Tap to Read ➤

ಸಿನಿಪ್ರಿಯರ 'ದಿಲ್' ಕದಿಯಲು ರೆಡಿಯಾದ ಮೇಘಾ ಶೆಟ್ಟಿ

ನಟಿ ಮೇಘಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದು, ಅವರ ಅಭಿನಯದ 'ದಿಲ್ ಪಸಂದ್' ಸಿನಿಮಾ ನಾಳೆ ಬಿಡುಗಡೆಯಾಗಲಿದೆ.
sowmya malnad
ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಮನೆ ಮಾತಾಗಿದ್ದಾರೆ.
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿನ ಅನು ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ.
ಸದ್ಯ ಮೇಘಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಮೇಘಾ ಶೆಟ್ಟಿ ನಟನೆಯ 'ದಿಲ್ ಪಸಂದ್' ಸಿನಿಮಾ ನವೆಂಬರ್ 11ರಂದು ರಿಲೀಸ್ ಆಗಲಿದೆ.
ಮೇಘಾ ಶೆಟ್ಟಿ ಮೊದಲು ಗೋಲ್ಡನ್ ಸ್ಟಾರ್ ಗಣೇಶ್ ಅವರ 'ತ್ರಿಬಲ್ ರೈಡಿಂಗ್' ಸಿನಿಮಾದಲ್ಲಿ ನಟಿಸಿದ್ದರು.
ಇದೀಗ ಮೊದಲನೇ ಸಿನಿಮಾ ರಿಲೀಸ್ ಆಗುವ ಮುನ್ನವೇ 2ನೇ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಡಾರ್ಲಿಂಗ್ ಕೃಷ್ಣ ನಟನೆಯ 'ದಿಲ್ ಪಸಂದ್' ಸಿನಿಮಾದಲ್ಲಿ ಮೇಘಾ ಶೆಟ್ಟಿ ಹಾಗೂ ನಿಷ್ವಿಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.
ಕಿರುತೆರೆ-ಬೆಳ್ಳಿತೆರೆ ಎರಡಲ್ಲೂ ಬ್ಯುಸಿಯಾಗಿರುವ ಮೇಘಾ, 'ದಿಲ್ ಪಸಂದ್' ಸಿನಿಮಾ ಮೂಲಕ ಸಿನಿಪ್ರಿಯರ ದಿಲ್ ಕದಿಯಲು ರೆಡಿಯಾಗಿದ್ದಾರೆ.
More