Tap to Read ➤

ತಮಿಳು ಚಿತ್ರರಂಗಕ್ಕೆ ಹಾರಿದ ಆಶಿಕಾ ರಂಗನಾಥ್

ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್, ಇದೀಗ ತಮ್ಮ ನೆಚ್ಚಿನ ನಟನ ಜತೆಗೆ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದರ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
sowmya malnad
ನಟಿ ಆಶಿಕಾ ರಂಗನಾಥ್, ಇದೀಗ ತಮ್ಮ ನೆಚ್ಚಿನ ನಟನ ಜತೆಗೆ ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.
ನಟ ಸಿದ್ಧಾರ್ಥ್ ಅಭಿನಯದ ಮುಂದಿನ ತಮಿಳು ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ ಇನ್ನೂ ಸಹ ಶೀರ್ಷಿಕೆಯನ್ನು ಇಟ್ಟಿಲ್ಲ. ಪ್ರೊಡಕ್ಷನ್ ನಂಬರ್ 1 ಎಂಬ ತಾತ್ಕಾಲಿಕ ಶೀರ್ಷಿಕೆ ಅಡಿಯಲ್ಲಿ ಚೆನ್ನೈನಲ್ಲಿ ಚಿತ್ರದ ಮುಹೂರ್ತ ಸಮಾರಂಭವನ್ನು ನಡೆಸಲಾಗಿದೆ.
ಈ ಕಾರ್ಯಕ್ರಮದ ಫೋಟೊಗಳನ್ನು ಆಶಿಕಾ ರಂಗನಾಥ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಆಶಿಕಾ ರಂಗನಾಥ್ ಕಳೆದ ವರ್ಷ ಬಿಡುಗಡೆಯಾಗಿದ್ದ ಮದಗಜ ಚಿತ್ರಕ್ಕಾಗಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಆಶಿಕಾ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದು, ಬಳಿಕ ಮಾಸ್ ಲೀಡರ್ ಚಿತ್ರದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು.
ಈ ಎರಡೂ ಸಿನಿಮಾಗಳಲ್ಲಿಯೂ ಸಿಗದ ಐಡೆಂಟಿಟಿಯನ್ನು ಆಶಿಕಾಗೆ ತಂದುಕೊಟ್ಟದ್ದು ಗಣೇಶ್ ಅಭಿನಯದ ಮುಗುಳುನಗೆ ಚಿತ್ರ.
ಮುಗುಳುನಗೆ ಚಿತ್ರದ ಮೂಲಕ ಫೇಮ್ ಗಿಟ್ಟಿಸಿಕೊಂಡ ಆಶಿಕಾ, ರ‍್ಯಾಂಬೋ 2 ಚಿತ್ರದ ಮೂಲಕ ಚೊಚ್ಚಲ ಶತದಿನೋತ್ಸವದ ಅನುಭವವನ್ನು ಪಡೆದಿದ್ದರು.
More