ಮದುವೆ ಬಳಿಕ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿರುವ ನಟಿ ಪ್ರಣೀತಾ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೊಸ-ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಮುದ್ದಿನ ಮಗಳ ಜೊತೆ ಫೋಟೋ ಶೇರ್ ಮಾಡಿದ್ದಾರೆ.
sowmya malnad
ನಟಿ ಪ್ರಣೀತಾ ಸುಭಾಷ್ ಮಗಳೊಂದಿಗೆ 2023ರ ಮೊದಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಮುದ್ದು ಮಗಳ ಜೊತೆ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಪ್ರಣೀತಾ ಮಿಂಚಿದ್ದಾರೆ.
ನಟಿ ಪ್ರಣೀತಾ ಸುಭಾಷ್ ಮಗಳಿಗೆ ಆರ್ನಾ ಎಂಬ ಹೆಸರಿಟ್ಟಿದ್ದಾರೆ.
ಪೊರ್ಕಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ ಇಂದು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಪ್ರಣೀತಾ ತಮ್ಮದೇಯಾದ ಫೌಂಡೇಶನ್ ಮಾಡಿಕೊಂಡು ಅದರ ಮೂಲಕ ಸಮಾಜ ಸೇವೆ ಮಾಡುತ್ತಿರುತ್ತಾರೆ.
ಇದರ ಜೊತೆಗೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ.