Tap to Read ➤

ನಾವು ಈ ಸಂಬಂಧವನ್ನು ಮುರಿದುಕೊಂಡಿದ್ದೇವೆ ಎಂದ ವೈಷ್ಣವಿ ಗೌಡ

ವಿದ್ಯಾಭರಣ್ ವಿರುದ್ಧ ಹೆಸರು ಹೇಳದ ನಟಿಯೊಬ್ಬರು ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ನಟಿ ವೈಷ್ಣವಿ ಗೌಡ ನಿಶ್ವಿತಾರ್ಥ ವಿಷಯವನ್ನು ಇಲ್ಲಿಗೆ ಬಿಡಿ ಎಂದು ಪೋಸ್ಟ್ ಮಾಡಿದ್ದಾರೆ.
sowmya malnad
ಇತ್ತೀಚೆಗೆ ಅಗ್ನಿಸಾಕ್ಷಿ ಹಾಗೂ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರು ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೊಗಳು ವೈರಲ್ ಆಗಿದ್ದವು.
ವಿದ್ಯಾಭರಣ್ ಅನ್ನೋ ನಟನ ಜೊತೆ ಸಪ್ತಪದಿ ತುಳಿಯಲಿದ್ದಾರೆ ಅನ್ನೋ ಮಾತು ಹರಿದಾಡಿದ್ದವು.
ಬಳಿಕ ವೈಷ್ಣವಿ ಗೌಡ ತಾವು ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡೂ ಮನೆಯವರು ಮಾತುಕತೆ ಬಂದಿದ್ದರು ಎಂದು ಸ್ಪಷ್ಣನೆ ನೀಡಿದ್ದರು.
ಇದೀಗ ವಿದ್ಯಾಭರಣ್ ವಿರುದ್ಧ ಹೆಸರು ಹೇಳದ ನಟಿಯೊಬ್ಬರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈಷ್ಣವಿ ಗೌಡ ಪೋಸ್ಟ್ ಮಾಡಿದ್ದಾರೆ.
ನಾವು ಈ ಸಂಬಂಧವನ್ನು ಮುರಿದುಕೊಂಡಿದ್ದೇವೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮೂಲಕ ಅಗ್ನಿಸಾಕ್ಷಿ ಖ್ಯಾತಿ ವೈಷ್ಣವಿ ಗೌಡ ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
More