Tap to Read ➤

ಬಿಗ್ ಬಾಸ್ ಕನ್ನಡದ ಫೇಮಸ್ ಜೋಡಿಗಳು ಇವರು..!

'ಬಿಗ್ ಬಾಸ್' ಕಾರ್ಯಕ್ರಮವನ್ನು ಗಮನಿಸಿ ಪ್ರತಿ ಸೀಸನ್​ನಲ್ಲಿಯೂ ಒಂದು ಪ್ರೇಮ ಪ್ರಸಂಗಗಳು ಇದ್ದೇ ಇರುತ್ತದೆ. ಪ್ರತಿ ಬಿಗ್ ಸೀಸನ್​ನಲ್ಲಿ ಪ್ರೇಮಿಗಳು ಹುಟ್ಟಿಕೊಳ್ಳುತ್ತಾರೆ. ಬಿಗ್ ಬಾಸ್ ಕನ್ನಡದ ಪಾಪ್ಯುಲರ್ ಜೋಡಿಗಳ ವಿವರ ಇಲ್ಲಿದೆ.
sowmya malnad
ಬಿಗ್ ಬಾಸ್ ಕನ್ನಡ ಸೀಸನ್ ಒಂದರ ಜೋಡಿ ಹಕ್ಕಿಗಳು ತಿಲಕ್ ಹಾಗೂ ಶ್ವೇತ ಪಂಡಿತ್. ಇವರಿಬ್ಬರು ತುಂಬ ಕ್ಲೋಸ್ ಆಗಿದ್ದರು.
ಮೊದಲ ಸೀಸನ್​ನಲ್ಲಿ ನಡೆದ ಪ್ರೇಮ ಪ್ರಸಂಗಗಳು ಎರಡನೇ ಸೀಸನ್​ನಲ್ಲಿಯೂ ಮುಂದುವರೆದಿತ್ತು. ಎರಡನೇ ಸೀಸನ್​ನಲ್ಲಿ ನಟಿ ನೀತು ಹಾಗೂ ನಟ ಆದಿ ಲೋಕೇಶ್ ಪ್ರೇಮ ಪಕ್ಷಿಗಳಾಗಿ ಕಾಣಿಸಿಕೊಂಡಿದ್ದರು.
ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಿದಂತೆ ನಟಿ ಪೂಜಾ ಗಾಂಧಿ ಬಿಗ್ ಬಾಸ್ ಸೀಸನ್ 3ಕ್ಕೆ ಬಂದರು. ಈ ವೇಳೆ ಪೂಜಾ ಗಾಂಧಿ ಹಾಗೂ ಅಯ್ಯಪ್ಪ ಪ್ರೇಮಿಗಳ ಹಾಗೆ ಕಾಣಿಸಿಕೊಂಡಿದ್ದರು.
ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸಂಜನಾ ಮತ್ತು ಭುವನ್ ಪೊನ್ನಣ್ಣ ತುಂಬಾ ಹತ್ತಿರವಾಗಿದ್ದರು.
ಬಿಗ್ ಬಾಸ್ ಸೀಸನ್ 5ರಲ್ಲಿ ಚಂದನ್ ಹಾಗೂ ನಿವೇದಿತಾ ತುಂಬಾ ಹತ್ತಿರವಾಗಿದ್ದರು. ಸದ್ಯ ಚಂದನ್ ಮತ್ತು ನಿವೇದಿತಾ ಮದುವೆಯಾಗಿದ್ದಾರೆ.
ಬಿಗ್ ಬಾಸ್ ಸೀಸನ್ 6ರಲ್ಲಿ ಹೆಚ್ಚು ಗಮನ ಸೆಳೆದ ಜೋಡಿಗಳು ಶಶಿಕುಮಾರ್ ಹಾಗೂ ಕವಿತಾ ಗೌಡ.
ಬಿಗ್ ಬಾಸ್ ಸೀಸನ್ 7ರಲ್ಲಿ ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಜೋಡಿ ಹೆಚ್ಚು ಸದ್ದು ಮಾಡಿತ್ತು. ಈ ಸೀಸನ್​ನಲ್ಲಿ ಶೈನ್ ಶೆಟ್ಟಿ ವಿಜೇತರಾಗಿದ್ದರು.
ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯ ಉರುಡುಗ ಹಾಗೂ ಅರವಿಂದ್ ಕೆ.ಪಿ ಜೋಡಿಗಳಾಗಿದ್ದು, ಇವರಿಬ್ಬರು ಈಗಲೂ ಜೊತೆಯಾಗಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯಾ ಸುರೇಶ್-ಮಂಜು ಪಾವಗಡ ಕೂಡ ಜೋಡಿ ಹಕ್ಕಿಗಳಾಗಿ ಕಾಣಿಸಿಕೊಂಡಿದ್ದರು.
ಇನ್ನು ಬಿಗ್ ಬಾಸ್ ಓಟಿಟಿ ಸೀಸನ್​ನಲ್ಲಿ ರಾಕೇಶ್ ಅಡಿಗ ಹಾಗೂ ಸೋನು ಶ್ರೀನಿವಾಸ್ ಗೌಡ ಜೋಡಿಯಾಗಿ ಕಾಣಿಸಿಕೊಂಡಿದ್ದರು.
ಸದ್ಯ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 9ರಲ್ಲಿ ಸಾನ್ಯ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಜೋಡಿಯಾಗಿ ಸುದ್ದಿಯಾಗಿದ್ದಾರೆ.