ತಾಯಿಯನ್ನು ನೆನೆದು ಭಾವುಕರಾದ ಭೂಮಿಕಾ, ಅಮ್ಮನ ಕಷ್ಟ ನೆನೆದು ಕಣ್ಣೀರು ಹಾಕಿದ ಸಿಹಿ..!

By ಪೂರ್ವ

ಅಮೃತದಾರೆ ಧಾರಾವಾಹಿಯ ಮೂಲಕ ಎಲ್ಲರ ಮನ ಗೆದ್ದ ಚೆಲುವೆ ಭೂಮಿಕಾ ಅಲಿಯಾಸ್ ಛಾಯಾಸಿಂಗ್. ಛಾಯಾ ಸಿಂಗ್ ಅವರು ಸಿನಿಮಾದಲ್ಲಿ ನಟನೆ ಮಾಡಿ ತನ್ನದೇ ಆದ ಛಾಪನ್ನ ಮೂಡಿಸಿದವರು. ಹಲವಾರು ಸೂಪರ್ ಹಿಟ್ ಸಿನಿಮಾವನ್ನು ಇವರು ಕನ್ನಡಿಗರಿಗೆ ನೀಡಿದ್ದಾರೆ. ಇವರು ಕನ್ನಡ ಮಾತ್ರ ಅಲ್ಲ ಬೇರೆ ಭಾಷೆಯಲ್ಲೂ ಕೂಡ ಅಭಿನಯ ಮಾಡಿದ್ದಾರೆ.

ಅಮೃತಧಾರೆ ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ಚೆಲುವು ಈಕೆಯದ್ದು. ಭೂಮಿಕಾ ಪಾತ್ರದಲ್ಲಿ ಎಲ್ಲರ ಮನಸನ್ನು ಗೆದ್ದಿರುವ ಚೆಲುವೆಯ ನೋಟಕ್ಕೆ ಫಿದಾ ಆಗದವರೆ ಇಲ್ಲ. ಇವರ ಅಭಿನಯಕ್ಕೆ ಅನೇಕ ಜನರು ಫಿದಾ ಆಗಿದ್ದಾರೆ. ಈಗಾಗಲೇ ಜೀ ವಾಹಿನಿಯಲ್ಲಿ ಜೀ ಕುಟುಂಬ ಅವಾರ್ಡ್ಸ್ 2024 ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಇಂದು ಸಂಜೆ 5.30 ರ ವೇಳೆಗೆ ಪ್ರಸಾರ ಆಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ತಾಯಿಯ ಬಗೆಗಿನ ಮಮತೆಯ ಬಗ್ಗೆ ಛಾಯ ಸಿಂಗ್ ಅವರು ಬಿಚ್ಚಿಟ್ಟಿದ್ದಾರೆ.

Zee kutumba award 2024 Nomination event

ತನ್ನ ತಾಯಿ ಎಂದರೆ ಛಾಯಾ ಸಿಂಗ್ ಅವರಿಗೆ ಬಹಳಷ್ಟು ಪ್ರೀತಿ. ಅದೆಷ್ಟೇ ಕಷ್ಟ ಬಂದರೂ ಕೂಡ ತನ್ನ ಮಗಳು ಒಬ್ಬ ಒಳ್ಳೆಯ ಕಲಾವಿದೆ ಆಗಬೇಕು ಎನ್ನುವ ಆಸೆ ಆಕೆಯ ಅಮ್ಮನಿಗೆ ಇತ್ತು. ಬಹಳ ದೊಡ್ಡ ಕುಟುಂಬದಿಂದ ಬಂದಾಕೆ ಛಾಯಾ ಸಿಂಗ್ ಅವರು ವೇದಿಕೆಯಲ್ಲಿ ತನ್ನ ತಾಯಿಯ ತ್ಯಾಗದ ಬಗ್ಗೆ ಹಾಗೆಯೇ ಆಕೆ ತನಗೆ ಸಪೋರ್ಟ್ ಮಾಡಿದ ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಭೂಮಿಕಾ ಮಾತ್ರ ಅಲ್ಲ ಉಳಿದ ನಾಯಕಿಯರು ಕೂಡ ತನ್ನ ತಾಯಿಯ ತ್ಯಾಗದ ಬಗ್ಗೆ ಬಹಳ ಹೆಮ್ಮೆಯಿಂದ ಮಾತಾನಾಡಿದ್ದಾರೆ.

ತಾಯಿಯ ಬಗ್ಗೆ ಮೆಚ್ಚುಗೆ ಮಾತನಾಡಿದ ಛಾಯಾ ಸಿಂಗ್

ಇನ್ನೂ ಛಾಯಾ ಸಿಂಗ್ ಅವರು ಮೊದಲಿಗೆ ಈ ಅವಾರ್ಡ್ ಕಾರ್ಯಕ್ರಮದಲ್ಲಿ ತನ್ನ ಮನದಲ್ಲಿರುವ ವಿಚಾರವನ್ನು ಹೇಳಿಕೊಳ್ಳುತ್ತಾರೆ, ತನ್ನ ತಾಯಿಯಿಂದಾಗಿ ನಾನು ಇಲ್ಲಿ ತನಕ ಬರಲು ಸಾಧ್ಯ ಆಯಿತು. ನಾನು ಇಲ್ಲಿ ಇರೋದಕ್ಕೆ ಕಾರಣ ನನ್ನ ತಾಯಿ, ಠಾಕೂರ್ ಫ್ಯಾಮಿಲಿ ಎಂದರೆ ಬಹಳ ರಿಸ್ಟ್ರೀಕ್ಷನ್ಸ್ ಹಾಗೆಯೇ ತುಂಬಾ ಆರ್ಥಡಕ್ಸ್ ಫ್ಯಾಮಿಲಿ, ನನ್ನಮ್ಮ ಈ ಇಂಡಸ್ಟ್ರಿಗೆ ಬಂದ ಮೇಲೆ ಕೂಡ ತುಂಬಾ ಕಷ್ಟ ಇತ್ತು . ಅಂತಹ ಫ್ಯಾಮಿಲಿಯಿಂದ ನಾನು ಗ್ಲಾಮರ್ ಲೋಕಕ್ಕೆ ಬರಬೇಕು ಎಂದರೆ ನನ್ನ ಮನೆಯಲ್ಲಿ ಬಹಳ ವಿರೋಧ ಮಾಡಿದರು. ನನ್ನ ತಾಯಿ ನನ್ನ ಮಗಳಿಗೆ ತುಂಬಾ ಟ್ಯಾಲೆಂಟ್ ಇದೆ ನಾನು ಅದಕ್ಕೆ ಸಪೋರ್ಟ್ ಮಾಡುತ್ತೇನೆ ಎಂದು ಹೇಳಿ ನನ್ನನ್ನು ಈ ಇಂಡಸ್ಟ್ರಿ ಗೆ ಬರುವ ಹಾಗೆ ಮಾಡಿದರು ಎಂದು ಹೇಳುತ್ತ ಬಹಳ ಭಾವುಕರಾಗಿದ್ದಾರೆ.

ಅಮ್ಮನಿಗೆ ಧನ್ಯವಾದ ಹೇಳಿದ ನಟಿ..!

ಹಾಗೆಯೇ ತನ್ನ ತಾಯಿಗೆ ಅಮ್ಮ ನಿನಗೆ ತುಂಬಾ ಧನ್ಯವಾದಗಳು, ನನಗೆ ಎಲ್ಲವನ್ನೂ ನೀನು ಕೊಟ್ಟಿದ್ದಿಯಾ, ತಂದೆ ಪ್ರೀತಿ , ಅಣ್ಣನ ಪ್ರೀತಿ ಎಲ್ಲವನ್ನೂ ನೀನು ನನಗೆ ನೀಡಿದ್ದಿಯಾ, ನಿನಗೆ ನಾನು ಎಷ್ಟು ಧನ್ಯವಾದ ಹೇಳಿದರು ಸಾಲದು. ನಿಮ್ಮನ್ನು ನೀನು ಮಿಸ್ ಮಾಡಿಕೊಳ್ಳುತ್ತೇನೆ ಹಾಗೆಯೇ ನಿನಗೆ ನಾನು ಮಾತಿನ ಭರದಲ್ಲಿ ನೋವು ಮಾಡಿದರೆ ನನ್ನನ್ನು ಕ್ಷಮಿಸಿ ಬಿಡಿ ಎಂದು ಛಾಯಾ ಸಿಂಗ್ ಅವರು ಬಹಳ ಭಾವುಕರಾಗಿದ್ದಾರೆ. ಹಾಗೆಯೇ ಸೀತಾ ರಾಮ ಧಾರಾವಾಹಿಯನ್ನು ನಟನೆ ಮಾಡುತ್ತಿರುವ ಪುಟ್ಟ ಬಾಲಕಿ ಕೂಡ ಬಹಳಷ್ಟು ಕಷ್ಟ ಪಟ್ಟು ಬೆಳೆದಂತಹ ಬಾಲ ಪ್ರತಿಭೆ.

ಕಷ್ಟದ ದಿನದಲ್ಲಿ ಕಾಲ ಕಳೆದ ಸಿಹಿ

ಮೆಜೆಸ್ಟಿಕ್ ನಲ್ಲಿ ಇದ್ದು ಕಾಲ ಕಳೆಯುತ್ತಿದ್ದರು. ಆದರೆ ಸಿಹಿ ಗೆ ಸೀತಾರಾಮ ಧಾರಾವಾಹಿಯಲ್ಲಿ ನಟನೆ ಮಾಡಿದ ಬಳಿಕ ಆಕೆಯ ಮನೆಯವರಿಗೆ ಉಳಿದುಕೊಳ್ಳಲು ಒಂದು ಮನೆ ಎಂದು ಆಗಿದ್ದು ಜೀವನ ಕಟ್ಟಿಕೊಳ್ಳಲು ಆಗಿದ್ದು ಎಂದು ಅಕುಲ್ ಅವರು ಹೇಳಿದಾಗ ಸಿಹಿ ತಾಯಿ ಕಣ್ಣೀರು ಹಾಕುತ್ತಾರೆ. ಅಷ್ಟು ಕಷ್ಟದ ದಿನಗಳನ್ನು ನೋಡಿದ್ದರು. ಕೊನೆ ಕ್ಷಣದಲ್ಲಿ ಸೀತಾರಾಮ ಧಾರಾವಾಹಿಯ ಮೂಲಕ ಅವರಿಗೆ ಅವಕಾಶ ಸಿಕ್ಕಿರುವುದು ತಿಳಿದು ಬಹಳಷ್ಟು ಖುಷಿ ಪಟ್ಟರು. ಇದೆಲ್ಲವನ್ನೂ ಅಕುಲ್ ಬಾಲಾಜಿ ಅವರು ಸಿಹಿ ಬಳಿ ಹೇಳಿದಾಗ ಸಿಹಿ ಗೆ ಅಳು ತಡೆದುಕೊಳ್ಳಲು ಆಗುವುದಿಲ್ಲ. ತನ್ನ ತಾಯಿ ಪಟ್ಟ ಕಷ್ಟವನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅವರನ್ನು ಇಡೀ ಜೀ ವಾಹಿನಿಯ ನಾಯಕಿಯರು ಬಂದು ಸಂತೈಸುತ್ತಾರೆ. ಹಾಗೆಯೇ ಸೀತಾ ಹಾಗೂ ರಾಮ್ ಕೂಡ ವೇದಿಕೆಗೆ ಬಂದು ಸಿಹಿಯನ್ನು ಸಂತೈಸುತ್ತಾರೆ. ಕೊನೆಗೆ ಸೀರಿಯಲ್ ತಾಯಿ ಹಾಗೆಯೇ ರಿಯಲ್ ತಾಯಿ ಇಬ್ಬರೂ ಸಿಹಿ ಪುಟಾಣಿಯ ಕೆನ್ನೆಗೆ ಮುತ್ತನ್ನು ಇಡುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X