಸಹ ಸತ್ಯ ಟಾಪ್ ಫೈವ್‌ನಲ್ಲಿ ಸ್ಥಾನ ಪಡೆದಿರಲಿಲ್ಲ. ಏಕೆಂದರೆ ಪಾರು ಸೀರಿಯಲ್ ಕಳೆದ ವಾರ ಐದನೇ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಆದರೆ ಈ ಬಾರ ಮತ್ತೆ ಸ್ಥಾನಗಳ ಬದಲಾವಣೆ ಆಗಿದೆ.
ಈ ವಾರ ಮೊದಲ ಮೂರು ಸ್ಥಾನಗಳು ಎಂದಿನಂತೆ ಅನುಕ್ರಮವಾಗಿ ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ ಮತ್ತು ಹಿಟ್ಲರ್ ಕಲ್ಯಾಣ ಧಾರಾವಾಹಿಗಳ ಪಾಲಾಗಿದೆ. ನಾಲ್ಕನೇ ಸ್ಥಾನದಲ್ಲಿ ಜೊತೆ ಜೊತೆಯಲಿ ಇದೆ. ಸತ್ಯ ಸೀರಿಯಲ್ 6.6 ಟಿವಿಆರ್ ಪಡೆದು ರಾಮಾಚಾರಿಯನ್ನು ದಾಟಿ ಮತ್ತೆ ಟಾಪ್ ಐದನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಮತ್ತೆ ರೇಸ್‌ಗೆ ಎಂಟ್ರಿ ನೀಡಿದೆ. ಇನ್ನು ಈ ವಾರ ಪಾರು ಆರನೇ ಸ್ಥಾನವನ್ನು ಪಡೆದಿದ್ದರೆ, ರಾಮಾಚಾರಿ ಏಳನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಸತ್ಯ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಹಾಗೂ ಕಾರ್ತಿಕ್ ದಿವ್ಯಾ ಮದುವೆ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ.


Click it and Unblock the Notifications











