Tap to Read ➤

ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ಎಂಗೇಜ್‍ಮೆಂಟ್ ಫೋಟೋಸ್

ಕನ್ನಡ ಚಿತ್ರರಂಗದಲ್ಲಿ ಸಾಲು-ಸಾಲು ಮದುವೆಗಳು ನಡೆಯುತ್ತಿವೆ. ಡಿ.11ರಂದು ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅವರ ಎಂಗೇಜ್‍ಮೆಂಟ್ ಫೋಟೋಗಳನ್ನು ಸುಮಲತಾ ಶೇರ್ ಮಾಡಿದ್ದಾರೆ.
sowmya malnad
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಪುತ್ರ ಅಭಿಷೇಕ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಅಭಿಷೇಕ್ ತಾವು ಇಷ್ಟಪಟ್ಟ ಹುಡುಗಿ ಅವೀವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಡಿಸೆಂಬರ್ 11ರಂದು ಖಾಸಗಿ ಹೋಟೆಲ್ ನಲ್ಲಿ ಇವರಿಬ್ಬರ ಎಂಗೇಜ್‍ಮೆಂಟ್ ನೆರವೇರಿದೆ.
ಇದೀಗ ಸುಮಲತಾ ಅಂಬರೀಶ್ ಮಗನ ನಿಶ್ಚಿತಾರ್ಥದ ಫೋಟೋಸ್ ಶೇರ್ ಮಾಡಿದ್ದಾರೆ.
ಹೊಸ ಜೀವನದ ಮೊದಲ ಹೆಜ್ಜೆ ಇಟ್ಟಿರುವ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಅವರಿಗೆ ನಿಮ್ಮ ಪ್ರೀತಿ, ಹಾರೈಕೆ ಆಶೀರ್ವಾದ ಇರಲಿ ಎಂದಿದ್ದಾರೆ.
ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು.
2023ರ ಸಂಕ್ರಾಂತಿ ಹಬ್ಬದಂದು ಈ ಜೋಡಿ ಮದುವೆಯಾಗಲಿದೆ.
More