ಜೀ ಕುಟುಂಬ ಅವಾರ್ಡ್ಸ್ 2013 ವಿಶೇಷ ಪ್ರಸಾರ

By Rajendra

'ವಸುದೈವ ಕುಟುಂಬಕಂ' ಎಂಬ ಸಂದೇಶವನ್ನು ಸದ್ದಿಲ್ಲದಂತೆ ಸಾರುತ್ತಿರುವ ಇಪ್ಪತ್ತನಾಲ್ಕು ಗಂಟೆಗಳ ಕನ್ನಡ ಮನರಂಜನಾ ವಾಹಿನಿ ಜೀ ಕನ್ನಡ. ಇದೀಗ ಮತ್ತೊಂದು ವರ್ಣರಂಜಿತ ಕಾರ್ಯಕ್ರಮವನ್ನು ತನ್ನ ವೀಕ್ಷಕ ಬಳಗಕ್ಕೆ ಸಮರ್ಪಿಸಲು ಸಿದ್ಧವಾಗಿದೆ.

'ಜೀ ಕುಟುಂಬ ಅವಾರ್ಡ್ಸ್ 2013'ರ ಬಣ್ಣ ಬೆಳಕು, ನೃತ್ಯ ವೈಭವ ಜೊತೆಗೆ ಮುಗಿಲು ಮುಟ್ಟಿದ ಪ್ರಶಸ್ತಿ ಸಂಭ್ರಮವನ್ನು ಶನಿವಾರ (ಜ.25) ಹಾಗೂ ಭಾನುವಾರ (ಜ.26) ಸಂಜೆ 6 ಗಂಟೆಗೆ ಕಣ್ತುಂಬಿಕೊಳ್ಳಬಹುದು. ಬೆಂಗಳೂರು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ 'ಜೀ ಕುಟುಂಬ ಅವಾರ್ಡ್ಸ್ 2013' ಕಾರ್ಯಕ್ರಮ ಆಯೋಜಿಸಲಾಗಿತ್ತು. [ಅಕ್ಕ ತಂಗಿ ಬಾಂಧವ್ಯದ ಹೊಸ ಕಥನ]

ಹಾರ್ಲಿಕ್ಸ್ ಅರ್ಪಿಸುವ 'ಜೀ ಕುಟುಂಬ ಅವಾರ್ಡ್ಸ್ 2013' ಕಾರ್ಯಕ್ರಮಕ್ಕೆ ಸಾವಿರಾರು ಜನರು ಆಗಮಿಸಿದ್ದರು. ಈ ಕಾರ್ಯಕ್ರಮದ ವಿಶೇಷ ಪ್ರಸಾರ ಶನಿವಾರ ಮತ್ತು ಭಾನುವಾರ ಜೀ ವಾಹಿನಿಯಲ್ಲಿ ಸವಿಯಬಹುದು.

ಜ.25ರಂದು ಜೀ ಕುಟುಂಬ ಅವಾರ್ಡ್ಸ್ ಪ್ರಸಾರ

ಜ.25ರಂದು ಜೀ ಕುಟುಂಬ ಅವಾರ್ಡ್ಸ್ ಪ್ರಸಾರ

ಅಸಂಖ್ಯಾತ ಪ್ರೇಕ್ಷಕರ ಸಂಭ್ರಮ, ಸಡಗರದ ನಡುವೆ ನಡೆದ ಈ ವಿಶೇಷ ಕಾರ್ಯಕ್ರಮವನ್ನು ಶನಿವಾರ ಸಂಜೆ 6ಗಂಟೆಗೆ ವೀಕ್ಷಿಸಬಹುದು. ಜೀ ಕನ್ನಡ ಧಾರಾವಾಹಿಗಳು, ರಿಯಾಲಿಟಿ ಶೋ ಹಾಗೂ ವಿವಿಧ ಕಾರ್ಯಕ್ರಮಗಳ ಕಲಾವಿದರಲ್ಲಿ ಬೆಸ್ಟ್ ಅಪ್ಪ-ಅಮ್ಮ, ಬೆಸ್ಟ್ ಮಗ-ಮಗಳು, ಅತ್ತೆ-ಸೊಸೆ, ಬೆಸ್ಟ್ ಕೇಡಿ ಲೇಡಿ ಹೀಗೆ 28 ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವೀಕ್ಷಕರ ಎಸ್‍ಎಂಎಸ್ ಮತ್ತು ತೀರ್ಪುಗಾರರು ನೀಡಿದ ನಿರ್ಣಯದ ಆಧಾರದ ಮೇಲೆ 'ಬೆಸ್ಟ್'ಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ವಿತರಿಸಲಾಯಿತು.

ಜೀ ಕುಟುಂಬ ಅವಾರ್ಡ್ಸ್ ಗೆ ಗಣ್ಯರ ಆಗಮನ

ಜೀ ಕುಟುಂಬ ಅವಾರ್ಡ್ಸ್ ಗೆ ಗಣ್ಯರ ಆಗಮನ

ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಸಂಸದ ಅನಂತಕುಮಾರ್, ಮಾಜಿ ಸಚಿವೆ ಮೋಟಮ್ಮ, ಸಚಿವ ದಿನೇಶ್ ಗುಂಡೂರಾವ್ ಆಗಮಿಸಿದ್ದರು.

ಎಸ್.ಕೆ.ಶಾಮ ಸುಂದರ ಅವರಿಂದ ಪ್ರಶಸ್ತಿ ಪ್ರದಾನ

ಎಸ್.ಕೆ.ಶಾಮ ಸುಂದರ ಅವರಿಂದ ಪ್ರಶಸ್ತಿ ಪ್ರದಾನ

ಚಲನಚಿತ್ರ ನಟರಾದ ಜಗ್ಗೇಶ್, ಶ್ರೀನಾಥ್, ರಾಗಿಣಿ ದ್ವಿವೇದಿ, ಸಂಜನಾ, ತಾರಾ, ಶ್ರೀನಗರ ಕಿಟ್ಟಿ ಸೇರಿದಂತೆ ಒನ್ಇಂಡಿಯಾ ಕನ್ನಡದ ಪ್ರಧಾನ ಸಂಪಾದಕರಾದ ಎಸ್.ಕೆ.ಶಾಮ ಸುಂದರ, ಉದಯವಾಣಿ ಗ್ರೂಪ್ ಎಡಿಟರ್ ರವಿ ಹೆಗಡೆ ಮತ್ತಿತರರು ಪ್ರಶಸ್ತಿ ಪ್ರದಾನ ಮಾಡಿದರು.

ಯೋಗಿ, ಶರ್ಮಿಳಾ ನೃತ್ಯ ಸಂಭ್ರಮ

ಯೋಗಿ, ಶರ್ಮಿಳಾ ನೃತ್ಯ ಸಂಭ್ರಮ

ಲೂಸ್ ಮಾದ ಖ್ಯಾತಿಯ ಯೋಗಿ, ಶರ್ಮಿಳಾ ಮಾಂಡ್ರೆ ಹಾಗೂ ಜೀ ಕನ್ನಡದ ಕಲಾವಿದರು ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಸಾವಿರಾರು ವೀಕ್ಷಕರ ಮನತಣಿಸಿದರು. ಕಾರ್ತಿಕ್, ಸಪ್ನಾ ಅವರು ಸುಮಧುರವಾದ ಚಿತ್ರಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು.

ಆನ್ ಲೈನ್ ಪಾರ್ಟನರ್ ಒನ್ಇಂಡಿಯಾ ಕನ್ನಡ

ಆನ್ ಲೈನ್ ಪಾರ್ಟನರ್ ಒನ್ಇಂಡಿಯಾ ಕನ್ನಡ

ಈ ಕಾರ್ಯಕ್ರಮಕ್ಕೆ ನಿಮ್ಮ ನೆಚ್ಚಿನ ಜಾಲ ತಾಣ ಒನ್ ಇಂಡಿಯಾ ಕನ್ನಡ ಆನ್ ಲೈನ್ ಪಾರ್ಟನರ್, ನ್ಯೂಸ್ ಪಾರ್ಟನರ್ ಪಬ್ಲಿಕ್ ನ್ಯೂಸ್, ರೇಡಿಯೋ ಪಾರ್ಟನರ್ 92.7 ಬಿಗ್ ಎಫ್ಎಂ, ಪ್ರಿಂಟ್ ಪಾರ್ಟನರ್ ಉದಯವಾಣಿ.

ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪಾ ನಿರೂಪಣೆ

ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪಾ ನಿರೂಪಣೆ

ಕಾರ್ಯಕ್ರಮದಲ್ಲಿ ಜೀ ಕುಟುಂಬದ ಸದಸ್ಯರು, ಚಿತ್ರ ನಟ ಯೋಗಿ, ಚಿತ್ರನಟಿ ಶರ್ಮಿಳಾ ಮಾಂಡ್ರೆ ಅವರ ಹಾಡು ಮತ್ತು ಡ್ಯಾನ್ಸ್ ಗಳು ಭರ್ಜರಿಯಾಗೇ ಇರುತ್ತವೆ. ಸೃಜನ್ ಲೋಕೇಶ್- ಶ್ವೇತಾ ಚೆಂಗಪ್ಪಾ ನಿರೂಪಿಸಿದ ಕಾರ್ಯಕ್ರಮ ವಿಕ್ಷಕರಿಗೆ ಕಚಗುಳಿ ಇಡುವುದಂತೂ ಖಂಡಿತ. ತಪ್ಪದೆ ನೋಡಿ ಜನವರಿ 25, 26ರ ಸಂಜೆ 6 ಗಂಟೆಯಿಂದ.

More from Filmibeat

English summary
Watch the most anticipated award ceremony of the year 'Zee Kutumba Awards 2013' on 25th and 26th of January 2014, 6pm onwards only on your favorite channel Zee Kannada. The Zee Kutumba Awards are exclusively for the serials, reality shows and other programmes of Zee Kannada and their artists.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X