By: Filmibeat Kannada Video Team
Published : December 07, 2017, 05:20

ಕನ್ನಡ ಸಿನಿಮಾ ನಿರ್ದೇಶಕ ಪವನ್ ವಡೆಯರ್ ಮದುವೆ ಫಿಕ್ಸ್

Subscribe to Filmibeat Kannada

ಪವನ್ ವಡೆಯರ್ ಕನ್ನಡ ಸಿನಿಮಾದ ಹೆಸರಾಂತ ನಿರ್ದೇಶಕ. ಅನೇಕ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ ಪವನ್ ವಡೆಯರ್. 2012ರಲ್ಲಿ ಮೂಡಿ ಬಂದ ಗೋವಿಂದಾಯ ನಮಃ ಸಿನೆಮಾದಿಂದ ಪವನ್ ವಡೆಯರ್ ಬಾರಿ ಫೇಮಸ್ ಆಗಿದ್ದಾರೆ. ಇನ್ನು 2010ರಲ್ಲಿ ತೆರೆಗೆ ಬಂದ ಪಂಚರಂಗಿ ಸಿನಿಮಾದಲ್ಲಿ ಯೋಗರಾಜ್ ಭಟ್ರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ರು. ಮೊಟ್ಟ ಮೊದಲನೇದಾಗಿ ನಿರ್ದೇಶಕನಾಗಿ 2012ರಲ್ಲಿ ಸೂಪರ್ ಹಿಟ್ ಆದ ಗೋವಿಂದಾಯ ನಮಃ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡ್ತಾರೆ. ಗೋವಿಂದಾಯ ನಮಃ ಸಿನಿಮಾ ಪವನ್ ವಡೆಯರ್ ರಿಗೆ ಸೈಮಾ ಪ್ರಶಸ್ತಿಯನ್ನ ಕೂಡ ತಂದುಕೊಟ್ಟಿತು. ನಂತರ 2013ರಲ್ಲಿ ತೆಲುಗಿನಲ್ಲಿ ರಿಮೇಕ್ ಆದ ಗೋವಿಂದಾಯ ನಮಃ ಸಿನಿಮಾವನ್ನ ಪವನ್ ವಡೆಯರ್ ನಿರ್ದೇಶನ ಮಾಡಿದ್ದಾರೆ. ಈಗ ನಿರ್ದೇಶಕ ಪವನ್ ವಡೆಯರ್ ರವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಅಪೇಕ್ಷ ಪುರೋಹಿತ್ ರ ಕೈ ಹಿಡಿಯಲಿದ್ದಾರೆ. ಇಂದು 07/12/2017ರಂದು ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿದೆ. ಈ ವಿಡಿಯೋ ನೋಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

ರೋಲ್, ಕ್ಯಾಮೆರಾ, ಆಕ್ಷನ್ ಸಿನಿಮಾ ಸಂಭ್ರಮಕ್ಕಾಗಿ ಫಿಲ್ಮಿಬೀಟ್ ಗೆ ಸಬ್ ಸ್ಕ್ರೈಬ್ ಮಾಡಿ, NOW !