Tap to Read ➤

ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ಹರಿಪ್ರಿಯಾ..!

ಉಗ್ರಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆಯಾಗಲು ಸಜ್ಜಾಗಿದ್ದಾರೆ ಎನ್ನಲಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.
sowmya malnad
ಕೆಲ ದಿನಗಳಿಂದ ಖ್ಯಾತ ನಟಿ ಹರಿಪ್ರಿಯಾ ಮದುವೆ ವಿಚಾರ ವೈರಲ್ ಆಗಿತ್ತು.
ಇದರ ಬೆನ್ನಲ್ಲೇ ಹರಿಪ್ರಿಯಾ ಇತ್ತೀಚಿಗಷ್ಟೆ ಮೂಗು ಚುಚ್ಚಿಕೊಂಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ಆಗಲೇ ಹರಿಪ್ರಿಯಾ ಹಸೆಮಣೆ ಏರುವುದು ಕನ್ಫರ್ಮ್ ಎನ್ನುವ ಮಾತು ಕೇಳಿಬಂದಿತ್ತು. ಇದೀಗ ಆಪ್ತ ಮೂಲಗಳು ಆ ಸುದ್ದಿ ನಿಜ ಎನ್ನುತ್ತಿವೆ.
ನಟಿ ಹರಿಪ್ರಿಯಾ ಅವರು ಕನ್ನಡದ ಚಿತ್ರರಂಗದ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಹರಿಪ್ರಿಯಾ ಅವರ ಮೂಗು ಚುಚ್ಚವ ವೇಳೆ ಇವರಿಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ.
ಇತ್ತೀಚಿಗಷ್ಟೆ ಹರಿಪ್ರಿಯಾ ಮೂಗು ಚುಚ್ಚಿಕೊಂಚಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಜೊತೆಯಲ್ಲಿದ್ದರು.
ಮೂಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಗೆ ಮುತ್ತು ನೀಡಿ, ಸಮಾಧಾನ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಆದರೆ, ವಿಡಿಯೋದಲ್ಲಿ ವಸಿಷ್ಠ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಹರಿಪ್ರಿಯಾ ಜೊತೆ ಇದ್ದಿದ್ದು ವಸಿಷ್ಠ ಸಿಂಹ ಎನ್ನುವುದು ಗೊತ್ತಾಗಿದೆ.
ಆದರೆ, ಮದುವೆ ಬಗ್ಗೆ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಅಧಿಕೃತ ಮಾಹಿತಿ ನೀಡಿಲ್ಲ.