Tap to Read ➤
ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ಅದಿತಿ ಪ್ರಭುದೇವ: ಇಲ್ಲಿವೆ ಕ್ಯೂಟ್ ಫೋಟೋಸ್
ಕನ್ನಡದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಅದಿತಿ ಪ್ರಭುದೇವ ಹೊಸ ಬಾಳಿಗೆ ಕಾಲಿಡುತ್ತಿದ್ದು, ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
sowmya malnad
ಸ್ಯಾಂಡಲ್ವುಡ್ನ ಕ್ಯೂಟ್ ನಟಿ ಅದಿತಿ ಪ್ರಭುದೇವ ನಾಳೆ (ನ.27) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಈಗಾಗಲೇ ಅದಿತಿ ಮದುವೆ ಸಂಬಂಧಿತ ಶಾಸ್ತ್ರಗಳು ಆರಂಭವಾಗಿದ್ದು, ಇಂದು ಅರಶಿನ ಶಾಸ್ತ್ರ ನೆರವೇರಿದೆ.
ಈ ಫೋಟೋಗಳನ್ನು ಅದಿತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಸೀರೆ ಹಾಗೂ ಅರಶಿನ ಶಾಸ್ತ್ರದ ಸ್ಪೆಷಲ್ ಜ್ಯುವೆಲ್ಸ್ ಧರಿಸಿದ ಅದಿತಿ ಪೋಸ್ ಕೊಟ್ಟಿದ್ದಾರೆ.
ಬೆಂಗಳೂರು ಪ್ಯಾಲೇಸ್ ಗ್ರೌಂಡ್ನಲ್ಲಿ ಭಾನುವಾರ ಅದಿತಿ ಯಶಸ್ವಿ (ಯಶಸ್) ಜೊತೆ ಹಸೆಮಣೆ ಏರುತ್ತಿದ್ದಾರೆ.
ಯಶಸ್ವಿ ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದಾರೆ.
ಹಳದಿ ಶಾಸ್ತ್ರದ ಫೋಟೋ ನೋಡಿ ಅಭಿಮಾನಿಗಳು ಅದಿತಿಗೆ ಶುಭಾಶಯಗಳ ಸುರಿಮಳೆಗೈದಿದ್ದಾರೆ.
More