Tap to Read ➤

ನಟಿ ಸಂಯುಕ್ತಾ ಹೊರನಾಡು ಹೊಸ ಫೋಟೋಶೂಟ್

ಲೈಫು ಇಷ್ಟೇನೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸಂಯುಕ್ತಾ ಹೊರನಾಡು ಸದ್ಯ ಕೆಲ ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸದ್ಯ ಈ ನಟಿ ಬೆಕ್ಕಿನೊಂದಿಗೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
sowmya malnad
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಂಯುಕ್ತಾ ಹೊರನಾಡು ಬೆಕ್ಕಿನೊಂದಿಗೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಹಸಿರು ಬಣ್ಣದ ಸೀರೆಯುಟ್ಟು ಬೆಕ್ಕಿನೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ನಟಿ ಸಂಯುಕ್ತಾ ಹೊರನಾಡು ಹಲವಾರು ಪೋಷಕ ಪಾತ್ರಗಳಿಗೆ ಜೀವ ನೀಡಿರುವ ಸುಧಾ ಬೆಳವಾಡಿ ಅವರ ಪುತ್ರಿ.
ಕಲಾವಿದರೇ ತುಂಬಿದ ಕುಟುಂಬದಿಂದ ಬಂದ ಸಂಯುಕ್ತಾ, ಲೈಫು ಇಷ್ಟೇನೆ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.
ಚಿತ್ರರಂಗಕ್ಕೂ ಬರುವ ಮುನ್ನ ಇವರು ಕಿರುತೆರೆಯಲ್ಲಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ.
ಇವರು ಪ್ರಾಣಿ ಪ್ರಿಯೆ ಹಾಗೂ ಪರಿಸರ ಪ್ರಿಯೆ ಕೂಡ ಹೌದು.
ಸಂಯುಕ್ತಾ ಒಗ್ಗರಣೆ ಸಿನಿಮಾದಲ್ಲಿನ ನಟನೆಗಾಗಿ ಫಿಲ್ಮ್ ಫೇರ್ ಬೆಸ್ಟ್ ಸಪೋರ್ಟಿಂಗ್ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
More