Tap to Read ➤

ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಕನ್ನಡ ಓಟಿಟಿ ಲವ್ ಬರ್ಡ್ಸ್

ಬಿಗ್ ಬಾಸ್ ಓಟಿಟಿ ಸ್ಪರ್ಧಿಗಳಾದ ನಂದಿನಿ (ನಂದು) ಮತ್ತು ಜಶ್ವಂತ್ ಬೋಪಣ್ಣ ಬ್ರೇಕಪ್ ಮಾಡಿಕೊಂಡಿದ್ದಾರೆ. ಬ್ರೇಕಪ್ ಕುರಿತು ನಂದು ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದಾರೆ.
sowmya malnad
ಬಿಗ್ ಬಾಸ್ ಓಟಿಟಿಗೆ ಲವ್ ಬರ್ಡ್ಸ್ ಆಗಿ ನಂದಿನಿ (ನಂದು) ಮತ್ತು ಜಶ್ವಂತ್ ಬೋಪಣ್ಣ ಎಂಟ್ರಿಕೊಟ್ಟಿದ್ದರು.
ದೊಡ್ಮನೆಯಲ್ಲಿ ಸಾನ್ಯ ಅಯ್ಯರ್ ಸ್ನೇಹದಿಂದ ಒಮ್ಮೆ ನಂದು ಮತ್ತು ಜಶ್ ನಡುವೆ ಬಿರುಕು ಉಂಟಾಗಿತ್ತು.
ಬಳಿಕ ಎಲ್ಲವೂ ಸರಿಹೋಗಿತ್ತು. ಆದ್ರೀಗ ಶೋ ಮುಗಿದ ಮೇಲೆ ನಂದು ಮತ್ತು ಜಶ್ವಂತ್ ಬ್ರೇಕಪ್ ಮಾಡಿಕೊಂಡಿದ್ದಾರೆ.
ಬ್ರೇಕಪ್ ಕುರಿತು ನಂದು ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದಾರೆ.
ಜಶ್ವಂತ್ ಮತ್ತು ನಂದಿನಿ ಹಿಂದಿ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ರೋಡೀಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ನಂದಿನಿ ವಿನ್ನರ್ ಟ್ರೋಫಿ ಗಿಟ್ಟಿಸಿಕೊಂಡು ಬಂದರು. ಅಲ್ಲಿಂದ ಸ್ನೇಹಿತರಾಗಿ, ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರಂತೆ.
ಇವರಿಬ್ಬರನ್ನು ಒಬ್ಬ ಸ್ಪರ್ಧಿಯಾಗಿ ಪರಿಗಣಿಸಿ ಓಟಿಟಿ ಎಂಟ್ರಿ ನೀಡಲಾಗಿತ್ತು.
ಕಡಿಮೆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು ಆದರೆ ಅಷ್ಟೇ ಬೇಗ ಹೊರ ಬಂದರು.
More