Tap to Read ➤

ಡಿ.11ಕ್ಕೆ ಅಭಿಷೇಕ್ ಅಂಬರೀಶ್ ಎಂಗೇಜ್​ಮೆಂಟ್: ಇವರೇ ನೋಡಿ ಹುಡುಗಿ!

ಕನ್ನಡ ಚಿತ್ರರಂಗದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಶ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ಡಿಸೆಂಬರ್ 11ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
sowmya malnad
ಕೆಲ ದಿನಗಳಿಂದ ಜ್ಯೂ.ರೆಬೆಲ್ ಸ್ಟಾರ್ ಅಭಿಷೇಕ್‌ ಅಂಬರೀಶ್ ಎಂಗೇಜ್​ಮೆಂಟ್ ವಿಚಾರ ಸುದ್ದಿಯಲ್ಲಿತ್ತು.
ಇದೀಗ ಡಿಸೆಂಬರ್ 11ರಂದು ಅಭಿಷೇಕ್‌ ನಿಶ್ಚಿತಾರ್ಥ ನಡೆಯಲಿದೆ ಎಂಬ ವಿಚಾರ ಹೊರಬಿದ್ದಿದೆ.
ಅಭಿಷೇಕ್‌ ಅವರು ಮಾಡೆಲ್ ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಅಭಿಷೇಕ್‌ ಮತ್ತು ಅವಿವಾ ಬಿದ್ದಪ್ಪ ಕಳೆದ ನಾಲ್ಕು ವರ್ಷಗಳಿಂದ ರಿಲೇಶನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ.
ಕೇವಲ ಕುಟುಂಬ ಸದಸ್ಯರೊಂದಿಗೆ ನಿಶ್ಚಿತಾರ್ಥ ಜರುಗಲಿದೆ ಎಂಬ ಮಾಹಿತಿ ಇದೆ.
ಡಿ.8ರಂದು ಅಭಿಷೇಕ್ ಅಂಬರೀಶ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
More