ಅದ್ದೂರಿಯಾಗಿ ತೆರೆಕಂಡ ಜೀ ಕುಟುಂಬ ಅವಾರ್ಡ್ಸ್..! ಯಾರು ಯಾರಿಗೆ ಯಾವ ಕ್ಯಾಟಗರಿಯಲ್ಲಿ ಪ್ರಶಸ್ತಿ

By Shruthi Harishgowda

ಜೀ ಕುಟುಂಬ ಅವಾರ್ಡ್ಸ್-2023 ಮೂರು ದಿನಗಳ ಕಾಲ ನಡೆದು ಅದ್ದೂರಿಯಾಗಿ ತೆರೆ ಕಂಡಿದೆ. ಹಲವಾರು ಧಾರಾವಾಹಿಗಳ ನಡುವೆಯೂ ಕೂಡ ಹೊಸ ಧಾರವಾಹಿಗಳು ಸ್ಥಾನ ಪಡೆದಿದ್ದು ಎಲ್ಲರ ಹರ್ಷಕ್ಕೆ ಕಾರಣವಾಗಿದೆ. ಅಮೃತಧಾರೆ ಹಾಗೂ ಸೀತಾರಾಮ ಈ ಎರಡು ಧಾರಾವಾಹಿಗಳು ಸ್ಥಾನವನ್ನು ಪಡೆದು ಪ್ರಶಸ್ತಿಗಳನ್ನ ಗಿಟ್ಟಿಸಿಕೊಂಡಿದೆ. ಉದಯೋನ್ಮುಖ ಪ್ರತಿಭೆಯಾಗಿ ಸಿಹಿ ಸ್ಥಾನವನ್ನು ಪಡೆದುಕೊಂಡಿದ್ದು, ಎಲ್ಲರ ಮುಖದಲ್ಲೂ ಮಂದಹಾಸವನ್ನೇ ತಂದಿದೆ. ಸಿಹಿ ಅಭಿಮಾನಿಗಳಿಗಂತೂ ಸಿಕ್ಕಾಪಟ್ಟೆ ಸಿಹಿಯನ್ನೇ ಕೊಟ್ಟಂತೆ ಆಗಿದೆ. ಸೀತಾರಾಮ ಧಾರಾವಾಹಿಯಲ್ಲಿ ಪುಟಾಣಿಯ ಪಾತ್ರ ಮಾಡುತ್ತಿರುವ ಸಿಹಿ ಈಗಾಗಲೇ ಜನರ ಮನಸ್ಸಿನಲ್ಲಿ ಜಾಗವನ್ನ ಪಡೆದುಕೊಂಡಿದ್ದಾಳೆ.

ನಟಿ ಉಮಾಶ್ರೀ ಅವರಿಗೆ ಜೀ ಕನ್ನಡದ ಹೆಮ್ಮೆ ಎಂಬ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ನಟ ರವಿಚಂದ್ರನ್ ಉಮಾಶ್ರೀ ಅವರಿಗೆ ಜೀ ಕನ್ನಡದ ಹೆಮ್ಮೆ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ. ತಮಗೆ ಬಂದ ಪ್ರಶಸ್ತಿಯನ್ನ ಕಲಾ ಜಗತ್ತಿಗೆ ಉಮೇಶ್ರಿ ಅವರು ಸಮರ್ಪಣೆ ಮಾಡಿದರು. ಸಂದರ್ಭದಲ್ಲಿ ಕಿರಿಯ ಕಲಾವಿದರಿಗೆ ಹಿರಿಯ ಕಲಾವಿದೆ ಉಮಾಶ್ರೀ ಅವರು ಒಂದಷ್ಟು ಕಿವಿ ಮಾತನ್ನ ಹೇಳಿದರು ಕಷ್ಟಗಳು ಜೀವನದಲ್ಲಿ ಬಂದೇ ಬರುತ್ತವೆ ಅವುಗಳೆಲ್ಲವನ್ನ ಮೀರಿ ಸಾಧನೆ ಮಾಡಬೇಕು ಎಂದು ಮಾರ್ಗದರ್ಶನ ನೀಡಿದರು.

zee-kannada-zee-kutumbha-awards-2023

ಜೀ ಕನ್ನಡದ ನೆಚ್ಚಿನ ನಿರ್ದೇಶಕರಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮಹೇಶ್ ಸಾರಂಗ್ ಮತ್ತು ಸೀತಾರಾಮ ಧಾರಾವಾಹಿಯ ನಿರ್ದೇಶಕರಾದ ಮಧುಸೂದನ್ ಆಯ್ಕೆಯಾಗಿ ಪ್ರಶಸ್ತಿ ಪಡೆದರು. ಜನಪ್ರಿಯ ಆ್ಯಂಕರ್ ಆಗಿ ಅನುಶ್ರೀ ಅವಾರ್ಡ್ ಪಡೆದರೆ ನೆಚ್ಚಿನ ಆ್ಯಂಕರ್ ಆಗಿ ಕುರಿ ಪ್ರತಾಪ್ ಹಾಗೂ ಶ್ವೇತಾ ಚಂಗಪ್ಪ ಇಬ್ಬರು ಪ್ರಶಸ್ತಿಯಲ್ಲಿ ಪಾಲು ಪಡೆದುಕೊಂಡರು. ನೆಚ್ಚಿನ ಸಂಕಲನಕಾರರಾಗಿ ಸೀತಾರಾಮ ಧಾರಾವಾಹಿಯ ಉದಯ್ ಹಾಗೂ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಎಡಿಟರ್ ಇಮ್ರಾನ್ ಪ್ರಶಸ್ತಿಯನ್ನು ಪಡೆದುಕೊಂಡರು.

ಪ್ರಶಸ್ತಿ ಬಾಚಿಕೊಂಡ ಹೊಸ ಧಾರಾವಾಹಿಗಳು

ಸೀತಾರಾಮ ಹಾಗೂ ಅಮೃತಧಾರೆ ಧಾರಾವಾಹಿಗಳು ಪ್ರಶಸ್ತಿಯನ್ನೇ ಬಾಚಿ ಕೊಂಡಿವೆ. ಸೀತಾರಾಮ ಧಾರಾವಾಹಿಗಾಗಿ ನೆಚ್ಚಿನ ಚಿತ್ರಕಥೆ ಬರಹಗಾರ್ತಿ ಪ್ರಶಸ್ತಿಯನ್ನು ರಶ್ಮಿ ಪಡೆದುಕೊಂಡಿದ್ದಾರೆ. ಸಂಭಾಷಣೆಯಕಾರರಾಗಿ ಅಮೃತಧಾರೆಯ ಗೌತಮ್ ಹೆಗಡೆ ಅವರು ಅವಾರ್ಡ್ ಪಡೆದುಕೊಂಡಿದ್ದಾರೆ. ನೆಚ್ಚಿನ ಖಳನಾಯಕಿಯಾಗಿ ಸೀತಾರಾಮ ಧಾರಾವಾಹಿಯ ಭಾರ್ಗವಿಯವರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಜೀ ಕನ್ನಡದ ವರ್ಷದ ಉದಯೋನ್ಮುಖ ತಾರೆಯಾಗಿ ಸೀತಾರಾಮದ ಸಿಹಿಗೆ ಪ್ರಶಸ್ತಿ ಒಲಿದು ಬಂದಿದೆ. ನೆಚ್ಚಿನ ನಾಯಕ ನಟನಾಗಿ ಅಮೃತಧಾರೆಯ ಗೌತಮ್ ಹಾಗೂ ಭೂಮಿಗೆ ಬಂದ ಭಗವಂತ ಧಾರವಾಹಿಯ ಶಿವಪ್ರಸಾದ್ ಅವಾರ್ಡ್ ಪಡೆದುಕೊಂಡಿದ್ದಾರೆ. ಜನಪ್ರಿಯ ನಾಯಕ ನಟ ಪ್ರಶಸ್ತಿ ಸೀತಾರಾಮದ ರಾಮಗೆ ಒಲಿದು ಬಂದಿದೆ.

ಇನ್ನು ಪುಟ್ಟಕ್ಕನ ಮಕ್ಕಳ ಕಂಠಿ ಸಹ ಜನಪ್ರಿಯ ನಾಯಕ ನಟನಾಗಿ ಪಾಲು ಪಡೆದಿದ್ದಾರೆ. ಹಾಸ್ಯ ಕಲಾವಿದರಾಗಿ ಅಮೃತಧಾರೆಯ ಆನಂದ್ ಪ್ರಶಸ್ತಿ ಪಡೆದುಕೊಂಡಿದ್ದು ನೆಚ್ಚಿನ ಸ್ನೇಹಿತನಾಗಿ ಸೀತಾರಾಮದ ಅಶೋಕ್ ತಮ್ಮ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಜನಪ್ರಿಯ ನಾಯಕ ನಟಿಯಾಗಿ ಅಮೃತಧಾರೆಯ ಭೂಮಿಕಾ ಸೀತಾರಾಮದ ಸೀತಾ ಇಬ್ಬರಿಗೂ ಪ್ರಶಸ್ತಿ ಒಲಿದುಬಂದಿದೆ ಒಟ್ಟಾರೆಯಾಗಿ ಎರಡು ಹೊಸ ಧಾರಾವಾಹಿಗಳು ವಿವಿಧ ಕ್ಯಾಟಗರಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಬೆಸ್ಟ್ ಸೊಸೆಯಾಗಿ ಸತ್ಯ ಧಾರಾವಾಹಿಯ ಸತ್ಯ ಹಾಗೂ ಕಲ್ಯಾಣದಲ್ಲಿನ ಪ್ರಶಸ್ತಿ ಬಾಚಿಕೊಂಡಿದ್ದಾರೆ.

zee-kannada-zee-kutumbha-awards-2023

ಜನಪ್ರಿಯ ರಿಯಾಲಿಟಿ ಶೋ ಯಾವುದು?

ಜನಪ್ರಿಯ ರಿಯಾಲಿಟಿ ಶೋ ಆಗಿ ಭರ್ಜರಿ ಬ್ಯಾಚುಲರ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಮೆಚ್ಚಿನ ಸ್ಟೈಲ್ ಐಕಾನ್ ಫೀಮೇಲ್ ನಲ್ಲಿ ಅಮೃತಧಾರೆಯ ಮಹಿಮಾ ಪ್ರಶಸ್ತಿ ಪಡೆದಿದ್ದಾರೆ. ಹೆಚ್ಚಿನ ಸಹೋದರನಾಗಿ ಅಮೃತಧಾರೆಯ ಜೀವನ ಹಾಗೂ ನೆಚ್ಚಿನ ಸಹೋದರಿಯರಾಗಿ ಸುಮಾರ್ ಸ್ನೇಹ ಮಕ್ಕಳು ಇವರು ಅವಾರ್ಡ್ ಪಡೆದುಕೊಂಡಿದ್ದಾರೆ. ನೆಚ್ಚಿನ ಪೋಷಕ ನಟನ ಪಾತ್ರ ಮಾಡಿರುವ ಭೂಮಿಗೆ ಬಂದ ಭಗವಂತದ ಶಿವ, ಸತ್ಯ ಧಾರವಾಹಿಯ ದಿವ್ಯ, ಶುಭಮಸ್ತು ಧಾರಾವಾಹಿಯ ಪೂರ್ಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ನೆಚ್ಚಿನ ಅಪ್ಪನಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮಾಧವ, ನೆಚ್ಚಿನ ಮಗನಾಗಿ ಧಾರಾವಾಹಿಯ ಆದಿ ನೆಚ್ಚಿನ ಮಗಳಾಗಿ ಪಾರು ಧಾರಾವಾಹಿಯ ಪಾರು, ತಮ್ಮ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.‌ಇನ್ನು ನೆಚ್ಚಿನ ಅಮ್ಮನಾಗಿ ಅಮೃತಧಾರೆಯ ಮಂದಾಕಿನಿ ಹಾಗೂ ಗಟ್ಟಿಮೇಳದ ಧಾರಾವಾಹಿಯ ವೈದೇಹಿ ಅವಾರ್ಡ್ ಪಡೆದುಕೊಂಡಿದ್ದಾರೆ. ನೆಚ್ಚಿನ ನಾಯಕ ನಟಿಯಾಗಿ ಭೂಮಿಗೆ ಬಂದ ಭಗವಂತಾದ ಗಿರಿಜಾ ಹಾಗೂ ನೆಚ್ಚಿನ ನಾಯಕ ನಟಿಯಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ತುಳಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಹೀಗೆ ಹಲವರು ಕ್ಯಾಟಗರಿಗಳಲ್ಲಿ ವಿವಿಧ ಧಾರಾವಾಹಿ ತಂಡಗಳು ಪ್ರಶಸ್ತಿಯನ್ನು ಮುಡುಗೇರಿಸಿಕೊಂಡು ಸಂಭ್ರಮವನ್ನು ಪಟ್ಟಿದ್ದಾರೆ.

More from Filmibeat

English summary
zee Kannada zee kutumbha awards 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X