Tap to Read ➤

'ಶಕುಂತಲೆ'ಯಾದ ನಟಿ ಸಮಂತಾ: ಫೋಟೋಗಳು ಸಖತ್ ವೈರಲ್

ನಟಿ ಸಮಂತಾ ಅಭಿನಯದ ಬಹುನಿರೀಕ್ಷಿತ 'ಶಾಕುಂತಲಂ' ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
sowmya malnad
ದುಷ್ಯಂತ ಮತ್ತು ಶಕುಂತಲೆಯ ಪ್ರೇಮಕಥೆಯುಳ್ಳ ನಟಿ ಸಮಂತಾ ಅಭಿನಯದ ಬಹುನಿರೀಕ್ಷಿತ 'ಶಾಕುಂತಲಂ' ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದ್ಭುತ ಪ್ರೇಮಕಥೆಯ ಮೊದಲ ನೋಟ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.
ಈ ನಡುವೆ ಸಮಂತಾ 'ಶಾಕುಂತಲಂ' ಚಿತ್ರದ ಫೋಟೋಗಳು ಸಖತ್ ವೈರಲ್ ಆಗಿವೆ.
ಈ ಫೋಟೋಗಳಲ್ಲಿ ಸಮಂತಾ ಪ್ರಕೃತಿಯ ಮಡಿಲಲ್ಲಿ ಶ್ವೇತಾ ವರ್ಣಿಯ ಉಡುಪು ಧರಿಸಿ, ಹೂವಿನ ಮಾಲೆಯನ್ನು ಆಭರಣ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಕೈಯಲ್ಲಿ ಮಣ್ಣಿನ ಮಡಿಕೆ ಹಿಡಿದು ಸಮಂತಾ ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗಳಲ್ಲಿ ಸಮಂತಾ ಥೇಟ್ ಶಕುಂತಲೆಯಂತೆ ಕಾಣಿಸಿಕೊಂಡಿದ್ದಾರೆ.
ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿವೆ.
More