Tap to Read ➤

ಆರ್ಯವರ್ಧನ್ ಗುರೂಜಿ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಈ ವಾರ ಮುಕ್ತಾಯವಾಗಲಿದ್ದು, ಸೋಮವಾರ ಮಧ್ಯರಾತ್ರಿ ನಡೆದ ಎಲಿಮಿನೇಷನ್‍ನಲ್ಲಿ ಆರ್ಯವರ್ಧನ್ ಗುರೂಜಿ ದೊಡ್ಮನೆಯಿಂದ ಹೊರಬಂದಿದ್ದಾರೆ.
sowmya malnad
ಫೋಟೋ ಕ್ರೆಡಿಟ್: ಕಲರ್ಸ್ ಕನ್ನಡ
ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಹೊರಬಂದಿದ್ದಾರೆ.
ಮಿಡ್‍ನೈಟ್‍ ಎಲಿಮಿನೇಷನ್‍ನಲ್ಲಿ ಆರ್ಯವರ್ಧನ್ ಗುರೂಜಿ ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಯಾವಾಗಲೂ 'ನಂಬರ್ ಅಂದ್ರೆ ನಾನು, ನಾನು ಅಂದ್ರೆ ನಂಬರ್' ಅಂತಿದ್ದ ಗುರೂಜಿ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದ 6 ಜನರ ಪೈಕಿ ಒಬ್ಬರ ಹೊರಹೋಗುವುದು ಅನಿವಾರ್ಯವಾಗಿತ್ತು.
ಅದರಂತೆ ಸೋಮವಾರ ಮಧ್ಯರಾತ್ರಿ ಎಲಿಮಿನೇಷನ್‍ನಲ್ಲಿ ಗುರೂಜಿ ಔಟ್ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದ್ದು, ಇದೆ ಶುಕ್ರವಾರ ಮತ್ತು ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ದಿವ್ಯ ಉರುಡುಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಉಳಿದುಕೊಂಡಿದ್ದಾರೆ.
More