Tap to Read ➤

ಬಾಲನಟನಾಗಿ ಪುನೀತ್ ರಾಜಕುಮಾರ್ ನಟಿಸಿದ ಎಲ್ಲಾ ಚಲನಚಿತ್ರಗಳು

ಮಾಸ್ಟರ್ ಲೋಹಿತ್ ಹೆಸರಿನಿಂದ ಪುನೀತ್ ಬಾಲನಟನಾಗಿ ನಟಿಸಿದ 14 ಚಿತ್ರಗಳು ಇಲ್ಲಿವೆ.
ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಪ್ರೇಮದ ಕಾಣಿಕೆ' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಆರತಿ ಮತ್ತು ಜಯಮಾಲಾ ನಾಯಕಿಯಾಗಿ ನಟಿಸಿದ್ದರು. ಆರು ತಿಂಗಳ ಮಗುವಿದ್ದ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳೆ ತೆರೆ ಮೇಲೆ ಕಾಣಿಸಿಕೊಂಡರು.
Created by potrace 1.15, written by Peter Selinger 2001-2017
ಪ್ರೇಮದ ಕಾಣಿಕೆ (1976)
ವಿಜಯ್ ನಿರ್ದೇಶನದಲ್ಲಿ ಮೂಡಿಬಂದ 'ಸನಾದಿ ಅಪ್ಪಣ್ಣ' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಜಯಪ್ರದಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಹಾಡೊಂದರಲ್ಲಿ ನಟಿಸುವ ಪುನೀತ್ ರಾಜಕುಮಾರ್ ಡಾ.ರಾಜ್ ಪುತ್ರನಾಗಿ ಕಾಣಿಸಿಕೊಂಡಿದ್ದರು.
Created by potrace 1.15, written by Peter Selinger 2001-2017
ಸನಾದಿ ಅಪ್ಪಣ್ಣ (1977)
ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಪದ್ಮಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಪುನೀತ್ ರಾಜ್ ರ ಬಾಲ್ಯದ ಪಾತ್ರದಲ್ಲಿ ನಟಿಸಿದ್ದರು.
ತಾಯಿಗೆ ತಕ್ಕ ಮಗ (1978)
ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ವಸಂತ ಗೀತಾ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಡಾ. ರಾಜ್ ಪುತ್ರನ ಪಾತ್ರದಲ್ಲಿ ನಟಿಸಿದ್ದರು.
ವಸಂತ ಗೀತ (1980)
ಭೂಮಿಗೆ ಬಂದ ಭಗವಂತ' ಚಿತ್ರದಲ್ಲಿ ಲೋಕೇಶ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದರು.
ಭೂಮಿಗೆ ಬಂದ ಭಗವಂತ (1981)
ಭಾಗ್ಯವಂತ ( 1981)
'ಭಾಗ್ಯವಂತ' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಜೊತೆ ಡಾ. ರಾಜಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಎಲ್ಲರಿಂದ ನತದೃಷ್ಟ ಎಂದು ಕರೆಯಿಸಿಕೊಳ್ಳುವ ಕೃಷ್ಣ ಮುಂದೆ ಮನೆ ಬಿಟ್ಟು ಹಿಮಾಲಯಕ್ಕೆ ಹೋಗುತ್ತಾನೆ.
ಹೊಸಬೆಳಕು (1982)
'ಹೊಸ ಬೆಳಕು' ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಸರಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ರಾಜ್ ಅಕ್ಕನ ಮಗನ ಪಾತ್ರದಲ್ಲಿ ನಟಿಸಿದ್ದರು.
ಚಲಿಸುವ ಮೋಡಗಳು (1982)
ಈ ಚಿತ್ರದಲ್ಲಿ ಪುನೀತ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಾಗೇ ಕಾಣದಂತೆ ಮಾಯವಾದನು' ಎಂಬ ಗೀತೆಯನ್ನುಹಾಡಿದ್ದರು. ಈ ಚಿತ್ರದ ನಟನೆಗಾಗಿ ಪುನೀತ್ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ' ಪ್ರಶಸ್ತಿ ಪಡೆದರು.
ಭಕ್ತ ಪ್ರಹ್ಲಾದ (1983)
ಪುನೀತ್ ರಾಜಕುಮಾರ್ ಭಕ್ತ ಪ್ರಹ್ಲಾದನ ಪಾತ್ರದಲ್ಲಿ ನಟಿಸಿದ್ದರು. ತನ್ನ ತಂದೆಯ ವಿರೋಧದ ನಡುವೆಯೇ ಶ್ರೀಹರಿಯನ್ನು ಅನಂತವಾಗಿ ಭಜಿಸುವ ಪ್ರಹ್ಲಾದನ ಪಾತ್ರದಲ್ಲಿ ಪುನೀತ್ ಅದ್ಭುತ ಅಭಿನಯ ನೀಡಿದ್ದರು.
ಎರಡು ನಕ್ಷತ್ರಗಳು (1983)
ಪುನೀತ್ ರಾಜಕುಮಾರ್ ದ್ವಿಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಐದು ಗೀತೆಗಳಲ್ಲಿ ಮೂರು ಗೀತೆಗಳನ್ನು ಪುನೀತ್ ಹಾಡಿದ್ದು, ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದರು.
ಯಾರಿವನು (1984)
ಈ ಚಿತ್ರದಲ್ಲಿ ಪುನೀತ್, ಡಾ. ರಾಜಕುಮಾರ್, ರೂಪಾ ದೇವಿ ಮತ್ತು ಸರೋಜಾದೇವಿ ನಟಿಸಿದ್ದರು. ಶ್ರೀನಾಥ್ ಖಳನಾಯಕನಾಗಿ ನಟಿಸಿದ್ದ ಈ ಚಿತ್ರದಲ್ಲಿ ಪುನೀತ್ ಸರೋಜಾದೇವಿ' ಪುತ್ರನಾಗಿ ನಟಿಸಿದ್ದರು.
ಶಾಲಾ ಬಾಲಕನೊಬ್ಬ ಮನೆಯ ಕಷ್ಟಕ್ಕೆ ಸ್ಪಂದಿಸಿ ತನ್ನ ವಿಧ್ಯಾಭ್ಯಾಸವನ್ನು ನಿಲ್ಲಿಸಿ ಹಣಕ್ಕಾಗಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ತೊಡುಗುತ್ತಾನೆ. ಈ ಚಿತ್ರದ ನಟನೆಗಾಗಿ ಪುನೀತ್ ರಾಷ್ಟ್ರ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.
ಬೆಟ್ಟದ ಹೂವು (1985)
Created by potrace 1.15, written by Peter Selinger 2001-2017
ಶಿವ ಮೆಚ್ಚಿದ ಕಣ್ಣಪ್ಪ (1988)
ಮೊದಲ ಬಾರಿಗೆ ಪುನೀತ್, ಶಿವಣ್ಣ ನಟಿಸಿದ್ದ ಶಿವ ಮೆಚ್ಚಿದ ಕಣ್ಣಪ್ಪ' ಚಿತ್ರದಲ್ಲಿ ನಟಿಸಿದ್ದರು. ಶಿವಣ್ಣನ ಬಾಲ್ಯದ ಪಾತ್ರದಲ್ಲಿ ಅಪ್ಪು ನಟಿಸಿದ್ದರು.
ಡಾ. ರಾಜಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಪರಶುರಾಮ್' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅಪ್ಪು' ಎಂಬ ಯುವಕನ ಪಾತ್ರದಲ್ಲಿ ನಟಿಸಿದ್ದರು.
Created by potrace 1.15, written by Peter Selinger 2001-2017
ಪರಶುರಾಮ್ (1989)