ಜೀ ಕನ್ನಡ ವಾಹಿನಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ

By Rajendra

TV anchoring as a career
ಟಿವಿ ನಿರೂಪಕರು ಎಂದ ತಕ್ಷಣ ಥಟ್ಟನೆ ಬರ್ಖಾ ದತ್, ಪ್ರೊನೋಯ್ ರಾಯ್ (Pronnoy Roy), ಸೈರಸ್ ಬ್ರೋಚಾ, ಮ್ರಿನಾಲ್ ಪಾಂಡೆ ಅಂಡ್ ಆಫ್ ಕೋರ್ಸ್ ರಾಜ್ ದೀಪ್ ಸರ್ದೇಸಾಯಿ ನೆನಪಾಗುತ್ತಾರೆ. ಇವರೆಲ್ಲಾ ತಮ್ಮದೇ ಆದಂತಹ ಸ್ಟೈಲ್, ಅಸಾಧಾರಣ ವಾಕ್ಪಟುತ್ವ, ನಿರೂಪಣಾ ಶೈಲಿಯ ಕಾರಣ ಖ್ಯಾತಿಯ ಉತ್ತುಂಗಕ್ಕೇರಿದವರು.

ಇವರಂತೆ ತಾವು ಆಗಬೇಕು ಎಂದು ಎಷ್ಟೋ ಮಂದಿ ಕನಸು ಕಾಣುತ್ತಿರುತ್ತಾರೆ. ಅಂತಹವರಿಗೊಂದು ಸುವರ್ಣಾವಕಶ ಇಲ್ಲಿದೆ. ಕನ್ನಡಿಗರ ಕಣ್ಮಣಿ ಜೀ ಕನ್ನಡ ವಾಹಿನಿ ನಿರೂಪಕಿಯರ ಉದ್ಯೋಗಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಸಂಪರ್ಕಿಸಬೇಕಾದ ವಿವರಗಳ ಜೊತೆಗೆ ತಮ್ಮ ಭಾವಚಿತ್ರವನ್ನು ಲಗತ್ತಿಸಿ ಜೀ ಕನ್ನಡ ವಾಹಿನಿಗೆ ಇ-ಮೇಲ್ ಮಾಡಬೇಕು. ಇ-ಮೇಲ್ ಮಾಡಬೇಕಾದ ವಿಳಾಸ: [email protected]. ಈ ಉದ್ಯೋಗ ಮಹಿಳಾ ಉದ್ಯೋಗಾರ್ಥಿಗಳಿಗೆ ಮಾತ್ರ.

ಬಹಳಷ್ಟು ಮಂದಿ ಟಿವಿ ನಿರೂಪಕಿ ಉದ್ಯೋಗ ಎಂದರೆ ಕೇವಲ ಗ್ಲಾಮರ್ ಒಂದಿದ್ದರೆ ಸಾಕು ಎಂದು ಭಾವಿಸಿರುತ್ತಾರೆ. ಆದರೆ ನಿಜವಾಗಿಯೂ ಟಿವಿ ನಿರೂಪಕಿಯರ ಕೆಲಸ ಅಷ್ಟು ಸುಲಭವಲ್ಲ, ಅದೊಂದು ಚಾಲೆಂಜಿಂಗ್ ಜಾಬ್.

ಪತ್ರಿಕೋದ್ಯಮದ ಗ್ರಾಮರ್ ಗೊತ್ತಿದ್ದು, ತಪ್ಪುಗಳಿಲ್ಲದಂತೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುತ್ತಿದ್ದು, ವಯಸ್ಸು ಇನ್ನೂ ಇಪ್ಪತ್ತೈದರ ಸಮೀಪವಿದ್ದು, ಯಾವುದಾದರೂ ವಿಭಾಗದಲ್ಲಿ ಪದವಿ, ಪತ್ರಿಕೋದ್ಯಮದಲ್ಲಾದರೆ ಇನ್ನೂ ಉತ್ತಮ ಇದ್ದರೆ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

ಸಾಮಾನ್ಯವಾಗಿ ಟಿವಿ ಯ್ಯಾಕರಿಂಗ್ ಉದ್ಯೋಗಗಳು ಕೆಲವು ಅತ್ಯಗತ್ಯ ಸ್ಕಿಲ್ಸ್ ಬಯಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಡೈಡ್ ಲೈನ್ ಒತ್ತಡವನ್ನು ನಿಭಾಯಿಸುವ ಚಾಕಚಕ್ಯತೆ, ಹೊಸ ಹುರುಪು, ದೃಢನಿಷ್ಠೆ, ತಾಳ್ಮೆಯಂತಹ ಗುಣಗಳು ಇರಲೇಬೇಕು.

ಇದರ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವಿರಬೇಕು, ಭಾಷೆಯ ಬಗ್ಗೆ ಹಿಡಿತ, ಒಂಚೂರು ಹಾಸ್ಯಪ್ರಜ್ಞೆ, ಕ್ಯಾಮೆರಾ ಫ್ರೆಂಡ್ಲಿ ಇದ್ದರೆ ಈ ವೃತ್ತಿಯಲ್ಲಿ ನಿಮಗೆ ನೀವೇ ಸಾಟಿ. ಮನರಂಜನಾ ಚಾನಲ್ ಹಾಗೂ ನ್ಯೂಸ್ ಚಾನಲ್ ಅಗತ್ಯಗಳು ಒಂಚೂರು ಭಿನ್ನವಾಗಿರುತ್ತವೆ ಎಂಬುದು ನೆನಪಿರಲಿ. ಆಲ್ ದ ಬೆಸ್ಟ್. (ಒನ್ಇಂಡಿಯಾ ಕನ್ನಡ)

More from Filmibeat

English summary
Do you aspire to become an anchor (Female) on Zee Kannada. If so, please send your photograph with contact details to - feedbackzeekannadazeenetwork.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X