DKD: ತಂದೆಯ ಧ್ವನಿ ಕೇಳಿ ತರುಣ್ ಸುಧೀರ್ ಕಣ್ಣೀರು; ಗಂಡನ ಅಳು ಕಂಡು ಸೋನಲ್ ಭಾವುಕ!

By ಎಸ್ ಸುಮಂತ್

ಸದ್ಯ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಟ್ರೆಂಡಿಂಗ್ ಜೋಡಿಯಾಗಿರುವುದು ತರುಣ್ ಸುಧೀರ್ ಮತ್ತು ಸೋನಲ್. ಈ ಜೋಡಿಯ ಬಾಂಡಿಂಗ್ ನೋಡುವುದಕ್ಕೇನೆ ಖುಷಿ. ಲವ್ ಹೇಗಾಯ್ತು ಅಂತ ತಿಳ್ಕೊಂಡಿದ್ದಾಯ್ತು. ಆದ್ರೆ ಇಬ್ಬರು ಎಷ್ಟು ಕ್ಲೋಸ್ ಎಂಬ ಕುತೂಹಲಕ್ಕೆ ಇತ್ತೀಚಿನ ವಿಡಿಯೋಗಳು ತೆರೆ ಎಳೆದಿವೆ.

ಅನುಶ್ರೀ ಯೂಟ್ಯೂಬ್‌ ಚಾನೆಲ್ ಕಾರ್ಯಕ್ರಮದ ಪ್ರೋಮೋ ಗಂಡ ಹೆಂಡತಿ ಎಷ್ಟು ಅನ್ಯೋನ್ಯವಾಗಿದ್ದಾರೆ ಎಂಬುದನ್ನು ತೋರಿಸಿದೆ. ಈಗ ಡಿಕೆಡಿ ವೇದಿಕೆಯಲ್ಲೂ ಇಬ್ಬರನ್ನು ನೋಡಿ ಜನ ಖುಷಿ ಪಡುತ್ತಿದ್ದಾರೆ.

Zee Tv special gift to newly married couple tharun sudhir and Sonal Monteiro

ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಓಪನ್ ಮಾಡಿದ್ರೆ ಸಾಕು ಒಂದರ ಹಿಂದೊಂದು ತರುಣ್ ಸುಧೀರ್-ಸೋನಲ್ ಫೋಟೋ, ವಿಡಿಯೋ ರೀಲ್ಸ್ ಬರುತ್ತವೆ. ಇದೀಗ ಡಿಕೆಡಿ ವೇದಿಕೆಯಲ್ಲೂ ಇಬ್ಬರು ಗೆಸ್ಟ್ ಆಗಿ ಬಂದಿದ್ದು, ಹೊಸ ನವಜೋಡಿಗೆ ಹಾರ ಹಾಕಿ ಬರ ಮಾಡಿಕೊಂಡಿದ್ದಾರೆ.

ತರುಣ್‌ಗೆ ಸರ್ಪೈಸ್ ಕೊಟ್ಟ ಜೀ ಕನ್ನಡ

ತರುಣ್ ಮತ್ತು ಸೋನಲ್ ಇತ್ತಿಚೆಗಷ್ಟೇ ಮದುವೆಯಾಗಿದ್ದಾರೆ. ತರುಣ್ ಸುಧೀರ್ ಜೀ ಕನ್ನಡದ 'ಮಹಾನಟಿ' ವೇದಿಕೆಯಲ್ಲಿ ಜಡ್ಜ್ ಆಗಿದ್ದರು. ಶೋ ಮುಗಿದಿದೆ. ಆದರೆ ಈ ವಾರ 'ಡಿಕೆಡಿ' ಹಾಗೂ 'ಮಹಾನಟಿ' ಸಂಗಮವಾಗಿದೆ. ಹೀಗಾಗಿ ತರುಣ್ ಸುಧೀರ್ ಗೆಸ್ಟ್ ಆಗಿ ಬಂದಿದ್ದಾರೆ. ತರುಣ್ ಬಂದ ಮೇಲೆ ಹೊಸದಾಗಿ ಮದುವೆ ಬೇರೆ ಆಗಿದ್ದಾರೆ. ಹೆಂಡತಿಯನ್ನ ಕರೆಸದೆ ಇದ್ದರೆ ಹೇಗೆ. ಸೋನಲ್ ಅವರನ್ನು ಸರ್ಪೈಸ್ ಆಗಿ ಕರೆಸಿದ್ದಾರೆ.

ತರುಣ್‌ಗೆ ಜೀ ಕಡೆಯಿಂದ ಕಾಸ್ಟ್ಲೀ ಗಿಫ್ಟ್

ತರುಣ್ ಸುಧೀರ್ ಅವರಿಗೆ ತಂದೆ‌ ಎಂದರೆ ಎಷ್ಟು ಪ್ರೀತಿ ಅನ್ನೋದು ಹೊಸದಾಗಿ ಹೇಳಬೇಕಿಲ್ಲ. ತಂದೆ ಹೋದ ಮೇಲೆ ತಾಯಿ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಮದುವೆ ಸಮಯದಲ್ಲೂ ತರುಣ್ ತಮ್ಮ ತಂದೆ ಸುಧೀರ್ ಅವರನ್ನು ತುಂಬಾ ಮಿಸ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಸೆಂಟರ್ ಆಫ್ ಅಟ್ರಾಕ್ಷನ್ ಎಂಬಂತೆ‌ ಸುಧೀರ್ ಫೋಟೋಗಳನ್ನೇ ಇಟ್ಟಿದ್ದರು. ಇದೀಗ ಜೀ ಕನ್ನಡ ಸ್ಪೆಷಲ್ ಗಿಫ್ಟ್ ನೀಡಿದೆ. ಎಐ ಮೂಲಕ ಸುಧೀರ್ ಅವರ ವಾಯ್ಸ್ ಕ್ರಿಯೇಟ್ ಮಾಡಿದೆ.

Zee Tv special gift to newly married couple tharun sudhir and Sonal Monteiro

ಗಂಡನ ಅಳು ಕಂಡು ಸೋನಲ್ ಭಾವುಕ

ಹಾಯ್ ಚಿನ್ನು.. ಹೇಗಿದ್ದೀಯಾ..? ನಿನ್ನ ಮದುವೆ ಚೆನ್ನಾಗಿ ನಡೆದಿದೆ. ನನ್ನ ಸೊಸೆ ಸೋನಲ್‌ಗೆ ನನ್ನ ಆಶೀರ್ವಾದವಿದೆ. ಚಿತ್ರರಂಗದಲ್ಲಿ ನೀನು ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ವಾಯ್ಸ್ ಪ್ಲೇ ಆಗಿದೆ. ಇದನ್ನು ಕೇಳಿಸಿಕೊಂಡ ತರುಣ್‌ಗೆ ತಂದೆಯ ನೆನಪಾಗಿದೆ. ನೋವನ್ನು ತಡೆಯುವುದಕ್ಕೆ ಆಗಿಲ್ಲ. ವೇದಿಕೆ ಮೇಲೆ ಭಾವುಕರಾಗಿದ್ದಾರೆ. ಸೋನಲ್‌ಗೆ ಒಂದು ಕಡೆ ಮಾವನ ವಿಡಿಯೋ ನೋಡಿ ಖುಷಿಯಾದರೆ ಮತ್ತೊಂದು ಕಡೆ ಗಂಡನ ಕಣ್ಣೀರು ನೋಡಿ ತಾನೂ ಭಾವುಕರಾಗಿದ್ದಾರೆ.

ಫ್ಯಾಮಿಲಿ ಫೋಟೋ ಕೊಟ್ಟ ಜೀ

ಈ ವಿಡಿಯೋ ನೋಡಿ ಭಾವುಕರಾದ ತರುಣ್, ನಾನು ನಿಜಕ್ಕು ನಿರೀಕ್ಷೆ ಮಾಡಿರಲಿಲ್ಲ. ತಾಳಿ ಕಟ್ಟುವಾಗಲೂ ಅಂದುಕೊಂಡಿದ್ದೆ ಅವರು ಇರಬೇಕಿತ್ತು ಅಂತ. ನಂಗೆ ತುಂಬಾ ಸ್ಪೆಷಲ್ ಗಿಫ್ಟ್‌ ಇದು ಎಂದಿದ್ದಾರೆ. ಇನ್ನು ಜೀ ಕನ್ನಡ ತರುಣ್ ಅವರಿಗೆ ವಿಶೇಷವಾದ ಗಿಫ್ಟ್ ನೀಡಿದೆ. ತರುಣ್ ಸೋನಲ್ ಜೊತೆಗೆ ಅಪ್ಪ ಅಮ್ಮ ಇರುವಂತ ಫ್ಯಾಮಿಲಿ ಫೋಟೋವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ.

More from Filmibeat

English summary
Zee kannada DKD Written Update on August 29th promo. Here is the details about tarunsudhir and actress sonal shed tears on dkd stage;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X