Tap to Read ➤

Mr.ಬ್ಯಾಚುಲರ್ ಗೆ ಜೋಡಿಯಾದ 'ಪುಷ್ಪವತಿ' ನಿಮಿಕಾ ರತ್ನಾಕರ್

ಕಾಂತಿ ಸಿನಿಮಾದ 'ಪುಷ್ಪವತಿ' ಹಾಡಿಗೆ ದರ್ಶನ್ ಜೊತೆ ಹೆಜ್ಜೆ ಹಾಕಿರುವ ನಟಿ ನಿಮಿಕಾ ರತ್ನಾಕರ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇದೀಗ ಮಿ.ಬ್ಯಾಚುಲರ್ ಸಿನಿಮಾ ಮೂಲಕ ಮತ್ತೆ ಮಿಂಚಲು ರೆಡಿಯಾಗಿದ್ದಾರೆ.
sowmya malnad
ನಟಿ ನಿಮಿಕಾ ರತ್ನಾಕರ್ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ನಿಮಿಕಾ ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಒಳ್ಳೆಯ ಜನಪ್ರಿಯತೆ ಪಡೆದಿದ್ದಾರೆ.
ಮಂಗಳೂರು ಮೂಲದ ನಿಮಿಕಾ ಬೆಳೆದಿದ್ದು ಮುಂಬೈನಲ್ಲಿ. ಇವರು 2008ರಲ್ಲಿ ರಾಮಧಾನ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಮಾಡೆಲ್ ಹಾಗೂ ಗಾಯಕಿಯಾಗಿರುವ ನಿಮಿಕಾ, ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ 2012ರ ವಿನ್ನರ್ ಕೂಡ ಹೌದು.
ನಿಮಿಕಾ ಕ್ರಾಂತಿ ಸಿನಿಮಾದ 'ಪುಷ್ಪವತಿ' ಹಾಡಿಗೆ ದರ್ಶನ್ ಜೊತೆ ಹೆಜ್ಜೆ ಹಾಕಿದ್ದರು. ಈ ಮೂಲಕ ಕರುನಾಡಿನಲ್ಲಿ ಪುಷ್ಪವತಿ ಎಂದೇ ಖ್ಯಾತಿ ಗಳಿಸಿದ್ದಾರೆ.
ಸದ್ಯ ಡಾರ್ಲಿಂಗ್ ಕೃಷ್ಣ ಅಭಿನಯದ ಮಿ.ಬ್ಯಾಚುಲರ್ ಸಿನಿಮಾದಲ್ಲಿ ನಿಮಿಕಾ ನಾಯಕಿಯಾಗಿ ನಟಿಸಿದ್ದಾರೆ.
ಮಿ.ಬ್ಯಾಚುಲರ್ ಚಿತ್ರದಲ್ಲಿ ಟ್ರೆಂಡಿ ಹುಡುಗಿಯಾಗಿ ನಿಮಿಕಾ ರತ್ನಾಕರ್ ನಟಿಸಿದ್ದು, ಜನವರಿ 6ರಂದು ಸಿನಿಮಾ ತೆರೆಗೆ ಬರಲಿದೆ.
More