By: Filmibeat Kannada Video Team
Published : January 13, 2018, 11:55

ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟೇ ಬಿಟ್ಟರು ಅಮೂಲ್ಯ

Subscribe to Filmibeat Kannada

ರಾಜರಾಜೇಶ್ವರಿ ನಗರದ ಮಾಜಿ ನಗರ ಪಾಲಿಕೆ ಸದಸ್ಯರಾದ ರಾಮಚಂದ್ರ ಅವರ ಮನೆ ಸೊಸೆ ಆಗಿರುವ ನಟಿ ಅಮೂಲ್ಯ ರಾಜಕೀಯ ಕ್ಷೇತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ನಂತರ "ಇಲ್ಲ ನಾನು ಸಿನಿಮಾರಂಗದಲ್ಲೇ ಮುಂದುವರೆಯುತ್ತೇನೆ" ಎಂದಿದ್ದರು ಅಮೂಲ್ಯ. ಆದರೆ ಯಾರಿಗೂ ಗೊತ್ತಾಗದೆ ಅಮ್ಮು ರಾಜಕೀಯದಲ್ಲಿ ಮೊದಲ ಹೆಜ್ಜೆ ಇಟ್ಟೇ ಬಿಟ್ಟಿದ್ದಾರೆ. ಚುನಾವಣೆಗೆ ಇನ್ನ ಕೆಲವೇ ತಿಂಗಳುಗಳು ಬಾಕಿ ಇವೆ. ಮಾವನ ಪರವಾಗಿ ಪ್ರಚಾರ ಮಾಡುವುದರ ಜೊತೆಗೆ ಹಲವರ ಮಧ್ಯೆ ವಿಭಿನ್ನವಾಗಿ ನಿಲ್ಲಬೇಕು ಅನ್ನುವ ನಿರ್ಧಾರ ಮಾಡಿರುವಂತಿದೆ. ಇದೇ ಕಾರಣಕ್ಕೆ ಅಮೂಲ್ಯ ರಾಜಕೀಯದಲ್ಲಿ ಪ್ರಾರಂಭ ಮಾಡಿರುವ ಮೊದಲ ಕೆಲಸ ಸಮಾಜಸೇವೆ. 'ವನಿತಾ ವಿಕಾಸ್' ಎನ್ನುವ ಹೆಸರಿನಲ್ಲಿ ಸಂಸ್ಥೆಯನ್ನ ಹುಟ್ಟುಹಾಕಿ ಈ ಮೂಲಕ ಮಹಿಳೆಯ ಏಳಿಗೆಗೆ ಶ್ರಮಿಸಲು ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ತಯಾರಿ ಮಾಡಿಕೊಂಡಿದ್ದಾರೆ. 'ವನಿತಾ ವಿಕಾಸ್' ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಅಮೂಲ್ಯ ತೆಗೆದುಕೊಂಡಿದ್ದು ಈ ಬಗ್ಗೆ ಇನ್ ಸ್ಟಾಗ್ರಾಂ ನಲ್ಲಿ ಹೇಳಿಕೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !