Tap to Read ➤

ಬಾಲಿವುಡ್‌ಗೆ ಹೆಚ್ಚುತ್ತಿದೆ ಪೌರಾಣಿಕ, ಐತಿಹಾಸಿಕ ಕತೆಗಳ ಮೇಲೆ ಒಲವು

ಹಠಾತ್ತನೆ ಪೌರಾಣಿಕ ಕತೆಗಳ ಮೇಲೆ ಬಾಲಿವುಡ್‌ಗೆ ಪ್ರೀತಿ ಹೆಚ್ಚಾಗಿದ್ದು, ಸಾಲು-ಸಾಲು ಪೌರಾಣಿಕ ಕತೆಗಳನ್ನು ಸಿನಿಮಾ ಮಾಡಲಾಗುತ್ತಿದೆ.
sowmya malnad
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಓಂ ರಾವತ್ ನಿರ್ದೇಶನದ 'ರಾಮಾಯಣ' ಕತೆಯನ್ನು ಆಧರಿಸಿ ಮಾಡಲಾದ 'ಆದಿಪುರುಷ್' ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ನಾಯಕ ನಟ ಪ್ರಭಾಸ್ ಆಗಿದ್ದರೂ ಇದು ಬಾಲಿವುಡ್ ಸಿನಿಮಾ ಎಂದೇ ಪರಿಗಣಿತವಾಗಿದೆ. ಸಿನಿಮಾದಲ್ಲಿ ಕೃತಿ ಸೆನನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಸೀತಾ ಮಾತೆಯ ಪಾತ್ರವೊಂದನ್ನೇ ಆಧರಿಸಿ 'ಸೀತಾ' ಹೆಸರಿನ ಸಿನಿಮಾ ಹಿಂದಿಯಲ್ಲಿ ಬರಲಿದೆ. ಸಿನಿಮಾಕ್ಕಾಗಿ ಕರೀನಾ ಕಪೂರ್ ಅನ್ನು ಕೇಳಲಾಗಿತ್ತಂತೆ. ಆದರೆ ಆಕೆಯ ಸಂಭಾವನೆ ಸಿನಿಮಾ ಬಜೆಟ್‌ಗೆ ಹೊಂದಾಣಿಕೆ ಆಗದ ಕಾರಣ ಈಗ ಕಂಗನಾರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ರಾಮಾಯಣದ ರಾಮ ಸೇತು ಬಗೆಗಿನ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ನಟ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್, ನುಸ್ರತ್ ಬರೂಚಾ, ಸತ್ಯದೇವ್ ಕಂಚನಾರ ಸಹ ಇದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಪೌರಾಣಿಕ ಕತೆಗಳ ಅದ್ಭುತ ಯೋಧ 'ಅಶ್ವತ್ಥಾಮ'ನ ಕುರಿತಾದ ಕತೆಯನ್ನು ಸಿನಿಮಾ ಮಾಡಲು ಸಹ ಬಾಲಿವುಡ್‌ನಲ್ಲಿ ಯತ್ನಿಸಲಾಗುತ್ತಿದೆ. ಧರ್ಮಾ ಪ್ರೊಡಕ್ಷನ್‌ ನವರು ಅಶ್ವತ್ಥಾಮ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಟೈಗರ್ ಶ್ರಾಫ್ ಅಶ್ವತ್ಥಾಮನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಐತಿಹಾಸಿಕ ಕತೆಯನ್ನು ಒಳಗೊಂಡ 'ಛತ್ರಪತಿ ಶಿವಾಜಿ' ಸಿನಿಮಾ ಹಿಂದಿ ಹಾಗೂ ಮರಾಠಿಯಲ್ಲಿ ತೆರೆಗೆ ಬರಲಿದೆ. ರಿತೇಶ್ ದೇಶ್‌ಮುಖ್, 'ಛತ್ರಪತಿ ಶಿವಾಜಿ' ಪಾತ್ರದಲ್ಲಿ ನಟಿಸಲಿದ್ದಾರೆ. ಛತ್ರಪತಿ ಶಿವಾಜಿಯ ಜೀವನ ಸಾಧನೆಗಳ ಕುರಿತ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಮಹಾಭಾರತ ಸಿನಿಮಾವನ್ನು ಬಾಲಿವುಡ್‌ನಲ್ಲಿ ನಿರ್ಮಾಣ ಮಾಡಬೇಕು ಎಂಬ ಚರ್ಚೆ ಬಹು ದಿನಗಳಿಂದಲೂ ನಡೆಯುತ್ತಲೇ ಇದೆ. ಆಮಿರ್ ಖಾನ್ ಕೃಷ್ಣ, ಹೃತಿಕ್ ರೋಷನ್ ಅರ್ಜುನ, ದೀಪಿಕಾ ಪಡುಕೋಣೆ ದ್ರೌಪದಿ ಹೀಗೆ ಹಲವು ಪಾತ್ರಗಳಿಗೆ ನಟರನ್ನು ಸಹ ಗುರುತು ಮಾಡಲಾಗಿತ್ತು. ಆದರೆ ಈವರೆಗೆ ಸಿನಿಮಾ ಸೆಟ್ಟೇರಿಲ್ಲ.
more details