Tap to Read ➤

ರೆಬಲ್‌ ಸ್ಟಾರ್ ಅಂಬರೀಶ್‌ 70ನೇ ಹುಟ್ಟುಹಬ್ಬದ ಸಂಭ್ರಮ

ರಾಜ್ಯದ ಜನರಿಗೆ ಮಂಡ್ಯದ ಗಂಡು. ಸಿನಿಮಾ ಕ್ಷೇತ್ರದಲ್ಲೂ, ರಾಜಕೀಯದಲ್ಲೂ ಎರಡರಲ್ಲೂ ಮಿಂಚಿದ ಧ್ರುವತಾರೆ ಅಂಬರೀಶ್‌
ಕನ್ನಡ ಚಿತ್ರರಂಗದ ರೆಬಲ್‌ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಇಂದು  ನಾಲ್ಕು ವರ್ಷಗಳು ಕಳೆದರೂ ಅವರ ನೆನಪು ಮನದಲ್ಲಿ ಸದಾ ಹಸಿರಾಗಿದೆ.
ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ ರೆಬಲ್‌ ಸ್ಟಾರ್‍‌ ಅಂಬರೀಶ್ ಜನರ ಪಾಲಿನ ನೆಚ್ಚಿನ ನಟ
ಅಂಬರೀಶ್ 70ನೇ ಹುಟ್ಟುಹಬ್ಬ ಸಂಭ್ರಮ, ಕೇಕ್ ಕತ್ತರಿಸಿ ಸಂಭ್ರಮಿಸಿದ ಸುಮಲತಾ!
ರೆಬಲ್‌ ಸ್ಟಾರ್ ಅಂಬರೀಶ್ ನೆನಪಿನಲ್ಲಿಯೇ ಪತ್ನಿ ಸುಮಲತಾ ಹುಟ್ಟುಹಬ್ಬ ಆಚರಿಸಿದ್ದಾರೆ. ಅಂಬಿಗಾಗಿ ಕೇಕ್ ತಂದು ಕತ್ತರಿಸಿದ್ದಾರೆ.
" ಹೃದಯ ಶ್ರೀಮಂತಿಕೆ ಹೊಂದಿದ್ದ ವ್ಯಕ್ತಿ ನೀವು, ನೀವು ಯಾವಾಗಲೂ ಜೀವಿಸುತ್ತಲೇ ಇರುತ್ತೀರ. ನಿಮಗೆ ಎಂದೆಂದೂ ವಯಸ್ಸು ಅನ್ನುವುದೇ ಇಲ್ಲ. ಎಂದೆಂದಿಗೂ ಅಂಬಿ.. ಅಂಬಿ ಅಮರ." ಎಂದು ಸುಮಲತಾ ಅಂಬರೀಶ್ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ.
ಶತ್ರುಗಳೇ ಇಲ್ಲದ ಏಕೈಕ ಸ್ಟಾರ್.. ಕನ್ನಡದ ರೆಬೆಲ್ ಸ್ಟಾರ್! ಅಂಬರೀಶ್
ಅಂಬರೀಶ್ ಕೇವಲ ಸಿನಿಮಾದಿಂದಷ್ಟೇ ಅಲ್ಲ. ಅವರ ವ್ಯಕ್ತಿತ್ವದಿಂದಲೂ ಜನರ ಮನಗೆದ್ದವರು.
ಅಂಬರೀಶ್ ನೋಡುವುದಕ್ಕೆ ರೆಬೆಲ್ ಅಂತ ಕಂಡರೂ, ಜಾಲಿ ಮನುಷ್ಯ. ಮಗುವಿನಂತಹ ಮನಸ್ಸು.
More Stories