Tap to Read ➤

ಬಿಬಿಕೆ 9: ಇಬ್ಬರು ಫೈನಲಿಸ್ಟ್ ಹೆಸರು ಘೋಷಿಸಿದ ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಮುಕ್ತಾಯದ ಹಂತ ತಲುಪಿದ್ದು, ಇದೆ ಶುಕ್ರವಾರ ಮತ್ತು ಶನಿವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಮಧ್ಯೆ ಕಿಚ್ಚ ಸುದೀಪ್ ಇಬ್ಬರು ಫೈನಲಿಸ್ಟ್ ಹೆಸರನ್ನು ಘೋಷಣೆ ಮಾಡಿದ್ದಾರೆ.
sowmya malnad
ಫೋಟೋ ಕ್ರೆಡಿಟ್: ಕಲರ್ಸ್ ಕನ್ನಡ
ಬಿಗ್ ಬಾಸ್ ಕನ್ನಡ ಸೀಸನ್ 9 ಕಾರ್ಯಕ್ರಮ ಈ ವಾರ ಮುಕ್ತಾಯವಾಗಲಿದ್ದು, ಯಾರು ವಿನ್ನರ್ ಆಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
13ನೇ ವಾರ ಅರುಣ್ ಸಾಗರ್ ಹಾಗೂ ಅಮೂಲ್ಯ ಗೌಡ ಮನೆಯಿಂದ ಹೊರಹೋಗಿದ್ದು, 6 ಮಂದಿ ಉಳಿದಿದ್ದಾರೆ.
ಇವರ ಪೈಕಿ ಇಬ್ಬರು ಫೈನಲಿಸ್ಟ್ ಹೆಸರನ್ನು ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ.
ಅದರಂತೆ ಓಟಿಟಿಯಿಂದ ಬಿಗ್ ಬಾಸ್ ಕನ್ನಡ ಸೀಸನ್ 9ಗೆ ಕಾಲಿಟ್ಟಿದ್ದ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಫೈನಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಓಟಿಟಿ ಸೀಸನ್ ನಿಂದಲೂ ಬಹಳ ಚೆನ್ನಾಗಿ ಆತ ಆಡಿಕೊಂಡು ಬರುತ್ತಿದ್ದರು.
ಫೈನಲ್ ಗೆ ಹೋಗುವ ಇನ್ನುಳಿದ ಮೂವರು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.
More