ಪೆನ್ ಡ್ರೈವ್ ನೋಡಿ ಬೆಚ್ಚಿಬಿದ್ದ ರಮೇಶ್ ಅರವಿಂದ್ ಅದನ್ನು ಬಿಸಾಕಿ ಎಂದಿದ್ದೇಕೆ?

By ಎಸ್ ಸುಮಂತ್

ಪ್ರಜ್ವಲ್ ರೇವಣ್ಣ ಅವರದ್ದೆ ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಬರೀ ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಸ್ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ನೋಟೀಸ್‌ಗಳನ್ನು ನೀಡಿದೆ. ಅವರ ಅಜ್ಜ ಮಾಜಿ ಪ್ರಧಾನಿ ದೇವೇಗೌಡ್ರು ಕೂಡ ಪತ್ರ ಬರೆಯುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ಮಾತ್ರ ಯಾವುದಕ್ಕೂ ಜಗ್ಗದೆ, ಬಗ್ಗದೆ ವಿದೇಶದಲ್ಲಿ ಹಾಯಾಗಿದ್ದಾರೆ.

ಚುನಾವಣಾ ಫಲಿತಾಂಶ ಬಂದು ತಾವೂ ಮತ್ತೊಮ್ಮೆ ಸಂಸದರಾದ ಮೇಲಷ್ಟೇ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರ್ತಾರೆ ಎಂಬ ಮಾತು. ಇದರ ನಡುವೆ ಪೆನ್ ಡ್ರೈವ್ ಎಂದರೆ ಎಲ್ಲರಿಗೂ ಗಾಬರಿಯಾಗುತ್ತಿದೆ.

Zee Picchar short film contest promo starring Ramesh aravind goes viral

ಯಾವುದೇ ಪೆನ್ ಡ್ರೈವ್ ನೋಡಿದರೂನು ಅದೇ ಪೆನ್ ಡ್ರೈವ್ ಇರಬಹುದಾ? ಎಂಬ ಆತಂಕ. ಹೀಗಾಗಿ ಪೆನ್ ಡ್ರೈವ್ ತೆಗೆದುಕೊಳ್ಳುವುದಕ್ಕೆ ಜನ ಭಯ ಪಡುವಂತೆ ಆಗಿದೆ. ಯಾಕಂದ್ರೆ ಆ ಪೆನ್ ಡ್ರೈವ್‌ನಲ್ಲಿರುವುದು 2976 ವಿಡಿಯೋಗಳು. ಅದೇ ಸುದ್ದಿ ಈಗ ರಮೇಶ್ ಅರವಿಂದ್ ಅವರನ್ನು ಗಾಬರಿ ಪಡಿಸಿವೆ.

ಜೀ ಪಿಕ್ಚರ್ ನಲ್ಲಿ ಶಾರ್ಟ್ ಫಿಲ್ಮ್ ಸ್ಪರ್ಧೆ

ಜೀ ವಾಹಿನಿ ರಿಯಾಲಿಟಿ ಶೋಗಳ ಮೂಲಕವೇ ಹಲವರ ಪದರತಿಭೆಯನ್ನು ಹೊರ ತರುವ ಪ್ರಯತ್ನ ಮಾಡುತ್ತದೆ. ಮನರಂಜನೆಯ ಜೊತೆಗೆ ಪ್ರತಿಭಾವಂತರಿಗೂ ಅವಕಾಶ ದೊರೆಯುವಂತ ರಿಯಾಲಿಟಿ ಶೋಗಳನ್ನೇ ಮಾಡುತ್ತಾರೆ. ಇದೀಗ ಜೀ ಪಿಕ್ಚರ್‌ನಲ್ಲಿ ಯುವ ನಿರ್ದೇಶಕರಿಗೆ ಹುಮ್ಮಸ್ಸು ತುಂಬಲು, ಹೊಸ ನಿರ್ದೇಶಕರನ್ನು ಹೊರ ತರಲು ಶಾರ್ಟ್ ಫಿಲ್ಮ್ ಸ್ಪರ್ಧೆ ಶುರು ಮಾಡಿದೆ.

Zee Picchar short film contest promo starring Ramesh aravind goes viral

ಪೆನ್ ಡ್ರೈವ್ ಟ್ರಿಕ್ಸ್ ಬಳಕೆ

ಜೀ ವಾಹಿನಿಯಲ್ಲಿ ಹೊಸದಾಗಿ ಶುರುವಾಗುವ ರಿಯಾಲಿಟಿ ಶೋಗಳನ್ನು ಪ್ರಮೋಷನ್ ಮಾಡುವ ರೀತಿಯೇ ವಿಭಿನ್ನವಾಗಿರುತ್ತದೆ. ಎಲ್ಲರನ್ನು ಆಕರ್ಷಣೆ ಮಾಡುತ್ತದೆ. ಆದರೆ ಶಾರ್ಟ್ ಫಿಲ್ಮ್ ಪ್ರಮೋಷನ್‌ಗಾಗಿ ಟ್ರೆಂಡಿಂಗ್ ವಿಚಾರದ ಟ್ರಿಕ್ಸ್ ಬಳಸಿದ್ದಾರೆ. ಹಾಸನದ ಪೆನ್‌ಡ್ರೈವ್ ಪ್ರಕರಣವನ್ನು ನೆನಪಿಸುವಂತೆ ಹೊಸ ಪ್ರೋಮೊ ಬಿಡುಗಡೆ ಆಗಿದೆ.

ಪೆನ್ ಡ್ರೈವ್‌ನಲ್ಲಿ ಶಾರ್ಟ್ ಫಿಲ್ಮ್

ರಮೇಶ್ ಅರವಿಂದ್ ಶಾಟ್‌ಗೆ ಹೋಗ್ತಾ ಇರುತ್ತಾರೆ. ಒಬ್ಬ ಹುಡುಗ ಅವರಿಗೋಸ್ಕರ ಏನೋ ಕೊಡುವುದಕ್ಕೆ ಕಾಯುತ್ತಾ ಇರುತ್ತಾನೆ. ಅದನ್ನ ರಮೇಶ್ ಅರವಿಂದ್‌ ಅವರ ಜೊತೆಗೆ ಬಂದ ಸಿಬ್ಬಂದಿ ತಿಳಿಸುತ್ತಾರೆ. ಆಗ ರಮೇಶ್ ಆ ಹುಡುಗನ ಬಳಿ ಬಂದು 'ಏನಪ್ಪ ಏನೋ ಕೊಡ್ಬೇಕು ಅಂದ್ಯಂತೆ' ಎಂದಾಗ ಪೆನ್ ಡ್ರೈವ್ ಮುಂದೆ ಹಿಡಿಯುತ್ತಾನೆ. ಒಂದು ಕ್ಷಣ ರಮೇಶ್ ಅರವಿಂದ್ ಬೆಚ್ಚಿ ಬೀಳುತ್ತಾರೆ. ಮೊದಲು ಅದನ್ನ ಫ್ರೇಮ್‌ನಿಂದ ಹೊರಗೆ ತೆಗಿ ಎಂದು ಹೇಳಿ ವಿಚಾರ ಕೇಳಿದಾಗ, ಇದರಲ್ಲಿ ನಾನು ಡೈರೆಕ್ಟ್ ಮಾಡಿದ ಶಾರ್ಟ್ ಫಿಲ್ಮ್ ಇದೆ ಸರ್ ಎಂದು ಹೇಳುತ್ತಾನೆ. ಓಕೆ ಅಂತ ನಿಟ್ಟುಸಿರು ಬಿಟ್ಟ ರಮೇಶ್ ಅರವಿಂದ್, ಪೆನ್‌ ಡ್ರೈವ್ ಬೇಡ ಜೀ ಆಪ್‌ನಲ್ಲಿ ಅಪ್ಲೋಡ್ ಮಾಡುವುದಕ್ಕೆ ಹೇಳಿ ಮುಂದೆ ಸಾಗುತ್ತಾ, ಮೊದಲು ಆ ಪೆನ್ ಡ್ರೈವ್ ಎಲ್ಲಾದರೂ ಬಿಸಾಡು ಎಂದಿದ್ದಾರೆ.

ಕ್ರೇಜಿ ಐಡಿಯಾ

ಮೊದಲೆಲ್ಲಾ ಫೋಟೊಗಳು, ವೀಡಿಯೋಗಳನ್ನು ಪೆನ್‌ಡ್ರೈವ್‌ಗೆ ಹಾಕಿ ಹಸ್ತಾಂತರಿಸಲಾಗುತ್ತಿತ್ತು. ಶಾರ್ಟ್‌ ಫಿಲ್ಮ್‌ಗಳನ್ನು ಕೂಡ ಸ್ಪರ್ಧೆಗಳಿಗೆ ಪೆನ್‌ಡ್ರೈವ್‌ನಲ್ಲೇ ಹಾಕಿ ಕೊಡುತ್ತಿದ್ದರು. ಹಾಗಾಗಿ ಅದನ್ನು ನೆನಪಿಸುತ್ತಾ ಇತ್ತ ಪೆನ್‌ಡ್ರೈವ್ ಪ್ರಕರಣವನ್ನು ಎಳೆದುತಂದು ಪ್ರೋಮೊ ಮಾಡಿರುವುದು ಗೊತ್ತಾಗುತ್ತಿದೆ.

'ಪ್ರಜ್ವಲಿ'ಸುತ್ತಿವೆ ಕಮೆಂಟ್‌ಗಳು

ರಮೇಶ್ ಅರವಿಂದ್ ಅವರು ನಟನೆಯಲ್ಲಿ ಪಂಟ್ರು. ಈ ಪ್ರಮೋಷನ್ ವಿಡಿಯೋದಲ್ಲೂ ಆರಂಭದಲ್ಲಿ ಕೊಂಚವೂ ಅನುಮಾನ ಬಂದಿರಲಿಲ್ಲ. ಅಷ್ಟು ರಿಯಾಲಿಟಿ ಅನ್ನಿಸಿತ್ತು. ಬಳಿಕ ಇದೊಂದು ಗಿಮಿಕ್ ಅನ್ನೋದು ಅರ್ಥವಾಗಿದೆ. ಆದರೆ ಈ ವಿಡಿಯೋಗೆ ತರಹೇವಾರಿ ಕಮೆಂಟ್‌ಗಳು ಬಂದಿವೆ. ಎಲ್ಲರೂ ಪ್ರಜ್ವಲ್ ರೇವಣ್ಣ ಅವರನ್ನೇ ಕಮೆಂಟ್‌ಗಳಲ್ಲಿ ನೆನಪಿಸಿದ್ದಾರೆ.

More from Filmibeat

English summary
zee picture new computation promo. Here is the details about Ramesh Aravind was shocked to see the pen drive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X