ಕೊನೆಗೂ ಗಡ್ಡ ತೆಗೆದ ಯಶ್ : ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್

Recommended Video

ಅಂತೂ ಇಂತೂ ರಾಧಿಕಾ ಬಯಕೆ ತೀರಿತು..! | Filmibeat Kannada

ನಟ ಯಶ್ ಮುಖದ ಮೇಲೆ ಕಳೆದ ಎರಡು ವರ್ಷಗಳಿಂದ ಗಡ್ಡ ಇತ್ತು. ಯಶ್ ಎಲ್ಲಿಯೇ ಹೋದರೂ ಎಲ್ಲರೂ ಯಶ್ ಗೆ 'ನೀವು ಗಡ್ಡ ಯಾವಾಗ ತೆಗೆಯುತ್ತಿರಾ?' ಎಂದು ಕೇಳುತ್ತಿದ್ದರು. ಆದರೆ, ಈಗ ಕೊನೆಗೂ ಯಶ್ ಗಡ್ಡಕ್ಕೆ ಮುಕ್ತಿ ಸಿಕ್ಕಿದೆ.

ಯಶ್ ಗಡ್ಡಕ್ಕೆ ಮುಕ್ತಿ ನೀಡಿದ ವಿಡಿಯೋವನ್ನು ಪತ್ನಿ, ನಟಿ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಕೆ ಜಿ ಎಫ್' ಸಿನಿಮಾದಲ್ಲಿ ಯಶ್ ಲುಕ್ ಈ ರೀತಿ ಇತ್ತು. ಇದೊಂದು ಮಹಾ ಸಿನಿಮಾ ಆಗಿದ್ದು, ಸತತ ಎರಡು ವರ್ಷಗಳ ಕಾಲ ಸಿನಿಮಾದ ಶೂಟಿಂಗ್ ನಡೆದಿದೆ. ಇದೀಗ ಚಿತ್ರದ ಚಿತ್ರೀಕರಣ ಮುಗಿದಿದ್ದು, ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ಮುಂದೆ ಓದಿ...

ಹೊಸ ಲುಕ್ ನಲ್ಲಿ ಯಶ್

ಯಶ್ ಎರಡು ವರ್ಷಗಳಿಂದ ಗಡ್ಡ ಬಿಟ್ಟಿದ್ದರು. ಅವರ ಮುಖಕ್ಕೆ ಆ ಗಡ್ಡ ಸಖತ್ ಆಗಿ ಕಾಣುತ್ತಿತ್ತು. ಇದೀಗ ಯಶ್ ಗಡ್ಡ ತೆಗೆದಿದ್ದಾರೆ. ಗಡ್ಡ ತೆಗೆದ ಯಶ್ ಇನ್ನೂ ಚೆನ್ನಾಗಿ ಆಗಿ ಕಾಣುತ್ತಿದ್ದಾರೆ. ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್ ಎಂಟ್ರಿ ಕೊಟ್ಟಿದ್ದಾರೆ.

ಖುಷಿ ಪಡುತ್ತಿದ್ದಾರೆ ರಾಧಿಕಾ

ಯಶ್ ಗಡ್ಡದ ಬಗ್ಗೆ ಮಾತನಾಡಿರುವ ರಾಧಿಕ ಪಂಡಿತ್ ''ಇವತ್ತು ನನಗೆ ಸಖತ್ ಖುಷಿ ಆಗುತ್ತಿದೆ. ನನ್ನ ಜೊತೆಗೆ ನೀವು ಕೂಡ ಕಾಯುತ್ತಿದ್ದ ಈ ಉದ್ದ ಕೂದಲು ಹಾಗೂ ಗಡ್ಡ ಹೋಗುತ್ತಿದೆ. ಫೈನಲಿ ಈ ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನಗೆ ನನ್ನ ಗಂಡ ಹಿಂದೆ ಹೇಗೆ ಕಾಣಿಸುತ್ತಿದ್ದರು ಎಂದು ನೆನಪೆ ಇಲ್ಲದಂತೆ ಆಗಿತ್ತು.'' ಎಂದು ತಮಾಷೆ ಮಾಡಿದ್ದಾರೆ.

'ಮೈ ನೇಮ್ ಇಸ್ ಕಿರಾತಕ' ಚಿತ್ರ

'ಮೈ ನೇಮ್ ಇಸ್ ಕಿರಾತಕ' ಚಿತ್ರಕ್ಕಾಗಿ ನಟ ಯಶ್ ಹೊಸ ಲುಕ್ ಅನ್ನು ಟ್ರೈ ಮಾಡಿದ್ದಾರೆ. ಈ ಸಿನಿಮಾವನ್ನು 'ರಾಂಬೋ 2' ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಜಯಣ್ಣ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಮತ್ತೆ ಯಶ್ ಕಿರಾತಕನ ಅವತಾರದಲ್ಲಿ ಬಂದಿದ್ದಾರೆ.

ಗಡ್ಡ ತೆಗೆಯೋಕ್ಕೆ ಮನಸ್ಸು ಇಲ್ಲ

ಯಶ್ ಸಹ ಗಡ್ಡದ ಬಗ್ಗೆ ಮಾತನಾಡಿದ್ದು, ''ಗಡ್ಡ ತೆಗೆಯೋಕ್ಕೆ ಮನಸ್ಸು ಇಲ್ಲ. ಎರಡು ವರ್ಷಗಳಿಂದ ಇದರ ಜೊತೆಗೆ ಇದ್ದು ಇದ್ದು ಅಭ್ಯಾಸ ಆಗಿದೆ. ಗಡ್ಡ ಇರಲಿ ಎಂದು ನಾನು ಒಂದು ಬಾರಿ ಒಪ್ಪಿಸೊಕ್ಕೆ ಪ್ರಯತ್ನ ಮಾಡಿದೆ. ಆದರೆ ನಿರ್ದೇಶಕರು, ರಾಧಿಕಾ ಕೇಳಲಿಲ್ಲ. ಇದು ನನಗೆ ಬೇಜಾರು ವಿಷಯ, ಆದರೆ ಇವರೆಲ್ಲರಿಗೆ ಖುಷಿ ಆಗುತ್ತಿದೆ.'' ಎಂದು ನಗುತ್ತಾ ಹೇಳಿದ್ದಾರೆ.

ಟೈಟಲ್ ವಿವಾದ ಆಗಿತ್ತು

ಅಂದಹಾಗೆ, ಯಶ್ ನಟನೆಯ ಈ ಸಿನಿಮಾದ ಟೈಟಲ್ ಇತ್ತೀಚಿಗಷ್ಟೆ ವಿವಾದ ಹುಟ್ಟು ಹಾಕಿತ್ತು. 'ಕಿರಾತಕ 2' ಹೆಸರಿನಲ್ಲಿ ನಿರ್ದೇಶಕ ಪ್ರದೀಪ್ ರಾಜ್ ಹೊಸ ಸಿನಿಮಾ ಶುರು ಮಾಡಿದ್ದು, ಈಗ ಅನಿಲ್ ಕುಮಾರ್ ಕೂಡ ತಮ್ಮ ಚಿತ್ರಕ್ಕೆ ಅದೇ ಹೆಸರು ಇಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ಈಗ ಯಶ್ ಹಾಗೂ ಅನಿಲ್ ಚಿತ್ರಕ್ಕೆ 'ಮೈ ನೇಮ್ ಇಸ್ ಕಿರಾತಕ' ಹೆಸರನ್ನು ಇಡಲಾಗಿದೆ.

READ SOURCE