ನಿರ್ಮಾಪಕ ಕೆ.ಮಂಜುಗೆ ಡಾಕ್ಟರೇಟ್ ಗೌರವ

ಕನ್ನಡ ಚಿತ್ರರಂಗದ ಯಶಸ್ಸಿಗೆ ಕಾರಣವಾದ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಪಾರ್ವತಮ್ಮ ರಾಜ್ ಕುಮಾರ್, ಅಂಬರೀಶ್ ಹಾಗೂ ಶಿವರಾಜ್ ಕುಮಾರ್ ಗೆ ವಿವಿಧ ವಿಶ್ವವಿದ್ಯಾನಿಲಯಗಳು ಗೌರವ ಡಾಕ್ಟರೇಟ್ ನೀಡಿ ಅವರುಗಳ ಸಾಧನೆಯನ್ನು ಗೌರವಿಸಿದೆ.

ಇದೀಗ ಕನ್ನಡ ಚಿತ್ರ ನಿರ್ಮಾಪಕ ಕೆ.ಮಂಜುಗೆ ಡಾಕ್ಟರೇಟ್ ಲಭಿಸಿದೆ. 'ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್' ವತಿಯಿಂದ ಕೆ.ಮಂಜು ಅವರಿಗೆ ಗೌರವ ಡಾಕ್ಟರೇಟ್ ಸಮರ್ಪಣೆ ಆಗಿದೆ.

ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕ ಕೆ.ಮಂಜು ಮಾಡಿರುವ ಸಾಧನೆಗಾಗಿ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾ ಭವನದಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

'ಕೆ.ಮಂಜು ಸಿನಿಮಾಸ್' ಮತ್ತು 'ಲಕ್ಷ್ಮಿಶ್ರೀ ಕಂಬೈನ್ಸ್' ವತಿಯಿಂದ ಹಲವು ಕನ್ನಡ ಚಿತ್ರಗಳನ್ನು ಕೆ.ಮಂಜು ನಿರ್ಮಿಸಿದ್ದಾರೆ. 'ಅನುರಾಗ ಸ್ಪಂದನ', 'ವಾಲಿ', 'ಜೇನು ಗೂಡು', 'ಜಮೀನ್ದಾರು', 'ಹೃದಯವಂತ', 'ಸಾಹುಕಾರ', 'ಮಾತಾಡ್ ಮಾತಾಡು ಮಲ್ಲಿಗೆ', 'ರಾಜಾ ಹುಲಿ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಕೆ.ಮಂಜು ಬಂಡವಾಳ ಹಾಕಿದ್ದಾರೆ.

READ SOURCE