ವೀಕೆಂಡ್ ವಿತ್ ಹಾಟ್ ಸೀಟಲ್ಲಿ ರಮೇಶ್ ಅರವಿಂದ್

By Rajendra

ಸ್ಯಾಂಡಲ್ ವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ರಮೇಶ್ ಅರವಿಂದ್ ನಿರೂಪಿಸುತ್ತಿರುವ ಜೀ ಕನ್ನಡದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಯ ಕೊನೆಯ ಸಂಚಿಕೆಯತ್ತ ದಾಪುಗಾಲಿಟ್ಟಿದೆ. ಇದುವರೆಗೂ ಅದೆಷ್ಟೋ ಮಂದಿ ಸಾಧಕರು ಈ ಕಾರ್ಯಕ್ರಮಕ್ಕೆ ಬಂದು ತಮ್ಮ ಸಾಧನೆಯ ಹಾದಿಯ ಹಿಂದಿನ ನೋವು ನಲಿವು, ಕಷ್ಟ ಸುಖಗಳನ್ನು ಹಂಚಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿ ವೀಕ್ಷಕರಿಗೆ ಈ ಕಾರ್ಯಕ್ರಮ ಮನರಂಜನೆಯ ಜೊತೆಗೆ ಹೊಸ ಸ್ಫೂರ್ತಿ, ಉತ್ಸಾಹಗಳನ್ನೂ ತುಂಬಿದೆ. ಸಂಚಿಕೆಯೊಂದರಲ್ಲಿ ವೀಕ್ಷಕರೊಬ್ಬರು ಸ್ವತಃ ರಮೇಶ್ ಅವರನ್ನು ಕೇಳಿದ್ದರು, ಒಂದು ವೇಳೆ ನೀವೇ ಈ ಹಾಟ್ ಸೀಟ್ ನಲ್ಲಿ ಕೂರುವಂತಾದರೆ ಯಾರು ನಿರೂಪಿಸುತ್ತಾರೆ ಎಂದು. ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. [ವೇಶ್ಯೆಯ ಮಗಳೆಂದು ಪತಿಯಿಂದ ಅವಮಾನ]

Ramesh Aravind

ಆಗ ರಮೇಶ್ ಅರವಿಂದ್ ಅವರು ತಾವೇ ಡಬಲ್ ರೋಲ್ ಮಾಡುತ್ತೇನೆ ಎಂದಿದ್ದರು. ಈಗದು ಬಹುತೇಕ ನಿಜವಾಗುತ್ತಿದೆ. ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಹಾಟ್ ಸೀಟಲ್ಲಿ ಕೂರುತ್ತಿರುವವರು ಅವರೇ. ಆದರೆ ನಿರೂಪಣೆ ಮಾತ್ರ ಅವರದಲ್ಲ.

ಇನ್ಯಾರು ಎಂದರೆ...ಜೀ ಕನ್ನಡ ವಾಹಿನಿ ಮೂಲಗಳ ಪ್ರಕಾರ, ಯಶಸ್ವಿ ನಿರ್ದೇಶಕ, ಖ್ಯಾತ ಗೀತರಚನೆಕಾರ ಯೋಗರಾಜ್ ಭಟ್. ಹೌದು ಈ ಬಾರಿ ನಿರೂಪಣೆ ಭಟ್ಟರದ್ದು. ಹಾಟ್ ಸೀಟಲ್ಲಿ ಕೂರುವುದು ಮಾತ್ರ ರಮೇಶ್ ಅರವಿಂದ್. ಅವರ ಜೀವನದ ಸಾಧನೆಯ ಹೆಜ್ಜೆಗಳ ಹಿಂದಿನ ಕಥೆ ಅಕ್ಟೋಬರ್ 25 ಮತ್ತು 26ರಂದು ಎರಡು ಕಂತುಗಳಲ್ಲಿ ಪ್ರಸಾರವಾಗಲಿದೆ.

ಈ ಮೂಲಕ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಆವೃತ್ತಿಗೆ ತೆರೆಬೀಳಲಿದೆ ಎನ್ನುತ್ತವೆ ಮೂಲಗಳು. ಅಕ್ಟೋಬರ್ 25 (ಶನಿವಾರ) ಮತ್ತು26ರ ಭಾನುವಾರ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ. ಸ್ಯಾಂಡಲ್ ವುಡ್ ನಲ್ಲಿ ತ್ಯಾಗರಾಜ ಎಂದು ಕರೆಸಿಕೊಂಡಿರುವ ರಮೇಶ್ ಅವರ ಹೆಜ್ಜೆ ಗುರುತುಗಳನ್ನು ನೋಡಲು ಮರೆಯದಿರಿ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
The current season of 'Weekend With Ramesh' is nearing its concluding episodes. This weekend (25th and 26th October) Ramesh Aravind will be on hot seat! Director cum lyricist Yograj Bhat will host the show. Don't miss the final show. Tune Into Zee Kannada at 9 to 10 pm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X