For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಈ ವಾರ ರಿಯಾಲಿಟಿ ಶೋಗಳ ಮಹಾಸಂಭ್ರಮ

  |

  ಜೀ ಕನ್ನಡ ವಾಹಿನಿ ಈ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಜನಪ್ರಿಯ ರಿಯಾಲಿಟಿ ಶೋಗಳಾದ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಹಾಗೂ "ಕಾಮಿಡಿ ಕಿಲಾಡಿಗಳು" ಎರಡೂ ಕಾರ್ಯಕ್ರಮಗಳ "ಮಹಾಸಂಭ್ರಮ" ಪ್ರಸಾರ ಮಾಡಲಿದೆ.

  ಲಾಕ್ ಡೌನ್ ಸಮಯದಲ್ಲಿ ಧಾರಾವಾಹಿಗಳ ಮರು ಪ್ರಸಾರದ ಸಮಸ್ಯೆಯಿಲ್ಲದೆ ಹೊಚ್ಚ ಹೊಸ ಕಂಟೆಂಟ್ ಪ್ರಸಾರವಾಗಲಿದೆ. ಜೀ ಕನ್ನಡ ಪ್ರಾರಂಭದಿಂದಲೂ ತನ್ನ ಅಚ್ಚುಮೆಚ್ಚಿನ ವೀಕ್ಷಕರಿಗೆ ವಿಶೇಷ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ.

  ಕನ್ನಡ ಕಿರುತೆರೆ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ 'ಜೊತೆ ಜೊತೆಯಲಿ' ಧಾರಾವಾಹಿಕನ್ನಡ ಕಿರುತೆರೆ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದ 'ಜೊತೆ ಜೊತೆಯಲಿ' ಧಾರಾವಾಹಿ

  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನ ಅದ್ಭುತ ನೃತ್ಯ, ಸರಿಗಮಪದ ಅದ್ಭುತ ಸಂಗೀತ ಕಾರ್ಯಕ್ರಮ ಹಾಗೂ ವಿನೋದಮಯ ಕಾಮಿಡಿ ಕಿಲಾಡಿಗಳು ವೀಕ್ಷಕರನ್ನು ರಂಜಿಸಿವೆ. ಪ್ರತಿವಾರ ವಿನೂತನ ಬಗೆಯ ಕಾರ್ಯಕ್ರಮಗಳನ್ನು ರೂಪಿಸುವ ಈ ವಾಹಿನಿಯು ಈ ಬಾರಿ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ.

  ಅನುಶ್ರೀ ನಿರೂಪಣೆಯ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದು ಜನಮನ್ನಣೆ ಪಡೆದಿದೆ. ಹಾಗೆಯೇ ನಟ ಮಾಸ್ಟರ್ ಆನಂದ್ ನಿರೂಪಣೆಯ "ಕಾಮಿಡಿ ಕಿಲಾಡಿಗಳು" ಇಡೀ ಕರ್ನಾಟಕವನ್ನು ಹಾಸ್ಯದಲ್ಲಿ ಮುಳುಗಿಸಿದೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಅಭೂತಪೂರ್ವ ಮನರಂಜನೆಯ ಭರವಸೆ ನೀಡಲಿದೆ.

  ಸರಿಗಮಪ ತನ್ನ ಪ್ರತಿ ಸೀಸನ್ ಗೂ ಜನಪ್ರಿಯತೆ ಹೆಚ್ಚಿಸಿಕೊಂಡು ಹಲವು ಜನಪ್ರಿಯ ಗಾಯಕರನ್ನು ಹುಟ್ಟು ಹಾಕಿದೆ. ಈ ಗಾಯಕರು ಜೀ ಕನ್ನಡ ವೀಕ್ಷಕರಿಗೆ ಮನರಂಜನೆಯ ಭರಪೂರ ನೀಡಲಿದೆ.

  ವಾರಾಂತ್ಯದ ಭರಪೂರ ರಂಜನೆಗೆ ಅನುಶ್ರೀ, ಆನಂದ್ ನಿರೂಪಣೆ ಮೆರುಗು ಹೆಚ್ಚಿಸಲಿದೆ. ಈ ವಾರಾಂತ್ಯಕ್ಕೆ ನೀವು ಬೇರೆ ಯಾವುದೇ ಚಾನೆಲ್ ಹುಡುಕಾಟ ನಡೆಸದೆ ಜೀ ಕನ್ನಡ ಟ್ಯೂನ್ ಆಗಿರಿ ಹಾಗೂ ಮನರಂಜನೆಯನ್ನು ಹೊಂದಿರಿ.

  English summary
  Zee kannada will telecast special episode of Comedy khiladigalu, saregamapa and dance karnataka dance on this weekend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X