Tap to Read ➤

ಸ್ಯಾಂಡಲ್‌ವುಡ್‌ನಲ್ಲಿ ಇಶಾನ್‌ಗೆ ಹೆಚ್ಚಿದ ಬೇಡಿಕೆ

ಹೊಸ ಪ್ರತಿಭೆ ಇಶಾನ್ ಅಭಿನಯದ 'ರೇಮೊ' ಸಿನಿಮಾ ನವೆಂಬರ್ 25ರಂದು ಬಿಡುಗಡೆಯಾಗುತ್ತಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಇಶಾನ್ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.
sowmya malnad
ಹೊಸ ಪ್ರತಿಭೆ ಇಶಾನ್ 'ರೇಮೊ' ಸಿನಿಮಾ ಮೂಲಕ ರಾಕ್ ಸ್ಟಾರ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಈ ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದು, ಇದು ಪಕ್ಕಾ ಮ್ಯೂಸಿಕಲ್ ಹಾಗೂ ರೊಮ್ಯಾಂಟಿಕ್ ಚಿತ್ರ.
ಈ ಸಿನಿಮಾದಲ್ಲಿ ಇಶಾನ್ ಜೊತೆ ಆಶಿಕಾ ರಂಗನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ರೇಮೊ' ಸಿನಿಮಾ ಹೀರೊ ಇಶಾನ್‌ಗೆ ಚಿತ್ರರಂಗದ ದಿಗ್ಗಜರ ಸರ್ಪೋರ್ಟ್ ಸಿಕ್ಕಿದೆ.
ಸ್ಯಾಂಡಲ್‌ವುಡ್‌ನ ಶಿವಣ್ಣ, ಸುದೀಪ್, ರವಿಚಂದ್ರನ್ ಹೀಗೆ ಸೂಪರ್‌ಸ್ಟಾರ್‌ಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಕೂಡ ಇಶಾನ್‌ಗೆ ಆಶೀರ್ವಾದ ಮಾಡಿದ್ದಾರೆ.
ಜೊತೆಗೆ ಸ್ಯಾಂಡಲ್‌ವುಡ್‌ನ ನಾಲ್ವರು ನಿರ್ದೇಶಕರು ಇಶಾನ್‌ಗೆ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ.
'ರೇಮೊ' ಸಿನಿಮಾ ನವೆಂಬರ್ 25ರಂದು ತೆರೆಗೆ ಬರಲಿದೆ.
More