Tap to Read ➤

ಬರ್ತ್ ಡೇ ಪ್ರಯುಕ್ತ ಲವ್ಲಿ ಸ್ಟಾರ್ ಪುತ್ರಿ ಅಮೃತಾ ಪ್ರೇಮ್ ಹೊಸ ಫೋಟೋಶೂಟ್

ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.
sowmya malnad
ಸ್ಯಾಂಡಲ್‌ವುಡ್‌ ಯುವ ನಟಿ ಅಮೃತಾ ಪ್ರೇಮ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಅಮೃತಾ ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಹಳದಿ ಬಣ್ಣದ ಗೌನ್ ಧರಿಸಿ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಪುತ್ರಿಯಾಗಿರುವ ಅಮೃತಾ, 'ಟಗರು ಪಲ್ಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಅಮೃತಾ ನಾಗಭೂಷಣ್ ಅವರಿಗೆ ಜೋಡಿಯಾಗಿ ಮಿಂಚಲಿದ್ದಾರೆ.
ಈ ಸಿನಿಮಾವನ್ನು ನಟರಾಕ್ಷಸ ಡಾಲಿ ಧನಂಜಯ್ ತಮ್ಮ 'ಡಾಲಿ ಪಿಚ್ಚರ್ಸ್' ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
More