Tap to Read ➤

ಈ ವಾರ ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾಗಳಿವು

ಒಟಿಟಿ ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ನೀಡುತ್ತಿದ್ದು, ಈ ವಾರ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
sowmya malnad
ಪುನೀತ್ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ 'ಲಕ್ಕಿ ಮ್ಯಾನ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ.
ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಟನೆಯ ಗಾಳಿಪಟ 2 ಚಿತ್ರ ಜೀ 5ನಲ್ಲಿ ಬಿಡುಗಡೆಯಾಗಿದೆ.
ತೆಲುಗಿನ ಸೂಪರ್ ಹಿಟ್ ಸಿನಿಮಾ 'ಕಾರ್ತಿಕೇಯ 2' ಜೀ 5ನಲ್ಲಿ ತೆರೆಗೆ ಬಂದಿದೆ. ಐದು ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
'ದೊಂಗಲುನ್ನಾರು ಜಾಗೃತ' ತೆಲುಗು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ.
'ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ' ಸಿನಿಮಾ ಸಹ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು, ಈ ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದೆ.
ಮಲಯಾಳಂನ ಕ್ರೈಂ ಥ್ರಿಲ್ಲರ್ 'ಈಶೋ' ಸೋನಿಯಲ್ಲಿ ಬಿಡುಗಡೆ ಆಗಿದೆ.
ಇಬ್ಬರು ಹೀರೋಗಳ ನಡುವಿನ ಕಾದಾಟದ ಕತೆ ಹೊಂದಿರುವ 'ಒರು ತೆಕ್ಕನ್ ತಲ್ಲು ಕೇಸ್' (ಮಲಯಾಳಂ) ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿದೆ.
ಕೊಲೆ, ಗ್ಯಾಂಗ್‌ಸ್ಟರ್, ತನಿಖೆ ವಿಷಯಗಳನ್ನು ಆಧರಿಸಿದ 'ಒಟ್ಟು' ಮಲಯಾಳಂ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.
ಅಕ್ಷಯ್ ಕುಮಾರ್ ನಟಿಸಿದ್ದ ಸಿನಿಮಾ 'ರಕ್ಷಾ ಬಂಧನ್' ಈ ವಾರ ಜೀ5 ನಲ್ಲಿ ತೆರೆಗೆ ಬಂದಿದೆ.
ಆಮಿರ್ ಖಾನ್ ರ ಮಹಾತ್ವಾಕಾಂಕ್ಷೆಯ ಸಿನಿಮಾ 'ಲಾಲ್ ಸಿಂಗ್ ಚಡ್ಡ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ.
ಮಾಧುರಿ ದೀಕ್ಷಿತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಸ್ಯಮಯ ಕೌಟುಂಬಿಕ ಸಿನಿಮಾ 'ಮಜಾ ಮಾ' ಅಮೆಜಾನ್ ಪ್ರೈಂನಲ್ಲಿ ತೆರೆಗೆ ಬಂದಿದೆ.