By: Filmibeat Kannada Video Team
Published : July 05, 2017, 03:28

ಬಿಗ್‌ಬಾಸ್ ಸ್ಪರ್ಧಿ ಮದುವೆಯಾದ 6 ತಿಂಗಳಲ್ಲೇ ಪತಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ

Subscribe to Filmibeat Kannada

ಬಿಗ್‌ಬಾಸ್‌ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಮಂದನಾ ಕರಿಮಿ ತಮ್ಮ ಪತಿ ಗೌರವ್‌ ಗುಪ್ತಾ ವಿರುದ್ಧ ಮುಂಬೈನ ಅಂಧೇರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಳೆ.


2012ರಲ್ಲಿ ಮಾಡಲಿಂಗ್‌ ಹಾಗೂ ಆ್ಯಕ್ಟಿಂಗ್‌ ನಿಮಿತ್ತ ಭಾರತಕ್ಕೆ ಬಂದಿದ್ದ ಇರಾನ್‌ ದೇಶದ ಮಂದನಾ 2016ರಲ್ಲಿ ಗೌರವ್‌ ಗುಪ್ತಾ ಜೊತೆ ಎಂಗೇಜ್‌ ಆಗಿ 2017ರ ಜನವರಿಯಲ್ಲಿ ವಿವಾಹವಾಗಿದ್ದರು.


ಈಗ ಪತಿ ಗೌರವ್‌ ಗುಪ್ತಾ ತನಗೆ ಹಿಂಸೆ ನೀಡುತ್ತಿದ್ದಾರೆ. ಪತಿ ಗೌರವ್, ಅವರ ತಾಯಿ ಮಧು ಗುಪ್ತಾ, ತಂದೆ ಸುಶೀಲ್‌ ಗುಪ್ತಾ ಹಾಗೂ ಗೌರವ್‌ ಸಹೋದರ ಗೌತಮ್‌ ಗುಪ್ತಾ ತನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಮಂದನಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿಕೊಂಡಿದ್ದಾಳೆ.


ಅಂತೆಯೇ ಮಂದನಾ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಅಂಧೇರಿ ನ್ಯಾಯಾಲಯ ಆಕೆಯ ಪತಿ, ಅತ್ತೆ, ಮಾವ, ಮೈದುನರಿಗೆ ನೊಟೀಸ್ ಜಾರಿ ಮಾಡಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !