Zee Kutumba Award 2024; ಜೀ ಕನ್ನಡ ಕುಟುಂಬ ಅವಾರ್ಡ್ ನಾಮಿನೇಷನ್ ಪಾರ್ಟಿಯಲ್ಲಿ ತಾರೆಯರ ದಂಡು
ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಪ್ರಸಾರ ಆಗಲಿರುವ ಪ್ರತಿಷ್ಠಿತ ಪ್ರಶಸ್ತಿ ಕಾರ್ಯಕ್ರಮ ಜೀ ಕನ್ನಡದ ಕುಟುಂಬ ಅವಾರ್ಡ್ಸ್ 2024ಗೆ ಸಕಲ ಸಿದ್ಧತೆಗಳು ಆರಂಭ ಆಗಿವೆ. ಜೀ ಕನ್ನಡದಲ್ಲಿ ಪ್ರಸಾರವಾದ ಕಿರುತೆರೆಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಅವರಿಗೆ ಗೌರವಿಸಲಾಗುತ್ತೆ.
ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ವಾಹಿನಿ ಪ್ರಸಾರ ಆಗುತ್ತಿರುವ ಧಾರಾವಾಹಿಯ ಎಲ್ಲಾ ಕಲಾವಿದರೂ ಆಗಮಿಸುತ್ತಾರೆ. ಈ ವರ್ಷ ಅದ್ಭುತ ಪ್ರದರ್ಶನ ನೀಡಿದ ನಟ ನಟಿ, ತಂತ್ರಜ್ಞರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತೆ. ಹಾಗೇ ಈ ಬಾರಿ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಪ್ರಶಸ್ತಿಗಳನ್ನು ಎಕ್ಸ್‌ಪೆಕ್ಟ್ ಮಾಡಬಹುದು.

ಜೀ ಕುಟುಂಬ ಅವಾರ್ಡ್ ಕೇವಲ ಪ್ರಶಸ್ತಿ ಸಮಾರಂಭ ಅಷ್ಟೇ ಅಲ್ಲ. ಇಲ್ಲಿ ಮನೋರಂಜನೆಯ ಜೊತೆಗೆ ಕಾರ್ಯಕ್ರಮ ಕೂಡ ಇರುತ್ತೆ. ಉತ್ತಮ ನಾಯಕ ನಟ, ಉತ್ತಮ ನಾಯಕಿ ನಟಿ, ಹಾಸ್ಯ ನಟ, ವಿಲನ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತೆ. ಹಾಗೇ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಆಗಮಿಸಲಿರುವ ಕಲಾವಿದರ ಕಾಸ್ಟ್ಯೂಮ್ ಕೂಡ ಹಾಗೇ ಗಮನ ಸೆಳೆಯುತ್ತೆ.
ದಸರಾ ಹಾಗೂ ವಿಜಯ ದಶಮಿ ಹಬ್ಬದ ಈ ಸಂದರ್ಭದಲ್ಲಿ ಈ ಪ್ರಶಸ್ತಿ ಸಮಾರಂಭವನ್ನು ಜೀ ಕನ್ನಡ ಪ್ರಸಾರ ಮಾಡಲಾಗುತ್ತಿದೆ. ಎಲ್ಲಾ ಕಡೆಗಳಲ್ಲಿ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ಇದೇ ಸಂದರ್ಭದಲ್ಲಿ ಕಿರುತೆರೆ ವೀಕ್ಷಕರನ್ನು ರಂಜಿಸಲು ಜೀ ಕುಟುಂಬ ಅವಾರ್ಡ್ ಅನ್ನು ಪ್ರಸಾರ ಮಾಡಲಾಗುತ್ತಿದೆ.

ಸದ್ಯ ಜೀ ಕನ್ನಡ ಜೀ ಕುಟುಂಬ ಅವಾರ್ಡ್ಸ್ ನಾಮಿನೇಶನ್ ಪಾರ್ಟಿ ರಡ್ ಕಾರ್ಪೆಟ್ ಪ್ರೋಮೊವನ್ನು ರಿಲೀಸ್ ಮಾಡಿದ್ದು, ಇದರಲ್ಲಿ ಕಿರುತೆರೆಯ ಕಲಾವಿದರು ಮಿಂಚುತ್ತಿದ್ದಾರೆ. 'ಲಕ್ಷ್ಮೀ ನಿವಾಸ' ಧಾರಾವಾಹಿಯ ಮೆಚ್ಚಿನ ನಟಿ ದಿಶಾ ಮದನ್, 'ಸೀತಾರಾಮ' ಧಾರಾವಾಹಿ ಜೋಡಿ ವೈಷ್ಣವಿ ಗೌಡ ಹಾಗೂ ಗಗನ್, ಅಮೃತಧಾರೆ ಧಾರಾವಾಹಿಯ ಕಲಾವಿದರು, 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಕಲಾವಿದರು, 'ಅಣ್ಣಯ್ಯ', 'ಪುಟ್ಟಕ್ಕನ ಮಕ್ಕಳು' ಸೇರಿದಂತೆ ಹಲವು ಧಾರಾವಾಹಿಯ ಕಲಾವಿದರು ಭಾಗವಹಿಸಿದ್ದಾರೆ.
ಹಿರಿಯ ನಟ ಮೋಹನ್, ದಿಲೀಪ್ ರಾಜ್ ಹಾಗೂ ಪತ್ನಿ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದಾರೆ. ಅವಾರ್ಡ್ಸ್ ಸಂಭ್ರಮಕ್ಕೆ ಮೆಟ್ಟಿಲಾದ Red Carpetನಲ್ಲಿ ಜೀ಼ ಕುಟುಂಬ ತಾರೆಗಳ ಕಲರವ ಜೋರಾಗಿದೆ. ಜೀ ಕುಟುಂಬ ಅವಾರ್ಡ್ 2024ರ ನಾಮಿನೇಷನ್ ಪಾರ್ಟಿ ಶನಿವಾರ 5 ರಿಂದ 6 ಗಂಟೆಗೆ ಪ್ರಸಾರ ಆಗಲಿದೆ.
ಈ ಬಾರಿ ದಸರಾ ಹಾಗೂ ವಿಜಯ ದಶಮಿ ಸಂಭ್ರಮದಲ್ಲಿ ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ಸಿಗೋದಂತೂ ಗ್ಯಾರಂಟಿ. ಹಬ್ಬದ ಜೊತೆ ಜೊತೆಗೆ ವೀಕ್ಷಕರಿಗೆ ಮನರಂಜನೆ ಕೂಡ ಸಿಗಲಿದೆ. ಸದ್ಯ ಯಾವ್ಯಾವ ಕಲಾವಿದರಿಗೆ ಯಾವ್ಯಾವ ಪ್ರಶಸ್ತಿ ಸಿಕ್ಕಿದೆ. ಯಾರೆಲ್ಲ ಪರ್ಫಾಮೆನ್ಸ್ ಮಾಡುತ್ತಿದ್ದಾರೆ? ಸದ್ಯ ರೆಡ್ ಕಾರ್ಪೆಟ್‌ನಲ್ಲಿ ತಾರೆಯರ ಕಲರವವನ್ನು ನೋಡಿ ಎಂಜಾಯ್ ಮಾಡಬಹುದು.


Click it and Unblock the Notifications











