'ಗಟ್ಟಿಮೇಳ' ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ಬರುತ್ತಿದೆ ಮತ್ತೊಂದು ಹೊಸ ಕತೆ
ಗಟ್ಟಿಮೇಳ ಧಾರಾವಾಹಿ ಈಗ ಕೊನೆಯ ಹಂತವನ್ನು ತಲುಪಿದೆ. 2019ರ ಮಾರ್ಚ್ 11 ರಂದು ಗಟ್ಟಿಮೇಳ ಧಾರಾವಾಹಿ ಪ್ರಾರಂಭವಾಯ್ತು. ಇದುವರೆಗೂ 1215 ಸಂಚಿಕೆಗಳು ಪ್ರಸಾರಗೊಂಡಿದೆ.
ಒಂದು ದಿನವೂ ಗಟ್ಟಿಮೇಳ ಧಾರಾವಾಹಿ ಟಿಆರ್‌ಪಿಯಲ್ಲಿ ಕಾಂಪ್ರಮೈಸ್ ಆಗಿಲ್ಲ. ವೇದ್ಯಾ ಜೋಡಿ ಟಾಪ್ ಲಿಸ್ಟ್‌ನಲ್ಲೇ ಇದ್ದು ಮುಂದೆ ಸಾಗಿದ್ದಾರೆ.
ಹಬ್ಬ ಹರಿದಿನಗಳಲ್ಲಿ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡುತ್ತಾ, ಸತ್ಯಕ್ಕೆ ಯಾವತ್ತೂ ಸೋಲಿಲ್ಲ. ನ್ಯಾಯ ಒಂದಲ್ಲ ಒಂದು ದಿನ ಗೆದ್ದೆ ಗೆಲ್ಲುತ್ತದೆ ಎಂಬುದನ್ನು ಧಾರಾವಾಹಿಯಲ್ಲಿ ತೋರಿಸುತ್ತಾ ಬರಲಾಗುತ್ತಿದೆ.

ಗಟ್ಟಿಮೇಳ ಧಾರಾವಾಹಿಯ ಕಥೆ ಏನು..?
ವಸಿಷ್ಠ ಕುಟುಂಬಕ್ಕೆ ಸೇರಿದ ಮೂವರು ಗಂಡು ಮಕ್ಕಳಾದ ವೇದಾಂತ್, ವಿಕ್ರಾಂತ್, ಧ್ರುವ ಹಾಗೂ ಹೆಣ್ಣು ಮಗು ಆದ್ಯಳನ್ನು ಚಿಕ್ಕಮ್ಮ ಸುಹಾಸಿನಿ ಸಾಕಿ ಸಲಹಿರುತ್ತಾಳೆ. ಅದೂ ಕೂಡ ಕೆಟ್ಟ ಉದ್ದೇಶದಿಂದ. ಸೂರ್ಯ ನಾರಾಯಣ ವಸಿಷ್ಠ ಹಾಗೂ ವೈದೇಹಿಯನ್ನು ಕೊಂದ ಸುಹಾಸಿನಿ. ಮಕ್ಕಳಿಂದ ಸತ್ಯ ಮುಚ್ಚಿಟ್ಟು, ಬೆಂಕಿ ಅವಘಢದಲ್ಲಿ ಅಪ್ಪ-ಅಮ್ಮ ತೀರಿ ಹೋದರು ಎಂದು ಹೇಳಿರುತ್ತಾಳೆ. ಆದರೆ, ವೈದೇಹಿಯನ್ನು 25 ವರ್ಷಗಳ ಕಾಲ ಕೂಡಿ ಹಾಕಿರುತ್ತಾಳೆ. ಸುಹಾಸಿನಿಯನ್ನು ವೇದಾಂತ್ ಸಂಪೂರ್ಣವಾಗಿ ನಂಬಿರುತ್ತಾನೆ.
ವೈದೇಹಿಗೆ ಸಿಕ್ಕಿತು ನ್ಯಾಯ
ಪರಿಮಳ ಹಾಗೂ ಮಂಜುನಾಥ್ ಅವರ ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂವರು ವಸಿಷ್ಠ ಕುಟುಂಬದವರನ್ನೇ ಪ್ರೀತಿಸಿ ಮದುವೆಯಾಗುತ್ತಾರೆ. ವೇದಾಂತ್ ಮತ್ತು ಅಮೂಲ್ಯ ಜೋಡಿ ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಈಗ ವೇದಾಂತ್ ತಾಯಿ ಮತ್ತು ತಂದೆಯನ್ನು ಹುಡುಕಲಾಗಿದೆ. ಸುಹಾಸಿನಿ ಕಥೆಯು ಅಂತ್ಯವಾಗುತ್ತಿದೆ. ವೈದೇಹಿಗೆ ವಸಿಷ್ಢ ಕಂಪನಿಯ ಸಿಇಒ ಸ್ಥಾನವನ್ನು ನೀಡಲಾಗಿದೆ. ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದ್ದು, ವೈದೇಹಿಗೆ ಅಮೂಲ್ಯ ನ್ಯಾಯ ಒದಗಿಸಿ ಕೊಟ್ಟಿದ್ದಾಳೆ. ಸುಹಾಸಿನಿಗೆ ಮಾಡಿದ ತಪ್ಪಿಗೆ ಶಿಕ್ಷೆಯಾಗುವುದೊಂದೇ ಬಾಕಿ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಧಾರಾವಾಹಿಯು ಮುಕ್ತಾಯಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವೇದ್ಯಾ ಜೋಡಿಯ ಫ್ಯಾನ್ ಪೇಜ್
ಈ ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ವೇದಾಂತ್ ಜೋಡಿಯನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಇವರಿಬ್ಬರ ರೊಮ್ಯಾಂಟಿಕ್ ಸೀನ್‌ಗಳನ್ನು ನೋಡಲು ಬಯಸುತ್ತಾರೆ. ವೇದ್ಯಾ ಎಂದೇ ಇಬ್ಬರ ಫ್ಯಾನ್ಸ್ ಪೇಜ್ ಅನ್ನು ಕೂಡ ಅಭಿಮಾನಿಗಳು ತೆರೆದಿದ್ದಾರೆ. ಧಾರಾವಾಹಿ ಶುರುವಾದಾಗಿನಿಂದಲೂ, ರೌಡಿ ಬೇಬಿ ಅಮೂಲ್ಯ ಹಾಗೂ ವೇದಾಂತ್ ಅನ್ನು ನಂಬರ್ ಒನ್ ಸ್ಥಾನದಲ್ಲೇ ಇಟ್ಟಿದ್ದಾರೆ. ಕಳೆದ ನಾಲ್ಕೂವರೆ ವರ್ಷದಿಂದ ಗಟ್ಟಿಮೇಳ ಧಾರಾವಾಹಿ ಪ್ರೈಮ್ ಟೈಮ್ 8ಗಂಟೆಯನ್ನು ಯಾವ ಧಾರಾವಾಹಿಗೂ ಬಿಟ್ಟುಕೊಟ್ಟಿಲ್ಲ. ಟಿಆರ್‌ಪಿ ಅಲ್ಲೂ ಕೂಡ ಕಾಂಪ್ರಮೈಸ್ ಆಗಿಲ್ಲ. ಟಾಪ್ ಸ್ಥಾನದಲ್ಲಿದ್ದುಕೊಂಡೇ ಈಗ ಮುಕ್ತಾಯದ ಹಂತ ತಲುಪಿದೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.
ಹೊಸ ಧಾರಾವಾಹಿ ಪ್ರಸಾರ
ಇನ್ನು ಗಟ್ಟಿಮೇಳ ಧಾರಾವಾಹಿ ಮುಗಿಯುತ್ತಿದ್ದಂತೆ ಇದೇ ಸಮಯದಲ್ಲಿ ಪ್ರಸಾರವಾಗಲು ಮತ್ತೊಂದು ಧಾರಾವಾಹಿ ಕಾಯುತ್ತಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಜೀ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯ ಪ್ರೋಮೋ ನೋಡಿ ಜನ ಖುಷಿ ಪಟ್ಟಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ಮೂಡಿ ಬರುತ್ತದೆ ಎಂದು ನೀರೀಕ್ಷಿಸಿದ್ದಾರೆ. ಆದರೆ, ಈ ಬಗ್ಗೆ ವಾಹಿನಿ ಇನ್ನೂ ಯಾವುದೇ ಖಚಿತ ಮಾಹಿತಿಯನ್ನು ನೀಡಿಲ್ಲ. ಇದರಲ್ಲಿ ಚೈತ್ರದ ಪ್ರೇಮಾಂಜಲಿ ಚಿತ್ರದ ನಟಿ ಶ್ವೇತಾ ನಟಿಸಿದ್ದಾರೆ. ಶ್ವೇತಾ ಅವರು ಕಮ್ ಬ್ಯಾಕ್ ಮಾಡಿರುವುದಕ್ಕೆ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











