Tap to Read ➤

ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್‌ಗೆ ಜೋಡಿಯಾದ ಲೀಲಾ

ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಕಾಂಬಿನೇಷನ್ ನ 'ಕಾಳಿ' ಸಿನಿಮಾದ ಮುಹೂರ್ತ ಇಂದು ನೆರವೇರಿದ್ದು, ಇದರ ಫೋಟೋಗಳು ಇಲ್ಲಿವೆ.
sowmya malnad
ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಕಾಂಬಿನೇಷನ್ ನ 'ಕಾಳಿ' ಸಿನಿಮಾದ ಮುಹೂರ್ತ ಇಂದು ನೆರವೇರಿದೆ.
ಹೆಬ್ಬುಲಿ ಸಿನಿಮಾ ನಿರ್ದೇಶಕ ಎಸ್.ಕೃಷ್ಣ 'ಕಾಳಿ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಕಾಂತಾರ ಸಿನಿಮಾ ಬಳಿಕ ಸಪ್ತಮಿ ಗೌಡಗೆ ಬೇಡಿಕೆ ಹೆಚ್ಚಾಗಿದ್ದು, ಹಲವು ಸಿನಿಮಾ ಕಥೆಗಳನ್ನು ಅವರು ಕೇಳುತ್ತಿದ್ದಾರೆ.
ಸದ್ಯ ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್‌ ಜೊತೆಗಿನ 'ಕಾಳಿ' ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಸಪ್ತಮಿ ಕರ್ನಾಟಕದಲ್ಲಿ ಸೆಟಲ್‌ ಆಗಿರುವ ತಮಿಳು ಹುಡುಗಿಯ ಪಾತ್ರ ನಿರ್ವಹಿಸಲಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಅಭಿಷೇಕ್ ರಗಡ್ ಲುಕ್​​ನಲ್ಲಿ ಕಾಣಿಸಿಕೊಳ್ಳಲಿದ್ದು, ಈಗಾಗಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.
ಈ ಸಿನಿಮಾಗೆ ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.