Tap to Read ➤

ನಾಯಿಮರಿ ವಿಡಿಯೋ ಶೇರ್ ಮಾಡಿ 'ಲವ್ ಸ್ಟೋರಿ' ಹೇಳಿದ ಹರಿಪ್ರಿಯಾ

ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ನಾಯಿಮರಿ ವಿಡಿಯೋ ಶೇರ್ ಮಾಡುವ ಮೂಲಕ ತಮ್ಮ ಹಾಗೂ ವಸಿಷ್ಠ ಸಿಂಹ ನಡುವೆ ಪ್ರೀತಿ ಹೇಗೆ ಹುಟ್ಟಿತು ಎಂಬುದನ್ನು ವಿವರಿಸಿದ್ದಾರೆ.
sowmya malnad
ಸ್ಯಾಂಡಲ್‌ವುಡ್‌ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಇದೀಗ ವಸಿಷ್ಠ ಸಿಂಹ ಕೊಟ್ಟ ಪ್ರೀತಿಯ ಗಿಫ್ಟ್​ ಬಗ್ಗೆ ಹರಿಪ್ರಿಯಾ ವಿಡಿಯೋ ಮಾಡಿ, ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.
ವಸಿಷ್ಠ ಕೊಟ್ಟ ಈ ಗಿಫ್ಟ್‌ನಿಂದ ಸ್ನೇಹ, ಪ್ರೀತಿಯಾಗಿ ಬೆಳೆದಿದ್ದು ಹೇಗೆ ಅನ್ನೋದನ್ನು ಖುದ್ದು ಹರಿಪ್ರಿಯಾ ವಿವರಿಸಿದ್ದಾರೆ.
ಕಳೆದ ವರ್ಷ ವಸಿಷ್ಠ ಸಿಂಹ ನನಗೆ ಕ್ರಿಸ್ಟಲ್ ಎಂಬ ಮುದ್ದಾದ ನಾಯಿಮರಿ ಗಿಫ್ಟ್‌ ಕೊಟ್ಟಿದ್ದರು.
ಕ್ರಿಸ್ಟಲ್‌ನ ಎದೆಯ ಮೇಲೆ ಲವ್​ ಸಿಂಬಲ್ ಇದೆ. ಇದು ಅವನ ಬರ್ತ್ ಮಾರ್ಕ್​​.
ಕ್ರಿಸ್ಟಲ್‌ ನಮ್ಮ ಮನೆಗೆ ಬಂದು 1 ವರ್ಷ. ಕ್ರಿಸ್ಟಲ್​ ಜೊತೆ ನಮ್ಮ ಸ್ನೇಹ ಕೂಡ ಪ್ರೀತಿಯಾಗಿ ಬೆಳೆದಿದೆ.
ಈ ಮೂಲಕವೇ ನನಗೆ ಸಿಂಹನ ಮೊದಲ ಗಿಫ್ಟ್​ ಹಿಂದಿನ ಬಿಗ್​ ಸೀಕ್ರೇಟ್​ ಅರ್ಥವಾಗಿದ್ದು ಎಂದು ಹರಿಪ್ರಿಯಾ ನಾಚುತ್ತಾ ವಿವರಿಸಿದ್ದಾರೆ.
ಈ ಮೂಲಕ ತಮ್ಮಿಬ್ಬರ ಪ್ರೇಮ ಹೇಗೆ ಹುಟ್ಟಿತು ಎಂಬುದನ್ನು ಹರಿಪ್ರಿಯಾ ತಿಳಿಸಿದ್ದಾರೆ.
More