For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಸ್ಟಾರ್ ಶಿವಣ್ಣ ಹುಟ್ಟುಹಬ್ಬಕ್ಕೆ 60 ಗಂಟೆ ನಿರಂತರ ಸಿನಿಮೋತ್ಸವ !

  |

  ಜುಲೈ ತಿಂಗಳು ಬಂತು ಅಂದರೆ, ಶಿವಣ್ಣನ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಸೆಂಚುರಿ ಸ್ಟಾರ್ ಮನೆ ಮುಂದೆ ಶಿವಣ್ಣನ ಫ್ಯಾನ್ಸ್ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಆದರೆ, ಈ ಬಾರಿ ಶಿವರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ? ಅನ್ನುವುದರ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.

  ಜೀ ಪಿಕ್ಚರ್ ಮಾತ್ರ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅವರ ಸಿನಿಮಾಗಳ ಮೂಲಕ ಆಚರಣೆ ಮಾಡಲು ನಿರ್ಧರಿಸಿದೆ. ಜೀ ಪಿಚ್ಚರ್‌ ಈ ಬಾರಿಯ ಡಾ.ಶಿವರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಣೆ ಮಾಡಲು ಹೊಸ ಪ್ರಯೋಗಕ್ಕೆ ಕೈ ಹಾಕಿದೆ.

  10 ಸೆಲೆಬ್ರೆಟಿ 'ಇಸ್ಮಾರ್ಟ್ ಜೋಡಿ' ಜೊತೆ ಗಣೇಶ್ ಗೋಲ್ಡನ್ ಶೋ!10 ಸೆಲೆಬ್ರೆಟಿ 'ಇಸ್ಮಾರ್ಟ್ ಜೋಡಿ' ಜೊತೆ ಗಣೇಶ್ ಗೋಲ್ಡನ್ ಶೋ!

  60 ವರ್ಷ.. 60 ಗಂಟೆ.. 20 ಸಿನಿಮಾ

  ಶಿವರಾಜ್‌ಕುಮಾರ್ ಇದೇ ಜುಲೈ 12ಕ್ಕೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕರುನಾಡ ಚಕ್ರವರ್ತಿಯ ಈ ಬಾರಿ 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದರಿಂದ ವಿಶೇಷ ಅಂತಲೇ ಹೇಳಬೇಕು. ಈ ಸಂಭ್ರಮಕ್ಕೆ ಜೀ ಪಿಚ್ಚರ್‌ ಶಿವಣ್ಣನ 60ನೇ ಹುಟ್ಟುಹಬ್ಬಕ್ಕೆ 60 ಗಂಟೆಗಳ ಕಾಲ ಶಿವಣ್ಣನ ಸಿನಿಮಾಗಳನ್ನು ನಿರಂತರವಾಗಿ ಪ್ರಸಾರ ಮಾಡಲು ಮುಂದಾಗಿದೆ.

  ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್‌ ಅಭಿನಯಿಸಿದ ಸುಮಾರು 20 ಸಿನಿಮಾಗಳು 3 ದಿನಗಳ ಕಾಲ ನಿರಂತರವಾಗಿ ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ. ಇದು ಕನ್ನಡದ ಸಿನಿಮಾ ವಾಹಿನಿಗಳಲ್ಲಿ ವಿನೂತನ ಪ್ರಯತ್ನವೆಂದೇ ಹೇಳಬಹುದು.

  'ಭಾಗ್ಯದ ಬಳೆಗಾರ' ಸಿನಿಮಾದಿಂದ ಆರಂಭ

  ಶಿವಣ್ಣನ ಹುಟ್ಟುಹಬ್ಬಕ್ಕೆ ಇನ್ನೂ ಎರಡು ದಿನಗಳು ಬಾಕಿ ಇರುವಾಗಲೇ ಶಿವಣ್ಣನ ಸಿನಿಮೋತ್ಸವ ಆರಂಭ ಆಗಲಿದೆ. ಭಾನುವಾರ (ಜು.10) ಬೆಳಗ್ಗೆ 9 ಗಂಟೆಗೆ ʻಭಾಗ್ಯದ ಬಳೆಗಾರʼ ಸಿನಿಮಾದಿಂದ ಆರಂಭ ಆಗಲಿದೆ. ಇಲ್ಲಿಂದ 60 ಗಂಟೆಗಳ ಕಾಲ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವಾದ ಮಂಗಳವಾರ (ಜು.12)ರ ರಾತ್ರಿ 9 ಗಂಟೆಯವರಗೆ ನಿರಂತರವಾಗಿ 60ಗಂಟೆಗಳ ಕಾಲ ಸಿನಿಮಾ ಪ್ರಸಾರ ಆಗಲಿದೆ. ʻಭಜರಂಗಿ-2ʼ ಸಿನಿಮಾ ಮೂಲಕ ನಾನ್‌ ಸ್ಟಾಪ್‌ ಶಿವಣ್ಣ ಸಿನಿಮಾಗಳ ಮ್ಯಾರಥಾನ್ ಮುಗಿಯಲಿದೆ.

  Zee Picture Celebrating Shivarajkumar 60th Birthday With His Films Continuesly 60 Hours

  ಭಾರತೀಯ ಕಿರುತೆರೆ ಇತಿಹಾಸದಲ್ಲೇ ಇದು ವಿನೂತನ ಪ್ರಯೋಗ ಎನ್ನಲಾಗಿದೆ. ಈ 60 ಗಂಟೆಗಳ ಮ್ಯಾರಥಾನ್‌ನಲ್ಲಿ ʻಜೋಗಿʼ, ʻತವರಿನ ಸಿರಿʼ, ʻಭಜರಂಗಿʼ, ʻಪ್ರೀತ್ಸೆʼ, ʻಕುರುಬನ ರಾಣಿʼ, ʻದಿ ವಿಲನ್‌ʼ, ʻಮಫ್ತಿʼ ಸಿನಿಮಾಗಳು ಜೀ ಪಿಚ್ಚರ್‌ಗಳು ಪ್ರಸಾರವಾಗಲಿವೆ.

  English summary
  Zee Picture Celebrating Shivarajkumar 60th Birthday With His Films Continuesly 60 Hours, Know More.
  Saturday, July 9, 2022, 9:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X